ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯಾವಾಟಿಕೆ: ಭೋಜಪುರಿ ನಟಿ ರಕ್ಷಣೆ

Last Updated 27 ನವೆಂಬರ್ 2014, 19:45 IST
ಅಕ್ಷರ ಗಾತ್ರ

ಬೆಂಗಳೂರು: ಅಮರಜ್ಯೋತಿ ಲೇಔಟ್‌ ಬಳಿಯ ಪೇಯಿಂಗ್‌ ಗೆಸ್ಟ್‌ ಕಟ್ಟಡವೊಂದರ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ  ತೊಡಗಿದ್ದ ಭೋಜ ಪುರಿ ನಟಿ ಸೇರಿದಂತೆ ಇಬ್ಬರು ಯುವತಿಯರನ್ನು ಏರ್‌ಪೋರ್ಟ್ ಪೊಲೀಸರು ರಕ್ಷಿಸಿ­ದ್ದಾರೆ. ಪ್ರಕರಣ ಸಂಬಂಧ ಕಟ್ಟಡದ ಸಹಾಯಕ ವಿನಯ್‌ಕುಮಾರ್‌ ಎಂಬಾ­ತನನ್ನು ಬಂಧಿಸಲಾಗಿದೆ. ಕಟ್ಟಡದ ಮಾಲೀಕ ವಿಜಯ್‌ಕುಮಾರ್‌ ತಲೆಮರೆಸಿ­ಕೊಂಡಿದ್ದಾನೆ.

  ಆರೋಪಿಗಳು, ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ಕರೆತಂದು ಪೇಯಿಂಗ್‌ ಗೆಸ್ಟ್‌ ಕಟ್ಟಡದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ಪಂಜಾಬ್‌ ಮೂಲದ ಯುವತಿ ಭೋಜಪುರಿ ಸಿನಿಮಾಗಳಲ್ಲಿ ನಟಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT