ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಬಿರಕ್ಕೆ ಅರ್ಥಪೂರ್ಣ ತೆರೆ

Last Updated 21 ಮೇ 2015, 19:30 IST
ಅಕ್ಷರ ಗಾತ್ರ

ಕಳೆದ ಮಂಗಳವಾರ ನಗರದ ಹಲವೆಡೆ ಮಳೆಯಾದರೆ ಗವಿಪುರದ ಉದಯ ಭಾನು ಕಲಾ ಸಂಘದಲ್ಲಿ ಸಾಮಾನ್ಯ ಮಳೆಯೊಂದಿಗೆ ಸಾಂಸ್ಕೃತಿಕ ಮಳೆಯೋ ಮೇಳೈಸಿತು. ಮೈತ್ರಿ ಕಲಾ ತಂಡ ನಡೆಸಿದ ಬೇಸಿಗೆ ಶಿಬಿರದ ಮುಕ್ತಾಯ  ಕಾರ್ಯಕ್ರಮದ ಅಂಗವಾಗಿ ಶಿಬಿರಾರ್ಥಿಗಳು ಹಾಗೂ ಮೈತ್ರಿ ಕಲಾ ತಂಡದ ವಿದ್ಯಾರ್ಥಿಗಳು ಜೊತೆಯಾಗಿ ಸಂಗೀತ, ನೃತ್ಯ ಹಾಗೂ ನಾಟಕಗಳನ್ನು ಪ್ರದರ್ಶಿಸಿದರು.

ಜಾನಪದ ನೃತ್ಯ, ಸಿನಿಮಾ ನೃತ್ಯ, ಭರತ ನಾಟ್ಯದೊಂದಿಗೆ ವಿದ್ಯಾರ್ಥಿಗಳು ಕವಿತಾಕೃಷ್ಣ ಅವರ ರಚನೆ ಹಾಗೂ ಮಹಾಪರ್ವ ಸಂಚಿಕೆ ನಿರ್ದೇಶಕ ಯಶವಂತ್‌ ಅವರ ನಿರ್ದೇಶನದಲ್ಲಿ ದೇಶಪ್ರೇಮದೊಂದಿಗೆ ಮಾನವೀಯ ಮೌಲ್ಯಗಳನ್ನು ಸಾರುವ ‘ಕನ್ನಡ ಹುಲಿ ಟಿಪ್ಪು ಸುಲ್ತಾನ್’ ಎಂಬ ನಾಟಕವನ್ನೂ ಪ್ರದರ್ಶಿಸಿದರು. ಮಕ್ಕಳ ಭಾವಪೂರ್ಣ ಅಭಿನಯ ಹಾಗೂ ಮೈನವಿರೇಳಿಸುವ ಯುದ್ಧದ ಸನ್ನಿವೇಶಗಳು ಪ್ರೇಕ್ಷರನ್ನೂ ರೋಮಾಂಚನಗೊಳಿಸಿದವು.

ಟಿಪ್ಪು ಸುಲ್ತಾನನ ಪಟ್ಟಾಭಿಷೇಕದಿಂದ ಪ್ರಾರಂಭವಾಗುವ ನಾಟಕ, ಆತ ಪರ ಸ್ತ್ರೀಯನ್ನು ಒಡಹುಟ್ಟಿದವಳು ಎಂದು ಭಾವಿಸುವ, ಪರಧರ್ಮವನ್ನೂ ಗೌರವಿಸುವ, ಅನ್ಯಾಯವನ್ನು ಖಂಡಿಸುವ ಮತ್ತು ದೇಶಪ್ರೇಮದ ಗುಣಗಳನ್ನು ತೋರಿಸುತ್ತಾ ಹೋಗುತ್ತದೆ. ಟಿಪ್ಪುವಿನ ಮರಣ ಪ್ರಸಂಗದೊಂದಿಗೆ ಮುಕ್ತಾಯವಾಗುತ್ತದೆ. ಮಧ್ಯೆ ಬ್ರಿಟಿಷರ ಆರ್ಭಟ, ದೇಶದ್ರೋಹಿಗಳ ಕುತಂತ್ರ ಮತ್ತು ಹಾಸ್ಯ ಸಮನಾಗಿ ಬೆರೆತಿದ್ದವು. ವಿಶೇಷ ನೃತ್ಯದಲ್ಲಿ ಶ್ರೀ‌ ಆದಿಶಕ್ತಿ ಕೆಂಪಮ್ಮನಾಗಿ ತಂಡದ ವಿದ್ಯಾರ್ಥಿ ಸ್ಫೂರ್ತಿ ಮತ್ತು ಭಕ್ತನಾಗಿ ಮೈತ್ರಿ ಕಲಾ ತಂಡದ ಪ್ರಧಾನ ಕಾರ್ಯದರ್ಶಿ ಜಿ.ಎಂ.ಮಹದೇವ ಹೆಜ್ಜೆ ಹಾಕಿದರು. 
                                                                    
ಇದೇ ವೇಳೆ ಶಿಬಿರದಲ್ಲಿ ಮಕ್ಕಳಿಗೆ ತರಬೇತಿ ನೀಡಿದ ಸಂಗೀತ ತರಬೇತುದಾರ ನಳನಿ ಭೂಷಣ್, ನಾಟಕ ತರಬೇತುದಾರ ಯಶವಂತ್, ಯೋಗ ತರಬೇತುದಾರ ಎನ್.ಶ್ರೀನಾಥ್, ನೃತ್ಯ ತರಬೇತುದಾರ ಹೇಮಂತ್‌ಕುಮಾರ್ ಬಿ.ಆರ್, ಭರತನಾಟ್ಯ ತರಬೇತುದಾರ  ಸಹನಾ ಎಚ್.ಎಸ್. ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆದಿತ್ಯ, ಹರ್ಷಿತ, ಭಾವನ, ಪ್ರೀತು, ಸ್ಫೂರ್ತಿ, ಅಪರ್ಣ, ಕೋಮಲ, ಲೋಕೇಶ್, ಯಶವಂತ, ಪ್ರಿಯ, ಶ್ವೇತಾ, ಯಶಸ್ವಿನಿ, ಪ್ರಶಾಂತ್, ಹರ್ಷವರ್ಧನ್, ಅಭಿಷೇಕ್, ತೇಜಸ್‌ ಗೌಡ, ಸಿಂಚನ, ಗೌರವ್, ಕುಶಲ, ಜ್ಯೋತಿ, ಹರ್ಷಿತ, ಪ್ರಜ್ಞಾ, ಚೇತನ್, ಹರ್ಷಿತ್, ಚಿರಂತನ್, ನೀತಿನ್, ದರ್ಶನಿ, ಸ್ಪಂದನ, ತನುಶ್ರೀ, ರೇವತಿ, ರಿತೇಶ್‌ಯಾದವ್, ಗಾನವಿ, ನವ್ಯ, ಭೂಮಿಕ, ಕೌಶಲ್, ಶ್ರೇಯಸ್, ವೈಷ್ಣವಿ, ಶರಣ್, ಜಾನ್, ಶ್ರೀಕಾರ್, ಬೃಂದ, ತೃಪ್ತಿಶ್ರೀ, ಚಿನ್ಮಯ್ ಮುಂತಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಟಿ.ಜಿ.ಹರೀಶ್‌ ಅವರ ಸಂಗೀತ, ಫಣೀಶ್‌ ಅವರ ಪ್ರಸಾಧನ ಹಾಗೂ  ಎನ್.ಶ್ರೀನಾಥ್‌ ನಿರೂಪಣೆ ವಿಶೇಷ ಮೆರುಗು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT