ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ದಿನೇಶ್ ಮೊಹಾನಿಯಾಗೆ ಜಾಮೀನು ನಿರಾಕರಣೆ

Last Updated 27 ಜೂನ್ 2016, 11:08 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಲೈಂಗಿಕ ಕಿರುಕುಳ ನೀಡಿದ ಆಪಾದನೆ ಮೇಲೆ ಬಂಧಿಸಲಾಗಿರುವ ಎಎಪಿ ಶಾಸಕ ದಿನೇಶ್ ಮೊಹಾನಿಯಾ ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ನಿರಾಕರಿಸಿದೆ.

ಲೈಂಗಿಕ ಕಿರುಕುಳ ನೀಡಿದ ಆಪಾದನೆ ಮೇಲೆ ಶನಿವಾರ ದಿನೇಶ್ ಮೊಹಾನಿಯಾ ಅವರನ್ನು ಬಂಧಿಸಲಾಗಿದೆ. ದೆಹಲಿ ಜಲ ಮಂಡಳಿ ಉಪಾಧ್ಯಕ್ಷರೂ ಆಗಿರುವ ಮೊಹಾನಿಯಾ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗಲೇ ಪೊಲೀಸರು ಬಂಧಿಸಿದ್ದರು. 

ಮೊಹಾನಿಯಾ ಅವರ ಬಂಧನವನ್ನು ಖಂಡಿಸಿ ಭಾನುವಾರ ಪ್ರಧಾನಿ ಅವರ ಅಧಿಕೃತ ನಿವಾಸದ ಬಳಿ ಪ್ರತಿಭಟನಾ ಮೆರವಣಿಗೆ ತೆರಳುತ್ತಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನಿಷ್‌ ಸಿಸೋಡಿಯಾ ಸೇರಿಂದತೆ ಎಎಪಿಯ 60 ಶಾಸಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಜೂನ್‌ 22ರಂದು ಕೆಲವು ಮಹಿಳೆಯರು ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆಯ ಬಗ್ಗೆ ದೂರು ನೀಡಲು ಬಂದಾಗ ಅವರ ಜತೆ ಮೊಹಾನಿಯಾ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರು ನೀಡಲಾಗಿತ್ತು. ನಂತರ ಐಪಿಸಿ ಕಲಂ 323, 506 ಮತ್ತು 509ರ ಅಡಿಯಲ್ಲಿ ದಕ್ಷಿಣ ದೆಹಲಿಯ ನೇಬಿ ಸರಾಯಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಲೈಂಗಿಕ ಸಂಜ್ಞೆ, ಮಹಿಳೆಯ ಘನತೆಗೆ ಧಕ್ಕೆ, ಲೈಂಗಿಕ ಕಿರುಕುಳ, ಬಲಾತ್ಕಾರಕ್ಕೆ ಯತ್ನಿಸಿದ ಆಪಾದನೆಗಳನ್ನು ಮೊಹಾನಿಯಾ ವಿರುದ್ಧ ಹೊರಿಸಲಾಗಿದೆ. ಐಪಿಸಿ ಕಲಂ 323, 506, 509, 354, 354ಎ, 354ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT