ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿಶಾಲಿ ಬಾಂಬ್‌ ಪತ್ತೆ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ರಂಗಿಯಾ (ಪಿಟಿಐ/ಐಎಎನ್‌ಎಸ್‌): ಅಸ್ಸಾಂನ ಕೆಂಡು­ಕೊನ್‌ ನಿಲ್ದಾಣದಲ್ಲಿ ಕಾಮಕ್ಯ ಇಂಟರ್‌­ಸಿಟಿ ಎಕ್ಸ್‌ಪ್ರೆಸ್‌ ರೈಲು ಬೋಗಿಯಲ್ಲಿ  ಸುಮಾರು ಏಳು ಕಿಲೋ ತೂಕದ ಶಕ್ತಿಶಾಲಿ ಬಾಂಬ್‌ ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಟವೆಲ್‌­ನಲ್ಲಿ ಸುತ್ತಿ ಬೋಗಿಯ ಶೌಚಾ­ಲಯದ ಬಳಿ ಇಡಲಾಗಿದ್ದ ಬಾಂಬ್‌ ಅನ್ನು ಭದ್ರತಾ ಸಿಬ್ಬಂದಿ ನೋಡಿ ತಕ್ಷಣವೇ ನಿಲ್ದಾಣದ ಮುಖ್ಯಸ್ಥರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಂಬ್‌ ನಿಷ್ಕ್ರಿಯಗೊಳಿಸಿದರು.

ಸಮಾವೇಶದಲ್ಲಿ ಸ್ಫೋಟಕ್ಕೆ ಹುನ್ನಾರ: ಈ 29, 30 ರಂದು ಗುವಾಹಟಿಯಲ್ಲಿ ನಡೆಯಲಿರುವ ಎಲ್ಲ ರಾಜ್ಯಗಳ ಪೊಲೀಸ್‌ ಮಹಾನಿರ್ದೇಶಕರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್‌ ಸಿಂಗ್‌ ಪಾಲ್ಗೊಳ್ಳಲಿದ್ದು, ಆ ಸಭೆಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಈ ಬಾಂಬ್‌ ಸಾಗಿಸಲಾಗುತ್ತಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT