ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಯಾಮ ಶಾಲೆಯಲ್ಲಿ ಬಚ್ಚನ್‌

Last Updated 20 ಮೇ 2015, 19:30 IST
ಅಕ್ಷರ ಗಾತ್ರ

ಬಿಗ್ ಬಚ್ಚನ್‌ ಇತ್ತೀಚೆಗೆ ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯತೊಡಗಿದ್ದಾರೆ. ತಮ್ಮ 72ನೇ ವಯಸ್ಸಿನಲ್ಲಿಯೂ ಫಿಟ್‌ ಆಗಿರುವ ಅಮಿತಾಭ್‌, ವ್ಯಾಯಾಮ ಶಾಲೆಯಲ್ಲಿ ಬೆವರು ಹರಿಸುತ್ತಿರುವುದು ಮುಂದಿನ ಚಿತ್ರದ ತಯಾರಿಗೆ.

‘ಯಾವುದೇ ವೈದ್ಯಕೀಯ ಅವಶ್ಯಕತೆಯಿಂದ ನಾನು ಜಿಮ್‌ನಲ್ಲಿ ಕಸರತ್ತು ನಡೆಸುತ್ತಿಲ್ಲ. ಬದಲಾಗಿ ನನ್ನ ಮುಂದಿನ ಚಿತ್ರದಲ್ಲಿನ ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಳ್ಳುವುದಕ್ಕಾಗಿ ವ್ಯಾಯಾಮ ಮಾಡುತ್ತಿದ್ದೇನೆ’ ಎಂದು ಬಚ್ಚನ್‌ ಹೇಳಿದ್ದಾರೆ.

‘ವ್ಯಾಯಾಮ ಚೆನ್ನಾಗಿ ನಡೆಯುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ನನ್ನ ದೇಹದಲ್ಲಿನ ವ್ಯತ್ಯಾಸಗಳು ಸ್ಪಷ್ಟವಾಗಿ ಕಾಣಬಹುದು’ ಎಂದೂ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಒಮ್ಮಿಂದೊಮ್ಮೆಲೇ ಜಿಮ್‌ಗೆ ಹೋಗಲಾರಂಭಿಸಿದ್ದರ ಬಗ್ಗೆ ಅನೇಕರು ನನ್ನನ್ನು ವಿಚಾರಿಸಿದ್ದಾರೆ. ನನ್ನ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಾಗಿರಬಹುದು, ವೈದ್ಯಕೀಯ ಕಾರಣಕ್ಕಾಗಿ ನಾನು ಜಿಮ್‌ಗೆ ಹೋಗುತ್ತಿರಬಹುದು ಎಂಬ ಕಾಳಜಿ ಅವರದು. ಅವರೆಲ್ಲ ತಿಳಿದುಕೊಂಡಂತೆ ನಾನು ಜಿಮ್‌ಗೆ ಹೋಗತೊಡಗಿದ್ದಕ್ಕೆ ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿಲ್ಲ. ನನ್ನ ಆರೋಗ್ಯದಲ್ಲಿ ಏನೂ ವ್ಯತ್ಯಾಸವಾಗಿಲ್ಲ’ ಎಂದು ಬಚ್ಚನ್‌ ಸ್ಪಷ್ಟಪಡಿಸಿದ್ದಾರೆ.

‘ಇದು ನನ್ನ ಮುಂದಿನ ಚಿತ್ರದ ತಯಾರಿ’ ಎಂದೂ ಅವರು ಹೇಳಿದ್ದಾರೆ. ಶೂಜಿತ್‌ ಸರ್ಕಾರ್‌ ನಿರ್ದೇಶನದ ‘ಪೀಕು’ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮಿತಾಭ್‌, ಮುಂದಿನ ಚಿತ್ರ ಯಾವುದು ಎಂದು ಪ್ರಶ್ನೆಸಿದರೆ ಗುಟ್ಟು ಬಿಟ್ಟುಕೊಡದೇ ನಗುತ್ತಾರೆ. ‘ನನ್ನ ಮುಂದಿನ ಚಿತ್ರ ಯಾವುದು ಎಂಬುದನ್ನು ಸದ್ಯಕ್ಕೆ ಪ್ರಶ್ನಾರ್ಥಕವಾಗಿಯೇ ಇರಿಸಬಯಸುತ್ತೇನೆ’ ಎಂದು ಕುತೂಹಲವನ್ನು ಹೆಚ್ಚಿಸಿ ಮುಗುಳು ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT