ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಚಿಕಿತ್ಸೆ ದುರಂತ: ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟ ವಿಷ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬಿಲಾಸ್‌ಪುರ (ಪಿಟಿಐ): ಹದಿಮೂರು ಮಹಿಳೆಯರ ಜೀವ ಬಲಿಪಡೆದ ಸಂತಾನ-­­ಶಕ್ತಿ ಹರಣ ಶಸ್ತ್ರ­ಚಿಕಿತ್ಸೆ  ದುರಂತದ ವಾರದ ಬಳಿಕ   ಔಷಧಿ­­­ಗ­ಳಲ್ಲಿ  ವಿಷಕಾರಿ ಅಂಶಗಳಿರು­ವುದು ವೈದ್ಯ­­ಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ನೀಡಿದ ಮಾತ್ರೆ ಮತ್ತು ಔಷಧಗಳು ಕಳಪೆ ದರ್ಜೆ­ಯಿಂದ ಕೂಡಿದ್ದು ಅದರಲ್ಲಿ  ಜೀವಕ್ಕೆ ಮಾರಕವಾದ ವಿಷಕಾರಿ ವಸ್ತು­ಗಳಿರುವುದು ವೈದ್ಯಕೀಯ ಪರೀಕ್ಷೆ­ಯಿಂದ ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ಅಮರ್‌ ಅಗರವಾಲ್‌ ತಿಳಿಸಿದ್ದಾರೆ.

ಎಲ್ಲ ಪ್ರಯೋಗಾಲಯಗಳ ವರದಿ­ಗಳು ಕೈಸೇರಿದ್ದು ಔಷಧಿಗಳಲ್ಲಿದ್ದ ವಿಷ­ಕಾರಿ ವಸ್ತುಗಳು ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಸಾವಿಗೆ ಕಾರಣ ಎಂಬುದು ಪರೀಕ್ಷೆಯಿಂದ ದೃಢ­ಪಟ್ಟಿದೆ ಎಂದು ಸಚಿವರು ತಿಳಿಸಿದರು.

ಆದರೆ, ಯಾವ ಔಷಧದಲ್ಲಿ ಎಷ್ಟು ಪ್ರಮಾಣದಲ್ಲಿ ವಿಷಕಾರಿ ವಸ್ತುಗಳಿ­ದ್ದವು  ಮತ್ತು ಆ ವಿಷಕಾರಿ ವಸ್ತುಗಳು ಯಾವುವು ಎಂಬ ಮಾಹಿತಿಯನ್ನು ಸಚಿವರು ಬಹಿರಂಗಪಡಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT