ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಮಿಲ್ಸ್‌ ಅತ್ಯಾಚಾರ: ಗಲ್ಲು ಶಿಕ್ಷೆ ದೃಢೀಕರಿಸುವಂತೆ ಅರ್ಜಿ

Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಶಕ್ತಿ ಮಿಲ್ಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ವಿಧಿಸಲಾಗಿ­ರುವ ಮರಣ­ದಂಡನೆಯನ್ನು ದೃಢೀಕರಿ­ಸು­­ವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕಾನೂನಿನ ಪ್ರಕಾರ, ವಿಚಾರಣಾ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಹೈಕೋರ್ಟ್‌ ದೃಢಪಡಿಸ­ಬೇಕು. ರಾಜ್ಯ ಸರ್ಕಾರವು ಏಪ್ರಿಲ್‌ 15ರಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಶೀಘ್ರದಲ್ಲಿ ವಿಚಾರಣೆಗೆ ಬರಲಿದೆ. ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳು ಇನ್ನಷ್ಟೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕಾಗಿದೆ.

ಮುಂಬೈನ ಪಾಳುಬಿದ್ದಿರುವ ಶಕ್ತಿ ಮಿಲ್ಸ್‌ ಆವರಣದಲ್ಲಿ ಪತ್ರಿಕಾ ಛಾಯಾ­ಗ್ರಹಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಸೆಷನ್ಸ್‌ ನ್ಯಾಯಾಲಯವು  ವಿಜಯ್‌ ಜಾಧವ್‌ (19), ಮೊಹಮ್ಮದ್‌ ಖಾಸಿಮ್‌ ಬೆಂಗಾಳಿ (21), ಮೊಹಮ್ಮದ್‌ ಸಲೀಮ್‌ ಅನ್ಸಾರಿ (28) ಅವರಿಗೆ ಏಪ್ರಿಲ್‌ 4ರಂದು ಮರಣ­ದಂಡನೆ ಹಾಗೂ ಮತ್ತೊಬ್ಬ ಅಪರಾಧಿ ಸಿರಾಜ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT