ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದಿಕ್ ವಿರುದ್ಧ ಕ್ರಮಕ್ಕೆ ಆಗ್ರಹ

Last Updated 22 ಜುಲೈ 2014, 10:57 IST
ಅಕ್ಷರ ಗಾತ್ರ

ಮಂಗಳೂರು: ಯೋಗಗುರು ರಾಮ್‌ದೇವ್ ಆಪ್ತ ವೇದಪ್ರತಾಪ್ ವೈದಿಕ್‌ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಆಗ್ರಹಿಸಿದೆ.

ಮುಂಬೈ ದಾಳಿಯ ಸೂತ್ರಧಾರಿ ಹಫೀಝ್ ಸಹೀದ್‌ನನ್ನು ರಾಮ್‌ದೇವ್‌ ಆಪ್ತ ವೇದಪ್ರತಾಪ್ ವೈದಿಕ್ ಭೇಟಿಯಾಗಿರುವುದನ್ನು ಖಂಡಿಸಿ ಮಂಗಳೂರು ನಗರ, ಮಂಗಳೂರು ದಕ್ಷಿಣ ಹಾಗೂ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್‌ ಮಾಜಿ ಶಾಸಕ ವಿಜಯಕುಮಾರ್‌ ಶೆಟ್ಟಿ ಅವರು ಮಾತನಾಡಿ, ಹಫೀಝ್ ಸಹೀದ್ ಪತ್ತೆ ಹಚ್ಚಿ ಕೊಟ್ಟವರಿಗೆ ಅಮೆರಿಕ ಈಗಾಗಲೇ ಬಹುಮಾನ ಘೋಷಿಸಿದೆ. ಅಂತಹ ಸಹೀದ್‌ನನ್ನು ರಾಮ್‌ದೇವ್‌ನ ಆಪ್ತ ವೈದಿಕ್ ಭೇಟಿಯಾಗಲು ಕಾರಣ ಏನು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಪಡಿಸಬೇಕು ಎಂದರು.

ಒಳ್ಳೆಯ ದಿನಗಳು ಬರಲಿವೆ ಎಂದು ಹೇಳುತ್ತಾ ಬಂದಿದ್ದ ಎನ್‌ಡಿಎ ಮುಖಂಡರು ಇದೀಗ ಅದನ್ನು ಸಾಬೀತು ಪಡಿಸಿದ್ದಾರೆ. ಹಫೀಝ್‌ನ ಬಳಿ ವೈದಿಕ್‌ನನ್ನು ಕಳುಹಿಸಿ ಕೊಡಲು ಕಾರಣ ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.

ದ.ಕ.ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ಮಂಗಳೂರು ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ ಕುಮಾರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರುಣ್ ಕುವೆಲ್ಲೋ, ಕಳ್ಳಿಗೆ ತಾರಾನಾಥ ಶೆಟ್ಟಿ, ಶಶಿರಾಜ್ ಅಂಬಟ್, ಡಾ.ಬಿ.ಜಿ. ಸುವರ್ಣ, ಸ್ಟಾನಿ ಆಲ್ವಾರೀಸ್, ಉಮೇಶ್ಚಂದ್ರ, ಹುಸೈನ್ ಕಾಟಿಪಳ್ಳ, ನಝೀರ್ ಬಜಾಲ್, ಮೋಹನ್ ಮೆಂಡನ್, ಟಿ.ಕೆ.ಸುಧೀರ್, ಶಶಿಕಲಾ, ಆಶಿಸ್ ಪಿರೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT