ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಶಿಕ್ಷಣ ಎತ್ತ ಸಾಗಿದೆ?

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈಯಲ್ಲಿ ಕಳೆದ ಒಂದು ಶತ­ಮಾನದಿಂದ ಕಾಲೇಜ್ ಆಫ್ ಫಿಜಿಶಿ­ಯನ್‌್ಸ ಮತ್ತು ಸರ್ಜನ್‌್್ಸ ಆಫ್‌್ ಬಾಂಬೆ (ಮುಂಬಯಿ), ವೈದ್ಯಕೀಯ ಸ್ನಾತಕೋ­ತ್ತರ ಡಿಪ್ಲೊಮಾಗಳನ್ನು ಪ್ರದಾನ ಮಾಡುತ್ತ ಬರುತ್ತಿದೆ.

ಅದು ನೀಡುತ್ತಿದ್ದ ಹದಿನಾರು ಡಿಪ್ಲೊಮಾಗಳಲ್ಲಿ ಮೂರು ಮಾತ್ರ ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಎಂಸಿಐ) ಮಾನ್ಯತೆ ಪಡೆದಿದ್ದವು. ಅವುಗಳ ಮಾನ್ಯತೆಯನ್ನು ಕೂಡಾ ಎಂಸಿಐ ಹತ್ತು ವರುಷಗಳ ಹಿಂದೆ ರದ್ದು ಮಾಡಿತು. ಆದರೂ ಮಹಾರಾಷ್ಟ್ರ ಸರ್ಕಾರ ಈ ಡಿಪ್ಲೊಮಾಗಳನ್ನು ಪಡೆದವರು ತನ್ನ ರಾಜ್ಯ­ದಲ್ಲಿ ಪ್ರಾಕ್ಟೀಸ್‌ ಮಾಡಬಹುದೆಂದು ಅನು­ಮತಿ ನೀಡಿದ್ದಿತು.

ಈಚೆಗೆ ಮಹಾ­ರಾಷ್ಟ್ರ ಮೆಡಿಕಲ್‌ ಕೌನ್ಸಿಲ್‌ ಈ ಸಂಸ್ಥೆ ನೀಡುವ ಯಾವುದೇ ಡಿಪ್ಲೊಮಾ­ಗಳನ್ನು ಮಾನ್ಯ­ಮಾಡಿ ನೋಂದಣಿ ಮಾಡುವುದಿಲ್ಲ ಎಂದು ಆದೇಶ ಹೊರಡಿಸಿದೆ. ಇಂತಹ ಪರಿ­ಸ್ಥಿತಿ­ಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ವೈದ್ಯರಿಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ತರಬೇತಿ ನೀಡಿ ಈ ಬಗೆಯ ಡಿಪ್ಲೊಮಾ­ಗಳನ್ನು ಪ್ರದಾನ ಮಾಡುವ ಬಗ್ಗೆ ತುಂಬಾ ಆಸಕ್ತಿ ತಳೆದು, ಆ ದಿಶೆಯಲ್ಲಿ ಮುಂದು­ವರಿ­­ಯುತ್ತಿರುವುದು ಎಂತಹ ವಿಪರ್ಯಾಸ!?
–ಡಾ.ಪಿ.ಎಸ್‌. ಶಂಕರ್‌, ಗುಲ್ಬರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT