ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕ ವೃಂದಕ್ಕೆ ಖುಷಿ

ಅಕ್ಷರ ಗಾತ್ರ

ಕಳೆದ ಏಪ್ರಿಲ್‌– ಮೇ ತಿಂಗಳಿನಲ್ಲಿ ನಡೆದ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯ ವರದಿ ಸೆಪ್ಟೆಂಬರ್ ಮೊದಲ ವಾರ ಪ್ರಕಟಗೊಳ್ಳುವ (ಪ್ರ.ವಾ. ಜುಲೈ 6) ಸುದ್ದಿ ಓದಿ ಸಮೀಕ್ಷಾ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಖುಷಿಯಾಗಿರಲೇಬೇಕು! ಏಕೆಂದರೆ, ಸರ್ಕಾರ ಅವರಿಗೆ ಕೊಡಬೇಕಾಗಿದ್ದ ಗೌರವಧನ ಇನ್ನೆರಡು ತಿಂಗಳಿಗಾದರೂ ಸಿಗುತ್ತದೆ ಎಂಬ ಭರವಸೆ ಈಗ ದೊರೆತಿದೆ.

ಬೇಸಿಗೆಯ ಬಿರುಬಿಸಿಲಿನಲ್ಲಿ ಮನೆಮನೆಗೆ ತೆರಳಿ ಐವತ್ತಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆಹಾಕುವುದರ ಜೊತೆಗೆ, ಮನೆಯವರ ನೂರಾರು ಪ್ರಶ್ನೆಗಳಿಗೆ ಉ(ತ)ತ್ತರಿಸಿ ಹೈರಾಣಾದ ಶಿಕ್ಷಕ ವೃಂದಕ್ಕೆ, ಸಮೀಕ್ಷಾ ಕಾರ್ಯ ಮುಗಿಸಿ ಎರಡು ತಿಂಗಳು ಕಳೆದರೂ ಗೌರವಧನ ತಲುಪಿಲ್ಲ. ಈ ಕುರಿತು ವಿಚಾರಿಸಿದಾಗ ಸ್ಪಷ್ಟ ಉತ್ತರವಿಲ್ಲ.

ಗಾಳಿ ಸುದ್ದಿ ಪ್ರಕಾರ, ವರದಿ ಪ್ರಕಟಗೊಂಡ ಮೇಲಷ್ಟೇ ಗೌರವಧನ ಎಂಬ ವಿಷಯ ಹರಿದಾಡುತ್ತಿದೆ. ಇದರಿಂದ ಬೇಸರಗೊಂಡ ಕೆಲ ಶಿಕ್ಷಕರು ‘ಫಲಾನುಭವಿಗಳಿಗೆ ಸೌಲಭ್ಯ ಸಿಕ್ಕ ಮೇಲೆ ಕೊಡಲಿ ಬಿಡಿ’ ಎಂದಿದ್ದೂ ಗಾಳಿಸುದ್ದಿಯೇ! ಅದೇನೇ ಇರಲಿ, ಸಕಾಲಕ್ಕೆ ಅದು ದೊರೆತರೆ ಅದನ್ನು ಗೌರವಧನ ಎನ್ನಲು ಯೋಗ್ಯವಾಗುತ್ತದೆ, ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT