ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಬಳಿಕ ಕಂಡ ನೀಲಿ ತಿಮಿಂಗಿಲ

Last Updated 22 ಮೇ 2015, 20:36 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಹಾರಾಷ್ಟ್ರದ ಸಿಂಧದುರ್ಗ ಕರಾವಳಿಯಲ್ಲಿ ಅಪರೂಪದ ಜೋಡಿ ನೀಲಿ ತಿಮಿಂಗಿಲಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಕಳೆದೊಂದು ಶತಮಾನದಲ್ಲಿ ಇದೇ ಮೊದಲ ಬಾರಿಗೆ ಈ ಬಗೆಯ ತಿಮಿಂಗಿಲಗಳು ಇಲ್ಲಿ ಕಂಡುಬಂದಿವೆ. ಇದು ತಾಯಿ ಮತ್ತು ಮರಿ ಇರುವ ನೀಲಿ ತಿಮಿಂಗಿಲಗಳಾಗಿವೆ ಎಂದು ಅರಣ್ಯ ಮುಖ್ಯ ಸಂರಕ್ಷಕ ಎನ್‌. ವಾಸುದೇವನ್ ತಿಳಿಸಿದ್ದಾರೆ.

ಮಹಾರಾಷ್ಟ್ರ ಕರಾವಳಿಯಲ್ಲಿ ಕಳೆದ ನೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಜಾತಿ ತಿಮಿಂಗಿಲ ಪತ್ತೆಯಾಗಿವೆ. 1914ರಲ್ಲಿ ನೀಲಿ ತಿಮಿಂಗಿಲಗಳು ಈ ಪ್ರದೇಶದಲ್ಲಿ ಕೊನೆಯ ಬಾರಿ ಕಂಡುಬಂದಿದ್ದವು.

ಮಾರ್ಚ್‌ನಿಂದ ಮೇ ತಿಂಗಳ ಅವಧಿಯಲ್ಲಿ ಸಿಂಧುದುರ್ಗ ಕರಾವಳಿಯ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಸಂಶೋಧಕರ ತಂಡಕ್ಕೆ ತಿಮಿಂಗಿಲಗಳು ಗೋಚರಿಸಿವೆ. ಈ ಸಮಯದಲ್ಲಿ ನಾಲ್ಕು ಬ್ರೂಡಸ್‌ ಜಾತಿಯ ತಿಮಿಂಗಿಲಗಳೂ ಪತ್ತೆಯಾಗಿವೆ. ಸಿಂಧುದುರ್ಗ ಕರಾವಳಿಯಲ್ಲಿ ಆರು ತಿಂಗಳಿನಿಂದ ತಿಮಿಂಗಿಲ ಸಂಖ್ಯೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ತಂಡವು ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸಂಶೋಧನೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT