ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಇಟ್ಟು ಗ್ರಾಮಸ್ಥರ ಪ್ರತಿಭಟನೆ

Last Updated 30 ಜೂನ್ 2015, 19:30 IST
ಅಕ್ಷರ ಗಾತ್ರ

ಕೊಪ್ಪಳ: ಅಂತ್ಯ ಸಂಸ್ಕಾರಕ್ಕೆ ಸ್ಥಳ ಸಿಗದೆ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ತಾಲ್ಲೂಕಿನ ಹ್ಯಾಟಿ ಮುಂಡರಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೇವಪ್ಪ ಸೋಮವಾರ ರಾತ್ರಿ ನಿಧನರಾದರು. ಗ್ರಾಮದಲ್ಲಿ ಸೂಕ್ತ ಸ್ಮಶಾನ ಇಲ್ಲದ ಕಾರಣ ಶವ ಸಂಸ್ಕಾರಕ್ಕೆ ಪರದಾಡಬೇಕಾಯಿತು.

ಸ್ಮಶಾನಕ್ಕೆ ಸ್ಥಳ ಸಿಗುವವರೆಗೂ ಶವ ಸಂಸ್ಕಾರ ಮಾಡು ವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದರು. ತುಂಗಭದ್ರಾ ಅಣೆಕಟ್ಟೆ ನಿರ್ಮಾಣ ಆದಂದಿನಿಂದ ಸ್ಥಳಾಂತರ ಗೊಳ್ಳುವ ಗ್ರಾಮವಾಗಿ ಗುರುತಿಸಲ್ಪಟ್ಟಿದೆ. ಅತ್ತ ಗ್ರಾಮ ಸ್ಥಳಾಂತರಗೊಳ್ಳಲಿಲ್ಲ. ಇತ್ತ ಸ್ಮಶಾ ನದಂತಹ ಕನಿಷ್ಠ ಬೇಡಿಕೆಯೂ ಈಡೇರಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಪುಟ್ಟರಾಮಯ್ಯ ಬಂದು ಗ್ರಾಮ ಸ್ಥರ ಮನವೊಲಿಸಲು ಪ್ರಯತ್ನಿಸಿದರು. ಸ್ಮಶಾನ ಜಾಗ ಸಿಗುವ ವರೆಗೂ ಪಟ್ಟು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪ್ರತಿ ಭಟನೆ ಮುಂದು ವರಿಸಿದರು. ಕೊನೆಗೆ ಊರಿನ ಸಮೀಪದ ಖಾಸಗಿ ಜಮೀನಿನಲ್ಲಿ ಶವಸಂಸ್ಕಾರ ನಡೆ ಸಲು ಸೂಚಿಸಿದರು. ‘ಸದ್ಯ ಶವ ಸಂಸ್ಕಾ ರಕ್ಕೆ ಅವಕಾಶ ಕೊಡಿ. ಜಮೀನಿನ ಮೌಲ್ಯ ನಿರ್ಧರಿಸಿ ಸ್ಮಶಾನವಾಗಿ ರೂಪಿ ಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ತಹಶಿೀ ಲ್ದಾರ್‌ ಭರವಸೆ ನೀಡಿದರು. ಬಳಿಕ ಅದೇ ಜಮೀನಿನಲ್ಲಿ ಶವ ಸಂಸ್ಕಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT