ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲಾಯುಗದ ಕುರುಹು ಪತ್ತೆ

Last Updated 28 ಜನವರಿ 2015, 20:06 IST
ಅಕ್ಷರ ಗಾತ್ರ

ಬೆಂಗಳೂರು: ಶ್ರವಣಬೆಳಗೊಳದಲ್ಲಿ ಬಾಹು­ಬಲಿ ಮೂರ್ತಿ ಇರುವ ದೊಡ್ಡ­ಬೆಟ್ಟ­ದಲ್ಲಿ ಹಳೆಯ ಮತ್ತು ಹೊಸ ಶಿಲಾ­ಯುಗದ ಕುರುಹುಗಳು ಪತ್ತೆಯಾಗಿವೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂ­ಕಿನ ಸಂತೇಬಾಚಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ರಂಗಸ್ವಾಮಿ ಅವರು ಈ ಕುರುಹುಗಳನ್ನು ಪತ್ತೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿದ ರಂಗಸ್ವಾಮಿ, ‘ಶ್ರವಣಬೆಳಗೊಳದ ದೊಡ್ಡ­ಬೆಟ್ಟದ ಹಿಂಭಾಗದಲ್ಲಿನ ನಾಗಯ್ಯನ­ಕೊಪ್ಪಲಿನಲ್ಲಿ ಸಂಶೋಧನೆ ನಡೆಸಿದಾಗ ಈ ಕುರುಹುಗಳು ಪತ್ತೆಯಾಗಿವೆ. ಕೈಕೊಡಲಿ,  ಕೆಂಪು ಹಾಗೂ ಕಪ್ಪು ಬಣ್ಣದ ಮಡಿಕೆ ಚೂರುಗಳು, ಹೂಜಿಯ ಕಂಠಗಳು ಸಿಕ್ಕಿವೆ. 10 ವರ್ಷ ಸಂಶೋಧನೆ ನಡೆಸಿ­ದ್ದೇನೆ. ದೊಡ್ಡಬೆಟ್ಟದಲ್ಲಿ ಅರೆಯುವ ಗುಂಡು­­ಕಲ್ಲು, ಕವಣೆ ಕಲ್ಲು, ಬೂದಿ ದಿಬ್ಬಗಳು, ಸಮಾಧಿಗಳು ಪತ್ತೆಯಾಗಿವೆ ಎಂದರು.

ಕರ್ನಾಟಕ ಇತಿಹಾಸ ಅಕಾಡೆಮಿ ಉಪಾಧ್ಯಕ್ಷ ಡಾ.ಎಚ್.ಎಸ್.ಗೋಪಾಲ ರಾವ್‌ ಅವರು ಮಾತನಾಡಿ, ‘ಕ್ರಿ.ಪೂ 3ನೇ ಶತಮಾನದಲ್ಲಿ ಚಂದ್ರಗುಪ್ತ ಮೌರ್ಯ ಶ್ರವಣಬೆಳಗೊಳಕ್ಕೆ ಬಂದ ನಂತರದ ಇತಿಹಾಸ ಮಾತ್ರ ದಾಖಲಾ­ಗಿದೆ.

ಕವಿ ಎಲ್‌.ಎನ್‌.ಮುಕುಂದರಾಜ್ ಮಾತ­ನಾಡಿ, ‘ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರ. ದೊಡ್ಡಬೆಟ್ಟದಲ್ಲಿ ಪುರಾತತ್ವ ಇಲಾಖೆ ಉತ್ಖನನ ಕೈಗೊಂಡರೆ ಇನ್ನಷ್ಟು ಶಾಸನಗಳು ಸಿಗುವ ಸಾಧ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT