ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ಸಾವು: ಅಪಘಾತ ಶಂಕೆ

Last Updated 2 ಸೆಪ್ಟೆಂಬರ್ 2014, 18:44 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ ಸಮೀಪದ ಶನೇಶ್ವರ ದೇವಸ್ಥಾನದ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಮೃತರ ವಯಸ್ಸು ಸುಮಾರು 45 ವರ್ಷ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ರಸ್ತೆ ಬದಿಯ ವಾಹನ ನಿಲುಗಡೆ ಸ್ಥಳದಲ್ಲಿ ಅವರ ಶವ ಪತ್ತೆಯಾಗಿದೆ. ಮೃತದೇಹದ ಮೇಲೆ ಟಾರ್ಪಲ್‌ ಹೊದಿಸಲಾಗಿತ್ತು. ಶವವನ್ನು ಕಂಡ ಸ್ಥಳೀಯರು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ತೆರಳಿದ ಸಿಬ್ಬಂದಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದರು.

‘ಶವಕ್ಕೆ ಟಾರ್ಪಾಲ್‌ ಹೊದಿಸಿ­ದ್ದ­ರಿಂದ ವ್ಯಕ್ತಿ ಕೊಲೆಯಾಗಿರ­ಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ವೇಳೆ ಶವ­ವನ್ನು ನೋಡಿದಾಗ ಅವರ ಸೊಂಟದ ಮೇಲೆ ವಾಹನದ ಚಕ್ರ ಹರಿದಿ­ರು­ವುದು ಗೊತ್ತಾ­ಯಿತು. ಹೀಗಾಗಿ ಪ್ರಕ­ರಣದ ತನಿಖೆ­ಯನ್ನು ಹೆಬ್ಬಾಳ ಸಂಚಾರ ಪೊಲೀ­ಸರಿಗೆ ಒಪ್ಪಿಸ­ಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ರಸ್ತೆ ದಾಟುವ ವೇಳೆ ಆ ವ್ಯಕ್ತಿ ಮೇಲೆ ಅಪರಿಚಿತ ವಾಹನ ಹರಿದಿ­ರುವ ಸಾಧ್ಯತೆ ಇದೆ. ಸೋಮವಾರ ರಾತ್ರಿಯೇ ಈ ಘಟನೆ ನಡೆದಿದೆ. ವಾಹನ ಗುದ್ದಿಸಿದ ನಂತರ ಚಾಲಕ, ಶವ­­ವ­ನ್ನು ರಸ್ತೆ ಬದಿ ಎಳೆದು ಹಾಕಿ ಪರಾರಿ­ಯಾಗಿರಬಹುದು. ಟಾರ್ಪಾಲ್‌ ಹೊದಿಸಿದ್ದರಿಂದ ಮೃತ­ದೇಹ ದಾರಿಹೋಕರ ಗಮನಕ್ಕೆ ಬಂದಂ­­ತಿಲ್ಲ. ಘಟನೆ ನಡೆದ ಸ್ಥಳದ ಸುತ್ತ­­ಮುತ್ತ ಯಾವುದೇ ಸಿ.ಸಿ ಕ್ಯಾಮೆರಾ ಇಲ್ಲ. ಮೃತರ ಗುರುತು ಪತ್ತೆ ಕಾರ್ಯ ನಡೆ­ಯು­ತ್ತಿದೆ’ ಎಂದು ಹೆಬ್ಬಾಳ ಸಂಚಾರ ಪೊಲೀಸರು ತಿಳಿಸಿದ್ದಾರೆ.

ನವವಿವಾಹಿತೆ ಆತ್ಮಹತ್ಯೆ
ಬೆಂಗಳೂರು: ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ (ಎನ್‌ಜಿವಿ) ವಸತಿ ಸಮು­ಚ್ಚಯದಲ್ಲಿ ರಶ್ಮಿ (23) ಎಂಬ ನವ­ವಿವಾಹಿತೆ ಸೋಮವಾರ ಆತ್ಮಹತ್ಯೆ ಮಾಡಿ­ಕೊಂಡಿದ್ದಾರೆ. ಸತ್ಯಣ್ಣ ಎಂಬುವರ ಮಗಳಾದ ರಶ್ಮಿ ಅವರಿಗೆ ಮೂರು ತಿಂಗಳ ಹಿಂದೆ­ಯಷ್ಟೇ ಮದುವೆಯಾಗಿತ್ತು.

  ಅವರ ಪತಿ ಮುರಳೀಧರ್‌ ಅವರು ಕುಟುಂಬ ಸದಸ್ಯ­ರೊಂದಿಗೆ ಚಿತ್ರ­ದುರ್ಗ ಜಿಲ್ಲೆ ಮೊಳಕಾಲ್ಮುರಿ­ನಲ್ಲಿ ವಾಸ­­ವಾಗಿ­ದ್ದಾರೆ. ಬಿ.ಇ ಓದಿರುವ ಮುರಳೀಧರ್‌, ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ರಶ್ಮಿ ಅವರು ಕೌಟುಂಬಿಕ ಕಲ­ಹದ ಕಾರ­ಣಕ್ಕೆ ಪತಿಯಿಂದ ದೂರವಾಗಿ ತವರು ಮನೆ­ಯಲ್ಲೇ ನೆಲೆಸಿದ್ದರು. ಪೋಷಕರು ಮಧ್ಯಾಹ್ನ ಹೊರಗೆ ಹೋಗಿ­­ದ್ದಾಗ ಅವರು ಮನೆಯಲ್ಲಿ ನೇಣು ಹಾಕಿ­ಕೊಂಡಿದ್ದಾರೆ. ‘ಅಳಿಯ ಮುರಳೀಧರ್‌, ಆತನ ತಂದೆ ಮಾರನಾಯಕ್‌, ತಾಯಿ ಗಂಗಮ್ಮ, ಸಹೋದರಿಯರಾದ ಗೀತಾ ಮತ್ತು ಇಂದಿರಾ ಅವರು ವರದಕ್ಷಿಣೆಗಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದರು.

ಇದರಿಂದ ಬೇಸರಗೊಂಡಿದ್ದ ಮಗಳು ಪತಿಯಿಂದ ದೂರವಾಗಿ ಮನೆಗೆ ವಾಪಸ್‌ ಬಂದಿದ್ದಳು. ಅವಳ ಸಾವಿಗೆ ಅಳಿಯ ಮತ್ತು ಆತನ ಕುಟುಂಬದ ಸದಸ್ಯರೇ ಕಾರಣ’ ಎಂದು ಸತ್ಯಣ್ಣ ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಸಂಬಂಧ ಮುರಳೀಧರ್‌ ಮತ್ತು ಕುಟುಂಬ ಸದಸ್ಯರ ವಿರುದ್ಧ ವರ­ದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೋರ­­ಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT