ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಗರ್ಭಪಾತ: ಶಿಕ್ಷೆ

ನಿಮಗಿದು ತಿಳಿದಿರಲಿ
Last Updated 3 ಜುಲೈ 2015, 19:30 IST
ಅಕ್ಷರ ಗಾತ್ರ

ವೈದ್ಯಕೀಯ ಗರ್ಭಪಾತ: ಶಿಕ್ಷೆ
ತಾಯಿಯ ಜೀವವನ್ನು ಉಳಿಸುವುದಕ್ಕೆ ಅಲ್ಲದೆ ಬೇರಾವುದೇ ಕಾರಣಕ್ಕೆ 20 ವಾರಗಳು ದಾಟಿದ ಗರ್ಭದ ಗರ್ಭಪಾತ ಮಾಡಿದ ವೈದ್ಯರು ಏಳು ವರ್ಷಗಳ ಕಾರಾವಾಸ ಶಿಕ್ಷೆಗೆ ಗುರಿಯಾಗುತ್ತಾರೆ.

ಪ್ರಸೂತಿ ಸೌಲಭ್ಯ
ಮಹಿಳೆ ಇಂದು ಭಾರತದ ಕಾರ್ಮಿಕ ಬಲದ ಅವಿಭಾಜ್ಯ ಅಂಗ. 2011ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಮಹಿಳಾ ಕಾರ್ಮಿಕರ ಸಂಖ್ಯೆ 149.8 ದಶ ಲಕ್ಷ. ಇವರ ಪೈಕಿ ಸುಮಾರು 59.54 ಲಕ್ಷ ಮಹಿಳೆಯರು ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಸುಮಾರು 32.14 ಲಕ್ಷ ಮಹಿಳೆಯರು ಸಾಮುದಾಯಿಕ, ಸಾಮಾಜಿಕ ಹಾಗೂ ವೈಯಕ್ತಿಕ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಆರ್ಥಿಕವಾಗಿ ಸಬಲರಾಗುವ ಈ ದಿಕ್ಕಿನಲ್ಲಿ ಮಹಿಳೆಯರು ಎದುರಿಸುವ ಮುಖ್ಯ ಸಮಸ್ಯೆಗಳೆಂದರೆ ವೇತನದಲ್ಲಿ ಅಸಮಾನತೆ ಮತ್ತು ಹೆರಿಗೆಗೆ ಸಂಬಂಧಿಸಿದಂತೆ ಉದ್ಯೋಗ ಕ್ಷೇತ್ರದಲ್ಲಿ ವ್ಯಕ್ತವಾಗುವ ತಾರತಮ್ಯ ನೀತಿ. ಇದರ ನಿವಾರಣೆಗಾಗಿ, ಕಾರ್ಖಾನೆಗಳು, ಗಣಿಗಳು ಮತ್ತು ನೆಡುತೋಪುಗಳು ಹಾಗೂ ಇತರ ಉದ್ಯೋಗಗಳಲ್ಲಿ ತೊಡಗಿರುವ ಮಹಿಳಾ ಉದ್ಯೋಗಿಗಳಿಗೆ ಮತ್ತು ಕಾರ್ಮಿಕರಿಗೆ ಅನೇಕ ಕಾನೂನುಗಳ ಅಡಿಯಲ್ಲಿ ವಿವಿಧ ರೀತಿಯ ಅನುಕೂಲಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸಲಾಗಿದೆ.

ಅವುಗಳಲ್ಲಿ ಪ್ರಮುಖವಾದುದು, ವೇತನದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜಾರಿ ಮಾಡಿರುವ ಸಮಾನ ಪರಿಶ್ರಮ ಅಧಿನಿಯಮ, 1976 ಮತ್ತು ಮಹಿಳೆಯರಿಗೆ ಹೆರಿಗೆಗೆ ಮುಂಚೆ ಮತ್ತು ಹೆರಿಗೆಯ ನಂತರ ರಜೆಗೆ ಸಂಬಂಧಿಸಿದಂತೆ ಜಾರಿ ಮಾಡಿರುವ ಪ್ರಸೂತಿ ಸೌಲಭ್ಯ ಅಧಿನಿಯಮ, 1961.

ಮಹಿಳೆ ಉದೋಗಕ್ಕೆ ಹಾಜರಾಗದಿದ್ದಾಗಲೂ ಅವಳ ತಾಯ್ತನದ ಘನತೆಯನ್ನು ಸಂರಕ್ಷಿಸುವುದಕ್ಕಾಗಿ ಮತ್ತು ತಾಯಿ ಹಾಗೂ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಅಗತ್ಯವಾದ ಸೌಲಭ್ಯವನ್ನು ನೀಡುವುದಕ್ಕಾಗಿ ಪ್ರಸೂತಿ ರಜೆ ಮತ್ತು ಸೌಲಭ್ಯವನ್ನು ಒದಗಿಸಲಾಗುತ್ತದೆ. 

ಇಂದು ಹೆಚ್ಚು ಹೆಚ್ಚು ಮಹಿಳೆಯರು ಉದ್ಯೋಗ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದರಿಂದ, ಪ್ರಸೂತಿ ರಜೆ ಮತ್ತು ಪ್ರಸೂತಿ ಸೌಲಭ್ಯಗಳನ್ನು ಒದಗಿಸಬೇಕಾದ ಅನಿವಾರ್ಯತೆಯೂ ಹಚ್ಚಿದೆ ಮತ್ತು ಬಳಸಿಕೊಳ್ಳುವ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಮಹಿಳೆ ತಾಯ್ತನಕ್ಕೆ ಕಾಲಿಡುವ ಸಂದರ್ಭ ಅವಳ ಕುಟುಂಬ ಜೀವನದ ಅತ್ಯಂತ ಪ್ರಮುಖ ಘಟ್ಟ.

ಆ ಸಂದರ್ಭದಲ್ಲಿ, ದೇಶದಾದ್ಯಂತ ಏಕರೂಪದ ಸೌಲಭ್ಯಗಳ ನೀಡಿಕೆಯನ್ನು ಜಾರಿಗೆ ತರುವುದಕ್ಕಾಗಿ 1961 ರಲ್ಲಿ ’ಪ್ರಸೂತಿ ಸೌಲಭ್ಯ ಅಧಿನಿಯಮ’ವನ್ನು ಜಾರಿಗೆ ತರಲಾಯಿತು. ಉದೋಗಸ್ಥ ಮಹಿಳೆಗೆ ಹೆರಿಗೆಗೆ ಮುಂಚೆ ಮತ್ತು ಹೆರಿಗೆಯ ಅನಂತರ ವೇತನ ಸಹಿತವಾದ ರಜೆ ಕೊಡುವುದನ್ನು ಪ್ರಸೂತಿ ಸೌಲಭ್ಯ ಅಧಿನಿಯಮ, 1961 ಕಡ್ಡಾಯಗೊಳಿಸುತ್ತದೆ. ಮಹಿಳೆ ಗರ್ಭಿಣಿಯಾದಾಗ ಕೆಲಸ ಮಾಡದೆ ಇದ್ದರೂ ಅವಳ  ಮತ್ತು ಅವಳ ಮಗುವಿನ ಆರೋಗ್ಯ ರಕ್ಷಣೆಗೆ ಸೌಲಭ್ಯ ಕಲ್ಪಿಸುವುದು ಈ ಕಾನೂನಿನ ಉದ್ದೇಶ.

ಈ ಕಾನೂನು ಈ ಮುಂದಿನವುಗಳಿಗೆ ಅನ್ವಯವಾಗುತ್ತದೆ-
* ಗಣಿಗಳು, ಕಾರ್ಖಾನೆಗಳು, ಸರ್ಕಸ್, ಉದ್ಯಮ, ನೆಡುತೋಪು;
*ಹತ್ತು ಅಥವಾ ಅದಕ್ಕಿಂತ ಹೆಚ್ಚು ಮಂದಿಯನ್ನು ನಿಯೋಜಿಸಿಕೊಂಡಿರುವ ಅಂಗಡಿಗಳು ಮತ್ತು ಇತರ ಸಂಸ್ಥೆಗಳು;
*ರಾಜ್ಯ ಸರ್ಕಾರ ಅಧಿಸೂಚನೆಯ ಮೂಲಕ ಸೇರ್ಪಡೆ ಮಾಡಬಹುದಾದ ಇತರ ಯಾವುದೇ ಸಂಸ್ಥೆ.

ಇದು, ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ನಿಯೋಜಿಸಿಕೊಂಡಿರುವ ಪ್ರತಿಯೊಂದು ಕಂಪೆನಿ, ಫರ್ಮ್ ಅಥವಾ ಯಾವುದೇ ಇತರ ಸಂಸ್ಥೆಗೆ ಅನ್ವಯಿಸುತ್ತದೆ. ಹಿಂದಿನ ಹನ್ನೆರಡು ತಿಂಗಳ ಅವಧಿಯಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿಕೊಂಡಿದ್ದು ಸದ್ಯದಲ್ಲಿ ಆ ಸಂಖ್ಯೆ ಕಡಿಮೆಯಾಗಿದ್ದರೂ ಈ ಕಾನೂನು ಅನ್ವಯಿಸುತ್ತದೆ.
ಕಳೆದ ಹನ್ನೆರಡು ತಿಂಗಳಲ್ಲಿ ಯಾವುದೇ ದಿನದಂದು ಹತ್ತು ಅಥವಾ ಹತ್ತಕ್ಕಿಂತ ಹೆಚ್ಚು ಜನರನ್ನು ನಿಯೋಜಿಸಿಕೊಂಡಿದ್ದರೂ ಈ ಕಾನೂನು ಅನ್ವಯ ವಾಗುತ್ತದೆ.

ನ್ಯಾಯವಾದಿ, ಕಾನೂನು ಸಲಹೆಗಾರರು
bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT