ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ವ್ಯಾನ್‍ಗೆ ರೈಲು ಡಿಕ್ಕಿ: 8 ಮಕ್ಕಳು ಸಾವು

Last Updated 25 ಜುಲೈ 2016, 6:54 IST
ಅಕ್ಷರ ಗಾತ್ರ

ಭದೋಹಿ (ಪಿಟಿಐ): ಉತ್ತರ ಪ್ರದೇಶದ ಭದೋಹಿ ಬಳಿಯ ಔರಾಯೇ ಎಂಬಲ್ಲಿ ಮಾನವ ರಹಿತ ರೈಲ್ವೆ ಹಳಿ ಕ್ರಾಸಿಂಗ್‍ನಲ್ಲಿ ಶಾಲಾ ವ್ಯಾನ್‍ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ 8 ಮಕ್ಕಳು ಸಾವಿಗೀಡಾದ ಘಟನೆ ವರದಿಯಾಗಿದೆ.

ಸೋಮವಾರ ಬೆಳಗ್ಗೆ ಇಲ್ಲಿನ ಟೆಂಡರ್ ಹಾರ್ಟ್ ಶಾಲೆಯ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ  ವ್ಯಾನ್ ಕಾಟ್ಕಾ ಮಾಧೋಸಿಂಗ್ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ಗೇಟ್ ನಂಬರ್ 26 ನಲ್ಲಿ ದಾಟುತ್ತಿದ್ದಾಗ ವಾರಣಾಸಿ- ಅಲಹಾಬಾದ್ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದೆ.

ವ್ಯಾನ್‍ನಲ್ಲಿದ್ದ ಮಕ್ಕಳೆಲ್ಲರೂ 10ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ಗಾಯಗೊಂಡ ಮಕ್ಕಳನ್ನು ಬಿಹೆಚ್‍ಯು ಆಸ್ಪತ್ರೆ ದಾಖಲಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT