ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ವಿಕಸನಕ್ಕಾಗಿ ಇಂಗ್ಲಿಷ್

English ಕಲಿಯೋಣ ಬನ್ನಿ... ‘ಇಂಗ್ಲಿಷ್‌ ಕಲಿಯೋಣ ಬನ್ನಿ’
Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಇಂದಿನ ಸಂಧರ್ಭದಲ್ಲಿ ಇಂಗ್ಲಿಷ್ ಭಾಷೆ ಸಂವಹನ ಮಾಧ್ಯಮ ಮಾತ್ರವಲ್ಲದೆ ಅವಕಾಶಗಳ ಹಾಗು ಸಾಮಾಜಿಕ ಮೇಲ್ಚಲನೆಯ ದಾರಿಯೂ ಆಗಿದೆ. ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ಪಿ.ಯು.ಸಿ ಮತ್ತು ಪದವಿ ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಯ ಪ್ರಯತ್ನಕ್ಕೆ ಒತ್ತಾಸೆಯಾಗುವುದು ಈ ಅಂಕಣದ ಉದ್ದೇಶ.

ಭಾಷಾ ತಜ್ಞರ ಪ್ರಕಾರ ನಮ್ಮ ಮಾತೃಭಾಷೆಯಲ್ಲದ ಯಾವುದೇ ಅನ್ಯ ಭಾಷೆಯನ್ನು ಕಲಿಯಬೇಕೆಂದರೆ ಮೂರು ಮುಖ್ಯ ಅಂಶಗಳ ಹಿನ್ನೆಲೆ ಅಗತ್ಯ. ಮೊದಲನೆಯದಾಗಿ ಅದಮ್ಯ ಆಕಾಂಕ್ಷೆ  (Desire) ಎರಡನೆಯದಾಗಿ ನಾವು ಕಲಿಯಬೇಕಾದ ಭಾಷೆಯ ಲಯ ಹಾಗು ಭಾವ ಪ್ರಪಂಚಕ್ಕೆ ಒಡ್ಡಿಕೊಳ್ಳುವಿಕೆ ( Exposure) ಹಾಗು ಕೊನೆಯದಾಗಿ ನಮಗೆ ದಕ್ಕಿದ ಮಟ್ಟದಲ್ಲಿ ಆ ಭಾಷೆಯ ಬಳಸುವಿಕೆ ( Use).

ಇಂಗ್ಲಿಷ್ ಕಲಿಕೆಯ ಸಂದರ್ಭದಲ್ಲಿ ನಮ್ಮ ನಿತ್ಯ ಜೀವನದ ಚೌಕಟ್ಟಿನೊಳಗೆ ಇದನ್ನು ಹೇಗೆ ಸಾಧಿಸುವುದು? ಇಂಗ್ಲಿಷ್ ಕಲಿಕೆ ಎಂದರೆ ಆ ಭಾಷೆಯಲ್ಲಿ ನಾಲ್ಕು ಕ್ರಿಯೆಗಳ ಮೇಲೆ ನಾವು ಹಿಡಿತ ಸಾಧಿಸುವುದಾಗಿದೆ. (listening, reading, writing ಹಾಗು speaking ಇವೇ ಆ ನಾಲ್ಕು ಕ್ರಿಯೆಗಳು.  ಈ ದಿಕ್ಕಿನತ್ತ ಸಾಗಲು ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಿ.

ಪ್ರತಿದಿನ ಸುಮಾರು ಹತ್ತು ನಿಮಿಷಗಳವರೆಗೆ ಯಾವುದಾದರೂ ಇಂಗ್ಲಿಷ್ ಚಾನೇಲ್‌ನಲ್ಲಿ ನ್ಯೂಸ್ ಕೇಳಿ.  NDTV ಅಥವಾ  BBC  ಚಾನೆಲ್‌ಗಳು ಇದಕ್ಕೆ ಸೂಕ್ತ ಎನಿಸುತ್ತದೆ. ಅಲ್ಲಿನ ಪ್ರತಿ ವಾಕ್ಯವೂ ನಿಮಗೆ ಅರ್ಥವಾಗ ಬೇಕೆಂದೇನಿಲ್ಲ ಮೊದಲ ಕೆಲವು ದಿನ ಇಂಗ್ಲಿಷ್ ಭಾಷೆಯ ಧ್ವನಿ ಹಾಗು ಏರಿಳಿತಗಳನ್ನು (Modulation) ಮಾತ್ರ ಗಮನಿಸಿ. ಭಾಷೆಯೊಂದು ವಾಕ್ಯಗಳ ಸಮೂಹ ಎಂಬುದು ನಿಮಗೆ ತಿಳಿದಿರುವ ವಿಷಯವೇ. ಬಹುತೇಕ ಇಂಗ್ಲಿಷ್ ವಾಕ್ಯಗಳು ನಾಲ್ಕು ಬಗೆಯವು. ಪ್ರಶ್ನೆಗಳು (questions), ಹೇಳಿಕೆಗಳು (Statements), ಬೇಡಿಕೆಗಳು (requests) ಹಾಗೂ ಆಜ್ಞೆಗಳು (Commonds) ನೀವು ಇಂಗ್ಲಿಷ್ ಕೇಳಿಸಿಕೊಳ್ಳುವಾಗ, ಈ ನಾಲ್ಕು ವಾಕ್ಯ ಪ್ರಕಾರಗಳನ್ನು ಸೂಕ್ಷ್ಮವಾಗಿ ಗಮನಿಸಿ.

ಎರಡನೆಯದಾಗಿ ಯಾವುದಾದರೂ ಇಂಗ್ಲಿಷ್ ವಾರ ಪತ್ರಿಕೆಯಿಂದ ನಿಮಗೆ ಪರಿಚಯವಿಲ್ಲದ ಮೂರು ಶಬ್ದಗಳನ್ನು ಹುಡುಕಿ ಒಂದು ಡಿಕ್ಷನರಿಯ ಸಹಾಯದಿಂದ ಆ ಹೊಸ ಶಬ್ದದ ಅರ್ಥವನ್ನು, ಉಚ್ಚಾರಣೆಯನ್ನು ಹಾಗು ವಾಕ್ಯ ಒಂದರಲ್ಲಿ ಅದನ್ನು ಉಪಯೋಗಿಸುವ ಪರಿಯನ್ನು ಕಲಿಯಲು ಯತ್ನಿಸಿ. ಶಬ್ದ ಸಂಪತ್ತನ್ನು ಬೆಳೆಸಿಕೊಳ್ಳಲು ಇದು ಅತ್ಯುತ್ತಮ ಮಾರ್ಗ. ಎಲ್ಲಾ ಭಾಷೆಗಳು ಕೆಲವು ನಿಯಮಗಳು, ಪದಗಳು ಹಾಗು ದ್ವನಿಕಣಗಳು ಕೂಡಿ ಆಗಿರುವ ಒಂದು ವ್ಯವಸ್ಥೆ.  It is a system of rules, words and sounds.

ಸಾಮಾನ್ಯವಾಗಿ ಪ್ರಾಥಮಿಕ ಹಂತದ ಕಲಿಕೆಯಲ್ಲಿ ವ್ಯಾಕರಣದ ಬಗ್ಗೆ ಆತಂಕವಿರುತ್ತದೆ. ನೋಡಿ, ನೀವು ಮರ್‌ಸಿಡಿಸ್ ಬೆಂನ್ಜ್ ಗಾಡಿಯನ್ನು ಚಲಿಸಬೇಕೆಂದರೆ ನಿಮಗೆ ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿಯ ಅಗತ್ಯವಿಲ್ಲ. ಹಾಗೆಯೇ ಇಂಗ್ಲೀಷ್ ಮಾತನಾಡಲು Wren and Martin  ಪುಸ್ತಕದ ಎಲ್ಲಾ ವ್ಯಾಕರಣ ನಿಯಮಗಳ ಅರಿವೂ ನಿಮಗೆ ಬೇಕಿಲ್ಲ. ಆದ್ದರಂದ ವ್ಯಾಕರಣ ನಿಯಮಗಳಿಗೆ ಬದಲಾಗಿ ಇಂಗ್ಲೀಷ್‌ನ ಸಂವಹನ ಕ್ರಿಯೆಗಳತ್ತ (Communicative functions) ಗಮನ ಹರಿಸಿ.

ಉದಾಹರಣೆಗೆ, ಸ್ವಪರಿಚಯ ಮಾಡಿಕೊಳ್ಳುವುದು, ಇತರರನ್ನು ಸ್ವಾಗತಿಸುವುದು ಹಾಗು ಬೀಳ್ಕೊಡುವುದು ಇತ್ಯಾದಿ. ಇಂಗ್ಲಿಷ್ ನಲ್ಲಿ ಇಂತಹ ಹತ್ತಿಪ್ಪತ್ತು ಪ್ರಮುಖ ಸಂವಹನ ಕ್ರಿಯೆಗಳಿಗೆ ಬೇಕಾದ ವಾಕ್ಯಸಮೂಹಗಳನ್ನು ಅಭ್ಯಸಿಸಿದರೆ ನಮ್ಮ ಆತ್ಮವಿಶ್ವಾಸ ನಿಧಾನವಾಗಿ ಬಲಗೊಳ್ಳುತ್ತದೆ. ಉದಾಹರಣೆಗೆ ಸ್ವಪರಿಚಯದ ವಾಕ್ಯಸಮೂಹವನ್ನು ನೋಡೋಣ.

ಮೊದಲ ಬಾರಿಗೆ ವ್ಯಾವಹಾರಿಕ ಸಂದರ್ಭದಲ್ಲಿ ಇನ್ನೊಬ್ಬರನ್ನು ಭೇಟಿಯಾದಾಗ ಉಪಯೋಗಿಸ ಬಹುದಾದ ಮಾದರಿ ಇದು I am Suresh ( My self suresh X) I am a native of Bangalore  ( My native is Bangalore X) ಈ ಎರಡು ವಾಕ್ಯಗಳಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನು ಬ್ರಾಕೆಟ್ ನಲ್ಲಿ ಸೂಚಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT