ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕಿ ಮೇಲೆ ಅತ್ಯಾಚಾರ: ಬಂಧನ

Last Updated 6 ಜುಲೈ 2014, 19:30 IST
ಅಕ್ಷರ ಗಾತ್ರ

ಮುಜಫ್ಫರ್‌ನಗರ (ಪಿಟಿಐ): 23 ವರ್ಷದ ಶಿಕ್ಷಕಿಯ ಮೇಲೆ ಯುವಕ­ನೊಬ್ಬ ಅತ್ಯಾಚಾರ ಎಸಗಿದ್ದು, ಇದನ್ನು ಆತನ ಸ್ನೇಹಿತರಿಬ್ಬರು ವಿಡಿಯೊ ಚಿತ್ರೀಕ­ರಣ ಮಾಡಿ­ಕೊಂಡ ಘಟನೆ ಜಿಲ್ಲೆಯ ಬಲ್ವಖೇರಿ ಗ್ರಾಮದಲ್ಲಿ ನಡೆದಿದೆ.

ಆರೋಪಿಗಳಾದ ವಿಪಿನ್‌, ಮೋಹಿತ್‌ ಹಾಗೂ ಸೌರಭ್‌­ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಕಾಲೇಜು ವಿದ್ಯಾರ್ಥಿಗಳು. ತಾವು ಕೆಲಸ ಮಾಡುವ ಖಾಸಗಿ ಶಾಲೆಯೊಂದಕ್ಕೆ ಮಕ್ಕಳ ಶಾಲಾ ದಾಖ­ಲಾತಿಗಾಗಿ ಶಿಕ್ಷಕಿ ಮನೆ ಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದರು. ಆಗ ಈ ಕೃತ್ಯ ನಡೆದಿದೆ.

‘ಮೋಹಿತ್‌ ಎಂಬ ಯುವಕ ಹಿಂದಿನಿಂದ ಬಂದು ನನ್ನ ಬಾಯಿ ಅದುಮಿ ಹಿಡಿದ. ನನಗೆ ಕೂಗಲು ಸಾಧ್ಯವಾಗಲಿಲ್ಲ. ಆತ ನನ್ನನ್ನು ಖಾಲಿ ಮನೆಯೊಂದಕ್ಕೆ ಎಳೆದುಕೊಂಡು ಹೋದ. ನಂತರ ತನ್ನ ಇಬ್ಬರು ಸ್ನೇಹಿ­ತ­ರಿಗೆ ಕರೆ ಮಾಡಿ ಬರ ಹೇಳಿದ. ಮೋಹಿತ್‌ ನನ್ನ ಮೇಲೆ ಅತ್ಯಾಚಾರ ನಡೆ­ಸು­ತ್ತಿದ್ದಾಗ ಅವರಿಬ್ಬರು ಚಿತ್ರೀ­ಕ­ರಣ ಮಾಡಿಕೊಂಡರು’ ಎಂದು ಶಿಕ್ಷಕಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT