ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ವೈಫಲ್ಯ

Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮಹಾನಗರದಲ್ಲಿ, ದುಡ್ಡು  ಯಾರು ಬೇಕಾ­ದರೂ ಗಳಿಸಬಹುದು; ನ್ಯಾಯವಾಗೂ ಸಂಪಾದಿಸಬಹುದು. ಮನುಷ್ಯರಾಗಿ ಬದುಕು­ವುದೇ ಮೂಲ ಸಮಸ್ಯೆ. ಮನೆಯಿಂದ ಕದ್ದೋಡಿ­ಬಂದ 12 ವರ್ಷದ ಚೂಟಿ ಹುಡುಗನ ಕತೆ (ಪ್ರ.ವಾ., ಏ.೨೧), ಇದಕ್ಕೆ ಉದಾಹರಣೆ.

ಧೈರ್ಯ, ಸಾಹಸ, ಕಾಮನ್‌ಸೆನ್ಸ್ ಇದ್ದ ಹುಡುಗ, ಓಡಿ ಬಂದದ್ದು, ಶಾಲಾ ಮಟ್ಟದ ಪರೀಕ್ಷೆ ಭಯದಿಂದಂತೆ! ಇಂಥದು ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆ. ಛಲ–-ಸಾಹಸಗಳನ್ನುಳ್ಳ ಎಷ್ಟೆಷ್ಟು ಬುದ್ಧಿವಂತ ಮಕ್ಕಳನ್ನು ಈ ಅರ್ಥ­ರಹಿತ ಶಿಕ್ಷಣ, ಪರೋಕ್ಷವಾಗಿ ಕ್ರೈಂ ಕೂಪಕ್ಕೆ ತಳ್ಳು­ತ್ತಿ­ದೆಯೋ? ಮಕ್ಕಳನ್ನು ಶಾಲೆಗೆ ಕಳಿಸು­ವುದು, ಅವರು ಮನುಷ್ಯ ಸಮಾಜದ ಅಂಗ­ವಾಗಿ ಬದುಕುವ ಶಿಸ್ತು, ಸಂಯಮ ಕಲಿಯು­ವು­ದಕ್ಕೆ; ಸಾಫ್ಟ್‌ವೇರ್  ಎಂಜಿನಿಯರ್ ಆಗುವುದು ಆಮೇಲಿನ ಮಾತು.

ಮನುಷ್ಯತ್ವದ ಮೌಲ್ಯ, ತಂದೆ-ತಾಯಿಗಳಿಗೆ ಮೊದಲು ಗೊತ್ತಿರಬೇಕಲ್ಲ?! ಈ ಹುಡುಗನ ಸಾಹಸ ಇತರೆ ಮಕ್ಕಳಿಗೆ ಪ್ರೇರಣೆ ಆಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT