ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ಬೆದರಿಕೆ: ಮುಲಾಯಂಗೆ ಆಯೋಗ ಎಚ್ಚರಿಕೆ

Last Updated 25 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗುತ್ತಿಗೆ ಆಧಾರದ ಮೇಲೆ ನೇಮ­ಕವಾಗಿರುವ ಪ್ರಾಥಮಿಕ ಶಾಲಾ­ ಶಿಕ್ಷಕರಿಗೆ ತಮ್ಮ ಪಕ್ಷಕ್ಕೆ ಮತ ಹಾಕದಿದ್ದರೆ ಕೆಲಸ ಕಳೆದುಕೊಳ್ಳ­ಬೇ­ಕಾ­ದೀತು ಎಂಬ ಬೆದರಿಕೆ ಹಾಕಿದ್ದ ಸಮಾ­ಜ­ವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಅವ­ರಿಗೆ ಚುನಾ­ವಣಾ ಆಯೋಗ ಎಚ್ಚರಿಕೆ ನೀಡಿ, ಪ್ರಕರ­ಣ ಮುಕ್ತಾಯ ಮಾಡಿದೆ.

ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಚುನಾವಣಾ ಆಯೋಗ ನೀಡಿದ್ದ ನೋಟಿಸ್‌ಗೆ ಉತ್ತರಿಸಿದ ಮುಲಾಯಂ ಅವರು, ಚುನಾವಣಾ ಪ್ರಚಾರದ ವೇಳೆ ಗುತ್ತಿಗೆ ಆಧಾರದ ಶಿಕ್ಷಕರ ವಿಚಾರವನ್ನು ಪ್ರಸ್ತಾಪಿಸು­ವು­ದಿಲ್ಲ ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅವರಿಗೆ ಇನ್ನು ಮುಂದೆ ನೀತಿ ಸಂಹಿತೆಗೆ ಧಕ್ಕೆಯಾಗುವಂತಹ ಯಾವುದೇ ಹೇಳಿಕೆಯನ್ನು ನೀಡದಂತೆ ಎಚ್ಚರಿಕೆ ನೀಡಿ, ಪ್ರಕರಣವನ್ನು ಕೊನೆಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT