ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಲೋಕಕ್ಕೊಂದು ಹೊಸ ತಂತ್ರಾಂಶ ‘ವಿಟ್ರಿಯಾ ವ್ಯೂ’

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಆಸ್ಪತ್ರೆಗಳಿಗೆ ನಿತ್ಯವೂ ಜನರು ಬರುತ್ತಲೇ ಇರುತ್ತಾರೆ, ಅಲ್ಲಿಂದ ತೆರಳುತ್ತಲೂ ಇರುತ್ತಾರೆ. ಹೀಗೆ ಬರುವ ರೋಗಿಗಳ ರೋಗಪತ್ತೆ, ಚಿಕಿತ್ಸೆಯ ಜೊತೆಗೆ ಬಂದುಹೋಗುವ ಹಾಗೂ ದಾಖಲಾಗುವ ರೋಗಿಗಳ ಮಾಹಿತಿಗಳನ್ನು ದಾಖಲಿಸುವುದು ಸುಲಭದ ಕೆಲಸವೇನೂ ಅಲ್ಲ. ಅದರಲ್ಲೂ ಪತ್ತೆಯಾಗದ ರೋಗ ಆವರಿಸಿದರೆ ಜೀವಮಾನದಲ್ಲಿ ಕಂಡು–ಕೇಳರಿಯದ ಪರೀಕ್ಷೆಗಳೆಲ್ಲ ಅನಿವಾರ್ಯ. ಇಂಥ ಸಂದರ್ಭದಲ್ಲಿ ರೋಗಿಯ ಜನ್ಮ ದಿನಾಂಕ, ವಿಳಾಸ, ಲಿಂಗ, ರೋಗದ ಇತಿಹಾಸದಿಂದ ಆರಂಭಿಸಿ ತೆಗೆದುಕೊಂಡ ಚಿಕಿತ್ಸೆ, ಸೇವಿಸಿದ ಔಷಧಿ, ಮಾತ್ರೆ, ಚಿಕಿತ್ಸಾ ವಿಧಾನ ಎಲ್ಲವನ್ನೂ ಜಾಗೃತವಾಗಿ ದಾಖಲಿಸುವುದು ವೈದ್ಯರಿಗೆ ಜರೂರು ಹಾಗೂ ಜವಾಬ್ದಾರಿಯೂ ಹೌದು. ಇದು ನಿಜಕ್ಕೂ ಸವಾಲೇ ಸರಿ.

ಇದನ್ನು ಸರಳೀಕರಿಸುವ ನಿಟ್ಟಿನಲ್ಲಿ ‘ವಿಟ್ರಿಯಾ ವ್ಯೂ’ (VitreaView) ಎಂಬ ನೂತನ  ತಂತ್ರಾಂಶವೊಂದು ಆವಿಷ್ಕಾರಗೊಂಡಿದೆ. ತೋಶಿಬಾ ಸಮೂಹದ ಅಂಗಸಂಸ್ಥೆಯೊಂದು ಇದನ್ನು ರೂಪಿಸಿದೆ. ರೋಗಿಯೊಬ್ಬನ  ಪರೀಕ್ಷೆ, ಚಿಕಿತ್ಸೆ ಮುಂತಾದ ಎಲ್ಲಾ ಮಾಹಿತಿಗಳನ್ನು ಈ ತಂತ್ರಾಂಶದ ಸಹಾಯದಿಂದ ದಾಖಲಿಸಿ ಇಡಬಹುದಾಗಿದೆ.  ಈ ತಂತ್ರಾಂಶವನ್ನು ಬಳಸಿಕೊಂಡು ವೈದ್ಯರು ಯಾವಾಗ ಬೇಕಾದರೂ ರೋಗಿಯ ಮಾಹಿತಿಯನ್ನು ಪಡೆದು ಕೊಳ್ಳಬಹುದಾಗಿದೆ.

ಆಸ್ಪತ್ರೆಯಲ್ಲಿ ರೋಗಿಗಳ ಮಾಹಿತಿಯನ್ನು ಲಿಖಿತವಾಗಿ ಹಾಗೂ ಕಂಪ್ಯೂಟರ್‌ಗಳಲ್ಲಿಯೂ ದಾಖಲಿಸುವುದು ಸರ್ವೇ ಸಾಮಾನ್ಯ. ಆದರೆ ನೂತನ ತಂತ್ರಾಂಶ ಇದಕ್ಕಿಂತ ಭಿನ್ನ. ರೋಗಿಯ ಚಿತ್ರ, ವೈದ್ಯರ ಟಿಪ್ಪಣಿ ಸೇರಿದಂತೆ ಸಂಪೂರ್ಣ ವಿವರಗಳನ್ನು ದಾಖಲಿಸಿಡಬಹುದು. ಜೊತೆಗೆ ದಾಖಲಿತ ಮಾಹಿತಿಯನ್ನು ಅಂತರ್ಜಾಲದ ಮೂಲಕ ಈ ತಂತ್ರಾಂಶ ಹೊಂದಿರುವ ಇತರ ಚಿಕಿತ್ಸಾ ಕೇಂದ್ರಗಳಲ್ಲಿ ಪಡೆದು ಅದರ ಬಗ್ಗೆ ಅಲ್ಲಿನ ವೈದ್ಯರಿಗೆ ಅಭಿಪ್ರಾಯಗಳನ್ನು ತಿಳಿಸುವ ಅವಕಾಶವನ್ನು ಇದು ಕಲ್ಪಿಸುತ್ತದೆ.

ಇದು ಈಗಾಗಲೇ ವಿಶ್ವದ ಇತರ ಭಾಗಗಳಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ವೈಟಲ್ ಇಮೇಜಸ್‌, ಇಂಕ್‌ನ ಏಷ್ಯಾ ಫೆಸಿಫಿಕ್‌ ವಿಭಾಗದ ಪ್ರಧಾನ ವ್ಯವಸ್ಥಾಪಕ ಡಾ. ರವಿ ಶ್ರೇಷ್ಠ.

ರೋಗಿಯ ಆರೋಗ್ಯದ ಹಿನ್ನೆಲೆ ತಿಳಿಯಲು ವೈದ್ಯಕೀಯ ತಂಡಕ್ಕೆ ‘ವೈಟ್ರಾ ವ್ಯೂ’  ಒದಗಿಸುವ ಚಿತ್ರಗಳು ಸಹಾಯಕ. ಇದರಲ್ಲಿ 2ಡಿ ಮತ್ತು 3ಡಿ ಚಿತ್ರಗಳು ಮತ್ತು ವಿವಿಧ ಬಗೆಯ ಪರೀಕ್ಷಾ ವಿವರಗಳನ್ನು ದಾಖಲಿಸಿಟ್ಟು ಬೇಕಾದಾಗ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT