ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಸಂಸ್ಕಾರಕ್ಕೆ ತಂತ್ರಜ್ಞಾನ: ಉಮಾಭಾರತಿ

ಗಂಗಾ ನದಿ ಸ್ವಚ್ಛತೆಗೆ ಅಲ್ಪಾವಧಿ ಯೋಜನೆ
Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ವಾರಾಣಸಿ ಮತ್ತು ಹರಿದ್ವಾರ­ದಂತಹ ನಗರಗಳಲ್ಲಿ ನದಿ ತಟದ ಮೇಲೆ ಶವಗಳ ಅಂತ್ಯಕ್ರಿಯೆ ನಡೆಸುವುದರಿಂದ ಗಂಗಾ ನದಿಯ ಮಾಲಿನ್ಯ  ಹೆಚ್ಚಾಗುತ್ತಿದೆ.  ಈ ಮಾಲಿನ್ಯ ಕಡಿಮೆ ಮಾಡುವ ತಂತ್ರ­ಜ್ಞಾನ ಅಭಿ­ವೃದ್ಧಿ­ಪ­ಡಿಸಲು ಕೇಂದ್ರ  ಸರ್ಕಾರ ಸಮಿತಿ ರಚನೆ ಮಾಡಿದೆ.

ಸರ್ಕಾರದ ಈ ಕ್ರಮವನ್ನು ಸಾಧು, ಸಂತರು ಬೆಂಬಲಿಸಿದ್ದಾರೆ ಎಂದು ಜಲ­ಸಂಪ­ನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಖಾತೆ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

‘ಶವ ಸಂಸ್ಕಾರ­ಕ್ಕಾಗಿ ಅಭಿ­ವೃದ್ಧಿ­ಪಡಿ­ಸಿದ ತಂತ್ರ­ಜ್ಞಾನವನ್ನು ನಾವು ಸ್ವೀಕ­ರಿ­ಸುತ್ತೇವೆ ಎಂದು ಸಾಧು, ಸಂತರು ಹೇಳಿದ್ದಾರೆ. ಹಾಗಾಗಿ ಈ ತಂತ್ರಜ್ಞಾನ ಅಭಿವೃದ್ಧಿಪ­ಡಿಸಲು ತಂತ್ರ­ಜ್ಞರ ಸಮಿತಿ ರಚನೆ ಮಾಡಲಾ­ಗಿದೆ’ ಎಂದರು.

ರಾಷ್ಟ್ರೀಯ ಪರಿಸರ ಎಂಜಿನಿ­ಯ­ರಿಂಗ್‌ನ ಸಂಶೋಧನಾ ಸಂಸ್ಥೆಯ ನಿರ್ದೇ­­­ಶ­ಕರು, ಕೇಂದ್ರ ಮಾಲಿನ್ಯ ನಿಯಂ­ತ್ರಣ ಮಂಡ­ಳಿಯ ಕಾರ್ಯ­ದರ್ಶಿ, ಐಐಟಿ ಕಾನ್ಪುರದ ಹಿರಿಯ ಪ್ರೊಫೆಸರ್‌  ಸಮಿತಿ­ಯಲ್ಲಿದ್ದಾರೆ ಎಂದು ಉಮಾ­ಭಾರತಿ ತಿಳಿಸಿದರು.

ನದಿ ಮಲಿನಗೊಳ್ಳದಂತೆ ಮಾಡುವ ಎಲ್ಲ ತಂತ್ರಜ್ಞಾಗಳನ್ನೂ ಸಮಿತಿ ಪರಿಶೀ­ಲಿಸಲಿದೆ. ನದಿಯ ಮಾಲಿನ್ಯ ತಡೆ­ಯಲು ಅಲ್ಪಾವಧಿಯ ಯೋಜನೆ­ಗಳನ್ನು ಕೈಗೊ­ಳ್ಳ­ಲಾಗಿದೆ ಎಂದರು.

‘ನದಿಯಲ್ಲಿ ಸೇರುವ ಪೂಜೆಯ ಸಾಮಗ್ರಿ­ಗಳು ದೊಡ್ಡ ಕೊಡುಗೆ ನೀಡು­ತ್ತಿದೆ. ಈ ಬಗ್ಗೆಯೂ ಸರ್ಕಾರ ಕಾಳಜಿ ಹೊಂದಿದೆ’ ಎಂದು ಅವರು ನುಡಿದರು.

‘ಕಲುಷಿತ ನೀರು ನದಿಗೆ ಬಿಡದೆ ಅದನ್ನು ಕೃಷಿ ಮತ್ತು ಇತರ ಉದ್ದೇಶಕ್ಕೆ ಬಳಸಬೇಕು ಎಂದು ನಿರ್ಧರಿಸಲಾಗಿದೆ. ಈ ಕುರಿತು ಅ. 8ರಂದು ಕೈಗಾರಿಕಾ ಪ್ರತಿ­ನಿಧಿಗಳ ಸಭೆ ಕರೆಯಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT