ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಕೊರತೆ: ಮಕ್ಕಳ ಶಿಕ್ಷಣಕ್ಕೆ ಪೆಟ್ಟು

ಶಿಕ್ಷಕರ ಕೊರತೆ: ಮಕ್ಕಳ ಶಿಕ್ಷಣಕ್ಕೆ ಪೆಟ್ಟು
Last Updated 23 ಜುಲೈ 2016, 7:13 IST
ಅಕ್ಷರ ಗಾತ್ರ

ಅಜ್ಜಂಪುರ: ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಸರ್ಕಾರಿ ಶಾಲೆಯಾಗಿ ಹೊರ ಹೊಮ್ಮಿ ರುವ ಪಟ್ಟಣ ಸಮೀಪದ ಸೊಕ್ಕೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಸೌಲಭ್ಯಗಳಿಂದ ವಂಚಿತವಾಗಿದೆ. ವಿದ್ಯಾರ್ಥಿಗಳು ಆಸಕ್ತಿ ಯಿಂದ ಶಿಕ್ಷಣ ಪಡೆಯುವುದಕ್ಕೆ ಪರದಾ ಡುವಂಥ ಸ್ಥಿತಿಯಲ್ಲಿ ಇದ್ದಾರೆ. ಇನ್ನು ಕುಳಿತುಕೊಳ್ಳುವುದಕ್ಕೆ ಜಾಗವಿಲ್ಲದೇ ವಾತಾವರಣ ನಿರ್ಮಾಣವಾಗಿದೆ.

ತರಗತಿಯಲ್ಲಿ ವಿದ್ಯಾರ್ಥಿಗಳಿದ್ದರೂ ಅವರಿಗೆ ಸರಿಯಾಗಿ ಪಾಠ ಮಾಡುವ ಶಿಕ್ಷಕ ಕೊರೆತೆ ಇದೆ. ಪರಿಣಾಮ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆ ಉಂಟಾಗುತ್ತಿದೆ. ಇದು ಕಲೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೊಠಡಿ, ಹಾಗೂ ಶಿಕ್ಷಕರ ಸಮಸ್ಯೆ ಸರ್ಕಾರಿ ಶಾಲೆಯನ್ನು ಕಾಡುತ್ತಿದೆ.

ವಿದ್ಯಾರ್ಥಿಗಳು ಶೌಚಾಲಯಕ್ಕೆ ಹೋಗುವುದಕ್ಕೆ ನಾಚಿಕೆ ಪಡುವಂಥ ವಾತಾವರಣ ಇಲ್ಲಿದೆ. ಶೌಚಾಲಯವಿದ್ದರು ಬಳಕೆಗೆ ಬರುತ್ತಿಲ್ಲ. ಹಲವಾರು ಸಮಸ್ಯೆಗಳ ನಡುವೆ ಕ್ರೀಡೆ, ವಿದ್ಯಾರ್ಥಿ ವೇತನಕ್ಕಾಗಿ ರಾಜ್ಯ ಮಟ್ಟದಲ್ಲಿ ನಡೆಯುವ ಎನ್‍ಎಂಎಂಎಸ್ ಸ್ಪರ್ಧಾ ತ್ಮಕ ಪರೀಕ್ಷೆ ಹಾಗೂ ಎಸ್ಸೆಸ್ಸೆಲ್‍ಸಿಯಲ್ಲಿ ಐದು ವರ್ಷಗಳಿಂದಲೂ ಶೇ 90ಕ್ಕಿಂತ ಅಧಿಕ ಫಲಿತಾಂಶ ದಾಖಲಿಸುತ್ತಿದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಲೆಯ ಅಭಿವೃದ್ಧಿಗೆ ಯಾವುದೇ ಶ್ರಮ ವಹಿಸುತ್ತಿಲ್ಲ ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ. 

ಪ್ರಸ್ತುತ ಶಾಲೆಯಲ್ಲಿ ತಾಲ್ಲೂಕಿನ 43 ವಿವಿಧ ಗ್ರಾಮಗಳ 341 ವಿದ್ಯಾರ್ಥಿಗಳು ಓದುತ್ತಿದ್ದಾರೆ. 8,9,10 ನೇ ತರಗತಿಗ ಳನ್ನು ಕನ್ನಡ ಮತ್ತು ಆಂಗ್ಲ ಭಾಷಾ ವಿಭಾಗಗಳಾಗಿ ವಿಂಗಡಿಸ ಲಾಗಿದೆ. 8 ಮತ್ತು 9 ನೇ ತರಗತಿ ಆಂಗ್ಲ ಮಾಧ್ಯಮ ದಲ್ಲಿ ಕ್ರಮವಾಗಿ 89, 81 ವಿದ್ಯಾರ್ಥಿ ಗಳಿದ್ದಾರೆ. ಸರ್ಕಾರದ ಆದೇಶದಲ್ಲಿ 70ಕ್ಕಿಂತ ಅಧಿಕ ವಿದ್ಯಾರ್ಥಿಗಳು ಒಂದು ತರಗತಿಯಲ್ಲಿದ್ದರೆ, ಅದನ್ನು ವಿಭಾಗಿಸಿ, ಎರಡು ತರಗತಿ ಮಾಡಬೇಕು ಎಂಬ ಆದೇಶವಿದ್ದರೂ, ಅದು ಇಲ್ಲಿ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಪಾಲಕರದು.

ಶೈಕ್ಷಣಿಕ ಚಟುವಟಿಕೆ ಆಧಾರಿತ ನಿರಂತರ ಮೌಲ್ಯ ಮಾಪನ ಬೋಧನಾ ಕ್ರಮ ಜಾರಿಯಲ್ಲಿದೆ. ಈ ಪ್ರಕಾರ ಶಿಕ್ಷಕ ಭೋಧನೆ ಜತೆ ಜತೆಗೆ ಪ್ರತೀ ವಿದ್ಯಾರ್ಥಿಯ ಚಟುವಟಿಕೆಗಳನ್ನು ಪ್ರತೀ ಹಂತದಲ್ಲೂ ಪರೀಕ್ಷಿಸುತ್ತಿರಬೇಕು. ಇರುವ 45 ನಿಮಿಶಗಳಲ್ಲಿ ವರ್ಷವಿಡೀ ಪಠ್ಯಕ್ರಮ ಮುಗಿಸುವುದೇ ಕಷ್ಠ ಹಾಗಿರುವಾಗ 90 ವಿದ್ಯಾರ್ಥಿಗಳ ಕಡೆಗೆ ಹೇಗೆ ವೈಯಕ್ತಿಕ ಗಮನ ಹರಿಸುವುದು? ಮೌಲ್ಯಮಾಪನ ಹೇಗೆ ಸಾಧ್ಯ?  ಸರ್ಕಾರ ಜಾರಿಗೆ ತಂದಿರುವ ನಿರಂತರ ಮೌಲ್ಯ ಮಾಪನ ಪದ್ದತಿ ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತದೆ ಎನ್ನುತ್ತಾರೆ ಶಿಕ್ಷಕರೊಬ್ಬರು.

ಇದೂವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮಕ್ಕೆ ಸರಿ ಸಮನಾಗಿ ವಿದ್ಯಾರ್ಥಿ ಗಳು ದಾಖಲಾಗುತ್ತಿ ರುವುದರಿಂದ ಸಮಸ್ಯೆ ಕಾಡುತ್ತಿರಲಿಲ್ಲ. ಪ್ರಸ್ತುತ ಆಂಗ್ಲ ಮಾಧ್ಯಮಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇವರಿಗೆ ಪ್ರತ್ಯೇಕ ವಿಭಾಗದಲ್ಲಿ ತರಗತಿ ನಡಸದಿದ್ದರೆ ಮುಂಬರುವ ಪರೀಕ್ಷೆಯ ಫಲಿತಾಂಶದಲ್ಲಿ ಇಳಿಕೆ ಆಗಬಹುದು. ಹಾಗಾಗಿ ಶಾಲೆಗೆ ಕನಿಷ್ಠ ಎರಡು ಕೊಠಡಿ ಮತ್ತು ತುರ್ತಾಗಿ ಕನ್ನಡ, ಆಂಗ್ಲಭಾಷಾ ಮತ್ತು ವಿಜ್ಞಾನ ಶಿಕ್ಷಕರನ್ನು ಮಂಜೂರಿ ಮಾಡುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರು, ಶಾಸ ಕರು, ಬಿಇಒ, ಜಿಲ್ಲಾ ಶಿಕ್ಷಣ ಉಪ ನಿದೇರ್ಶಕರಿಗೆ ಮನವಿ ಮಾಡಲಾಗಿತ್ತು. ಆದರೆ ಯಾವ ಪ್ರಯೋಜನವೂ ಆಗಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ಚಂದ್ರ ಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆಯಲ್ಲಿ ಒಂದು ಶೌಚಾಲಯ ವಿದೆ. 341 ವಿದ್ಯಾರ್ಥಿಗಳಿಗೆ ಸಾಲದು. ಅದರಲ್ಲೂ ಮುಜುಗರಕ್ಕೆ ಒಳಗಾಗುವ ಕೆಲವು ವಿದ್ಯಾರ್ಥಿನಿಯರು, ಶೌಚಕ್ಕೇ ತೆರಳುವುದಿಲ್ಲ.ಕೂಡಲೇ ಶೌಚಾಲಯ ನಿರ್ಮಾಣ ಮಾಡುವಂತೆ ಹಾಗೂ ಅಪೂ ರ್ಣಗೊಂಡಿರುವ ಕಾಂಪೌಂಡ್ ಪೂರ್ಣ ಗೊಳಿಸಲು ಅಗತ್ಯ ಕ್ರಮ ಕೈಗೊ ಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.

ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾ ಣಕ್ಕೆ ಸಾಕಷ್ಟು ಅನುದಾನ, ಶಿಕ್ಷಣ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ಸೇರಿದಂತೆ ಹಲವು ಯೋಜನೆ ಜಾರಿಗೊಳಿಸಿದೆ.

ಆದರೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸರಿಯಿಲ್ಲ, ಕಡಿಮೆ ಫಲಿತಾಂಶ ಬರುತ್ತಿದೆ ಎಂಬ ಆರೋಪ ಇವೆ. ಇನ್ನು ಕಡಿಮೆ ವಿದ್ಯಾರ್ಥಿಗಳಿದ್ದು,  ಮಕ್ಕಳಿಲ್ಲದೇ ಶಾಲೆ ಮುಚ್ಚ ಲಾಗಿದೆ ಎಂಬ ದೂರುಗಳೂ ಸಾಮಾನ್ಯ ವಾಗಿದ್ದು, ಸರ್ಕಾರಿ ಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿ ಸಬೇಕು ಎಂದು ಗ್ರಾಮಸ್ಥರು, ವಿದ್ಯಾರ್ಥಿ ಗಳ ಪಾಲಕರು ಆಗ್ರಹಿಸಿದ್ದಾರೆ.      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT