ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದಿಕಶಾಹಿ ಕೈವಶವಾದ ಪ್ರದರ್ಶನ ಕಲೆಗಳು

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌
Last Updated 4 ಮಾರ್ಚ್ 2015, 19:53 IST
ಅಕ್ಷರ ಗಾತ್ರ

ಬೆಂಗಳೂರು:  ‘ತಳಸಮುದಾಯಗಳ ಪ್ರದರ್ಶನ ಕಲೆಗಳ ಮೇಲೆ ವೈದಿಕ­ಶಾಹಿಯು ಅಧಿಪತ್ಯ ಸ್ಥಾಪಿಸಿದ ಕಾರಣ ಕೆಳವರ್ಗದರು ಭಿಕ್ಷುಕ ವೃತ್ತಿಯ ಕಲೆಗಳಿಗೆ ತಳ್ಳಲ್ಪಟ್ಟರು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌ ಅಭಿಪ್ರಾಯಪಟ್ಟರು.

ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಮತ್ತು ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ತಳಸಮುದಾಯಗಳ ಸಂಸ್ಕೃತಿ ಮತ್ತು ಪ್ರದರ್ಶನ ಕಲೆಗಳು’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಒಂದು ಕಾಲದಲ್ಲಿ ಬಹುತೇಕ ಪ್ರದರ್ಶನ ಕಲೆಗಳು ಶ್ರಮಿಕ ಮತ್ತು ಕೆಳ ಸಮುದಾಯಗಳ ಸ್ವತ್ತಾಗಿದ್ದವು. ಬದಲಾದ ಕಾಲಘಟ್ಟದಲ್ಲಿ ಈ ಕಲೆಗಳು ಮನರಂಜನೆಯ ಉದ್ಯಮದ ಬಹು­ದೊಡ್ಡ ಸರಕಾದವು. ಇದನ್ನು ಅರಿತ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವುಗಳನ್ನು ತಮ್ಮ ಕೈವಶ ಮಾಡಿಕೊಂಡು ಅವುಗಳ ಅವಲಂಬಿತರನ್ನು ಬೀದಿಗೆ ತಳ್ಳಿದರು’ ಎಂದು ಹೇಳಿದರು.

‘ಇಂದು ಕೆಳ ಸಮುದಾಯಗಳ ಕಲೆಗಳು  ಸಭೆ, ಸಮಾರಂಭಗಳಲ್ಲಿ ಸ್ವಾಗತ ಕೋರುವ ಬಾಡಿಗೆ ಕಲೆಗಳಾಗಿ ಮಾರ್ಪಡುತ್ತಿವೆ. ಇಂದಿಗೂ ಅವುಗಳಿಗೆ ಸಾಮಾಜಿಕ ಮತ್ತು ಖಾಸಗಿ ಸಮಾರಂಭಗಳಲ್ಲಿ ದೊರೆಯಬೇಕಾಗಿದ್ದ ಮನ್ನಣೆ ಸಿಕ್ಕಿಲ್ಲ. ಈ ಚಿತ್ರಣವನ್ನು ಬದಲಾಯಿಸಲು ಯುವ ಜನಾಂಗ ಕಲೆಗಳ ಮೂಲಗಳನ್ನು ಶೋಧಿಸಿ ಸತ್ಯ ಅನಾವರಣಗೊಳಿಸಬೇಕು’ ಎಂದು ತಿಳಿಸಿದರು. ರಂಗತಜ್ಞ ಡಾ.ಎ.ಆರ್‌.­ಗೋವಿಂದ­ಸ್ವಾಮಿ, ಸಮಾಜ ಶಾಸ್ತ್ರಜ್ಞ ಡಾ.ಸಿ.ಜಿ.ಲಕ್ಷ್ಮಿಪತಿ, ಲೇಖಕ ಡಾ.ವಡ್ಡಗೆರೆ ನಾಗರಾಜಯ್ಯ ಮತ್ತು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಂ.­ವೆಂಕಟಶಾಮಿರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT