ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರದಾ ಚಿಟ್‌ಫಂಡ್‌: ಎಸ್‌ಐಟಿ ರಚನೆ

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಶಾರದಾ ಚಿಟ್‌ ಫಂಡ್‌ ಹಗರಣದ ತನಿಖೆಗೆ ಸಿಬಿಐ ಸೋಮವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.

ಸಿಬಿಐನ ಜಂಟಿ ನಿರ್ದೇಶಕ ರಾಜೀವ್‌ ಸಿಂಗ್‌ ನೇತೃತ್ವದ ಎಸ್‌ಐಟಿ­ಯಲ್ಲಿ ಪಶ್ಚಿಮ ಬಂಗಾಳ, ಒಡಿಶಾ, ಈಶಾನ್ಯ ಭಾರತ ಮತ್ತು ಬಿಹಾರದ ಕೇಂದ್ರೀಯ ತನಿಖಾ ಸಂಸ್ಥೆಯ ಅಧಿ­ಕಾರಿ­ಗಳಿರುತ್ತಾರೆ ಎಂದು ಸಿಬಿಐ ವಕ್ತಾರ ಕಾಂಚನ್‌ ಪ್ರಸಾದ್‌ ತಿಳಿಸಿದ್ದಾರೆ.

‘ಹಗರಣದ ಸಂಬಂಧ ಎಫ್‌ಐಆರ್‌ ದಾಖಲಿಸುವುದಕ್ಕೂ ಮುನ್ನ ಸಿಬಿಐ ಅಗತ್ಯ ದಾಖಲೆಗಳನ್ನು ಕಲೆ ಹಾಕಲಿದೆ. ದೊಡ್ಡ ಸಂಚು ನಡೆದಿರುವ ಸಾಧ್ಯತೆ­ಯಿಂದಾಗಿ ವಿಶಾಲ ವ್ಯಾಪ್ತಿ­ಯಲ್ಲಿ ತನಿಖೆ ನಡೆಸ­ಲಾಗುವುದು’ ಎಂದು ಹೇಳಿದ್ದಾರೆ.

ಭಾರತೀಯ ಷೇರುಪೇಟೆ ನಿಯಂ­ತ್ರಣ ಮಂಡಳಿ (ಸೆಬಿ) ಮತ್ತು ಭಾರ­ತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪಾತ್ರದ ಕುರಿತಾಗಿಯೂ ತನಿಖೆ ನಡೆಸ­ಲಾಗುವುದು ಎಂದು ವಿವರಿಸಿದ್ದಾರೆ.

ಹಗರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ಸಿಬಿಐ ರಚಿಸಬೇಕು. ತನಿಖಾ ಸಂಸ್ಥೆಗೆ ಸಂಬಂಧಿಸಿದ ರಾಜ್ಯಗಳು ಸಹಕಾರ ನೀಡಬೇಕು ಮತ್ತು ಸೆಬಿ ಹಾಗೂ ಆರ್‌ಬಿಐ ಪಾತ್ರದ ಕುರಿತು  ತನಿಖೆ ನಡೆಸ­ಬೇಕೆಂದು ಸುಪ್ರೀಂಕೋರ್ಟ್‌ ಈಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ನಡೆಸಿ ತೀರ್ಪು ನೀಡಿತ್ತು.

ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ ಮತ್ತು ಬಿಹಾರ ರಾಜ್ಯದವರು ಶಾರದಾ ಚಿಟ್‌ ಫಂಡ್‌ನಲ್ಲಿ ಹೂಡಿದ್ದ ₨10,000 ಕೋಟಿ ವಂಚಿಸಿದ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT