ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಪ್‌ ಪರ್ವತ ಕೊರೆದ ನಾಸಾದ ಕ್ಯೂರಿಯಾಸಿಟಿ

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ನಾಸಾದ ಮಂಗಳ ನೌಕೆ ಕ್ಯೂರಿಯಾಸಿಟಿ ರೋವರ್, ಮಂಗಳನ ಐದು ಕಿಲೋ­ಮೀಟರ್‌ ಎತ್ತರದ ಪರ್ವತ ‘ಮೌಂಟ್ ಶಾರ್ಪ್‌’ನ  ತಳಪದರವನ್ನು ಕೊರೆ­ದಿದ್ದು, ಮಣ್ಣಿನ ಮಾದರಿ­ಯನ್ನು ಸಂಗ್ರ­ಹಿ­­ಸಿದೆ ಎಂದು ಮೂಲ­ಗಳು ತಿಳಿಸಿವೆ.

ಕ್ಯೂರಿಯಾಸಿಟಿಯಲ್ಲಿರುವ ಯಂತ್ರ­ಗಳು ಕಳೆದ ವಾರ ಪರ್ವತದ ತಳದಲ್ಲಿ 2.6 ಇಂಚು ಆಳಕ್ಕೆ ಕೊರೆದು ಮಣ್ಣು ಸಂಗ್ರಹಿಸಿದೆ. 5 ಕಿ.ಮೀ ಎತ್ತರ­ವಿರುವ ಮೌಂಟ್‌ ಶಾರ್ಪ್‌ನ ವಿವಿಧ ಪದರಗಳ ಮಾದರಿ­ಗಳ ಅಧ್ಯಯನ­ದಿಂದ, ಮಂಗ­ಳನ ವಾತಾ­ವರಣದಲ್ಲಿನ ಬದಲಾವ­ಣೆ ಬಗ್ಗೆ ಮಾಹಿತಿ ಲಭ್ಯವಾ­ಗ­ಲಿದೆ.

ಇದು  ಕ್ಯೂರಿಯಾಸಿಟಿಯ ಮುಖ್ಯ ಕಾರ್ಯ. ಕ್ಯೂರಿಯಾಸಿಟಿ ಈಗಷ್ಟೇ ಈ ಕೆಲಸ ಆರಂಭಿಸಿದ್ದು, ಪರ್ವತದ ಅತ್ಯಂತ ಮೇಲ್ಪದರದ­ವ­ರೆಗಿನ ಎಲ್ಲಾ ಪದರು­ಗಳ ಮಾದರಿ ಸಂಗ್ರಹಿಸಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT