ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರೂರಿನಲ್ಲಿ ಸಮುದ್ರ ನೀರು ಸಂಸ್ಕರಣಾ ಘಟಕ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್. ಕೆ. ಪಾಟೀಲ್ ಪ್ರಕಟ
Last Updated 19 ಏಪ್ರಿಲ್ 2015, 12:29 IST
ಅಕ್ಷರ ಗಾತ್ರ

ಶಿರೂರು (ಬೈಂದೂರು):  ‘ಸಿಂಗಾಪುರ ದಲ್ಲಿರುವಂತೆ ಸಮುದ್ರದ ನೀರಿನ ಬಳಕೆ ಮಾಡುವ ಅಗತ್ಯವಿದೆ. ಶಿರೂರಿನಲ್ಲಿ ದೇಶದ ಮೊದಲ ಸಮುದ್ರ ನೀರು ಸಂಸ್ಕ ರಣಾ ಘಟಕ ಸ್ಥಾಪಿಸಿ ಅದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲಾಗು ವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್. ಕೆ. ಪಾಟೀಲ್ ಪ್ರಕಟಿಸಿದರು.

ಮೂರು ದಿನಗಳ ಶಿರೂರು ಉತ್ಸ ವದ ಎರಡನೆಯ ದಿನವಾದ ಶನಿವಾರ ಭಾಗವಹಿಸಿದ್ದ ಅವರು ಆಸ್ಕರ್ ಫೆರ್ನಾಂಡೀಸ್ ಅವರ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ 33 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಪೇಟೆಕೇರಿ ರಸ್ತೆಯ ಸೇತುವೆಯನ್ನುಉದ್ಘಾಟಿಸಿದ ಅವರು ಮಾತನಾಡಿದರು.

‘ಸಂಸದ ಆಸ್ಕರ್ ಫರ್ನಾಂಡೀಸ್ ಸಂಸದರ ಆದರ್ಶ ಗ್ರಾಮ ಯೋಜನೆಗೆ ಶಿರೂರನ್ನು ಆಯ್ದುಕೊಂಡಿದ್ದಾರೆ. ಶಿರೂ ರಿಗ ಭಾಗ್ಯದ ಬಾಗಿಲು ತೆರೆದಂತಾಗಿದೆ. ಧಾರಾಳ ಮಳೆಯಾಗುವ ಕರಾವಳಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಹೀಗಾಗಿ ಸಮುದ್ರ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದರು.

‘ಸರ್ಕಾರಗಳು ನಗರಗಳಲ್ಲಿ ಸೃಷ್ಟಿಸುವ ನಾಗರಿಕ ಸೌಲಭ್ಯಗಳನ್ನು ಗ್ರಾಮಗಳಲ್ಲಿ ಸೃಷ್ಟಿಸುವುದಿಲ್ಲ. ಗ್ರಾಮೀಣ ಜನರು ದ್ವಿತೀಯ ದರ್ಜೆಯ ನಾಗರಿಕರು ಎಂಬ ಕಲ್ಪನೆಯಿದೆ. ಇದನ್ನು ತೊಡೆದು ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಸರ್ಕಾರದ ಯೋಜನೆಗಳ ಯಶಸ್ಸು ಜನಸಹಭಾಗಿತ್ವ ವನ್ನು ಅವಲಂಬಿಸಿದೆ’ ಎಂದು ಅವರು ಹೇಳಿದರು.

ಪಶು ಆಸ್ಪತ್ರೆ, ಹೆರಿಗೆ ವಿಭಾಗ ಆರಂಭ: ದಾನಿ ಸಯ್ಯದ್ ಅಬ್ದುಲ್ ಖಾದರ್ ಬಾಶು ಗ್ರಾಮದ 100 ಜನರಿಗೆ ದಾನವಾಗಿತ್ತ ದನಗಳನ್ನು ವಿತರಿಸಿದ ಪಶು ಸಂಗೋ ಪನಾ ಸಚಿವ ಟಿ. ಬಿ , ಜಯಚಂದ್ರ ಶಿರೂರಿನಲ್ಲಿ ಪಶು ಆಸ್ಪತ್ರೆ ತೆರೆಯುವ ಭರವಸೆ ನೀಡಿದರೆ, ಆರೋಗ್ಯ ಸಚಿವ ಯು. ಟಿ. ಖಾದರ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 10 ಹಾಸಿಗೆಗಳ ಹೆರಿಗೆ ವಿಭಾಗ ಆರಂಭಿಸುವುದಾಗಿ ತಿಳಿಸಿದರು.

ಅರಣ್ಯ ಸಚಿವ ರಮಾನಾಥ ರೈ ತಮ್ಮ ಇಲಾಖೆಯ ಮೂಲಕ ’ಟ್ರೀ ಪಾರ್ಕ್’ ನಿರ್ಮಿಸುವ, ಕಂಪನಿಗಳ ಸಾಮಾಜಿಕ ಸೇವಾ ನಿಧಿಯಿಂದ ಶಾಲೆಗಳಿಗೆ ಶೌಚಾಲಯ ಕಟ್ಟಿಸಿಕೊಡುವ ಭರವಸೆಯಿತ್ತರು. ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಶಿರೂರು ಅಭಿವೃದ್ಧಿಗೆ ಎಲ್ಲ ವಿಧದ ಬೆಂಬಲ ನೀಡುವುದಾಗಿ ತಿಳಿಸಿದರು.

ಸಂಸದ ಆಸ್ಕರ್ ಫರ್ನಾಂಡೀಸ್ ದಂಪತಿ, ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ದಾನಿ ಸಯ್ಯದ್ ಅಬ್ದುಲ್ ಖಾದರ್ ಬಾಶು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಸ್. ರಾಜು ಪೂಜಾರಿ, ಸಾವಿತ್ರಿ ಅಳ್ವೆಗದ್ದೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮ ಮೇಸ್ತ, ಶಿರೂರು ಅಸೋಸಿಯೇಶನ್ ಅಧ್ಯಕ್ಷ ಮಹಮದ್ ಎನ್. ಮೀರಾನ್ ಸಾಹೇಬ್, ಇತರರು  ಇದ್ದರು. ಪತ್ರಕರ್ತ ಅರುಣಕುಮಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT