ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯಾವಾಟಿಕೆ ಮತ್ತು ಸೋಗಲಾಡಿತನ

Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವೇಶ್ಯಾವಾಟಿಕೆಗೆ ಕಾನೂನಿನ ರಕ್ಷಣೆ ನೀಡ­ಬೇಕು ಎಂಬ ಕೆಲ ಪ್ರಜ್ಞಾವಂತರ ಸದು­ದ್ದೇಶದ ಸಲಹೆಗಳನ್ನು, ವೇಶ್ಯಾವಾಟಿಕೆಗೆ ಪ್ರೋತ್ಸಾಹ ನೀಡುವುದು ಎಂದು ಕೆಲವರು ತಪ್ಪಾಗಿ ಅರ್ಥೈಸು­ತ್ತಿರುವುದು ದುರದೃಷ್ಟಕರ ಸಂಗತಿ.
ವೇಶ್ಯಾವಾ­ಟಿ­ಕೆಗೆ ಪ್ರೋತ್ಸಾಹ ನೀಡದಿ­ರುವುದು, ಆ ನರಕದಲ್ಲಿ ಸಿಕ್ಕಿಹಾಕಿಕೊಂಡಿರು­ವ­ವರನ್ನು ಹೊರಗೆ ತರಲು ಯತ್ನಿಸುವುದು ಮತ್ತು ಇನ್ನೂ ಮುಖ್ಯವಾಗಿ ಹೆಣ್ಣು­­ಮಕ್ಕಳನ್ನು ಮೋಸ­ಗೊಳಿಸಿಯೋ, ಬಲ­ವಂತದಿಂದಲೋ ಅಲ್ಲಿಗೆ ಸೇರಿಸುವುದನ್ನು ತಡೆ­ಯಲು ಗಂಭೀರ ಪ್ರಯತ್ನ ಮಾಡ­ಬೇಕಾದುದು ಒಂದು ಭಾಗ (ಹೆಣ್ಣು­ಮಕ್ಕಳ ಕಣ್ಮರೆ ಪ್ರಕರಣ­ಗಳಿಗೂ ವೇಶ್ಯಾವೃತ್ತಿಗೂ ನೇರ ಸಂಬಂಧವಿದ್ದು ಇಂದಿಗೂ ಯಾವ ಸರ್ಕಾ-­ರವೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ).

ಲೈಂಗಿಕ ವೃತ್ತಿಯಲ್ಲಿ ತೊಡಗಿರುವವರ ಸಾಂವಿ­ಧಾನಿಕ ಮತ್ತು ಮಾನವಹಕ್ಕುಗಳನ್ನು ಗೌರ­ವಿ­ಸು­ವುದು, ಅದರಲ್ಲಿ ತೊಡಗಿಕೊಂಡಿ­ರು­ವ­ರನ್ನು ಕಾನೂ­ನಿನ ರಕ್ಷಣೆಯ ಮೂಲಕ ತಲೆ­ಹಿಡುಕರು ಮತ್ತು ಪೊಲೀಸರ ವಿಪರೀತ ಶೋಷ­ಣೆ­ಯಿಂದ ಕಾಪಾಡುವುದು ಇನ್ನೊಂದು ಭಾಗ.

ವೇಶ್ಯಾವೃತ್ತಿಯನ್ನು ಕಾನೂನು ವ್ಯಾಪ್ತಿಗೆ ತಂದಾಗ ಏಡ್ಸ್‍ ಮತ್ತಿತರ ಲೈಂಗಿಕ ರೋಗಗಳು ಹರಡದಂತೆ ಅವರಿಗೆ ಆರೋಗ್ಯ ರಕ್ಷಣೆ ಒದಗಿಸುವುದೂ ಹೆಚ್ಚು ಸುಲಭ­ವಾಗುತ್ತದೆ. ವೇಶ್ಯಾವೃತ್ತಿಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ ಮತ್ತು ಅದನ್ನು ಸಂಪೂರ್ಣ ನಿಲ್ಲಿಸುವುದು ಎಂದೆಂದಿಗೂ ಸಾಧ್ಯ ಇಲ್ಲ ಎಂಬ ವಾಸ್ತವ ಗೊತ್ತಿದ್ದೂ ಇಡೀ ಸಮಾಜವೇ ಈ ವಿಚಾರದಲ್ಲಿ ತೀರಾ ಸೋಗಲಾಡಿತನದಿಂದ ವರ್ತಿಸುತ್ತಿದೆ ಯೇನೋ ಎಂದು ಭಾಸವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT