ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಟೀಕಿಸಲಾರೆ

ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಶಪಥ
Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ತಾಸಗಾಂವ್‌/ಮಹಾರಾಷ್ಟ್ರ (ಪಿಟಿಐ):  ಬಿಜೆಪಿಯ ಸಖ್ಯ ತೊರೆದ ಶಿವಸೇನಾ ವಿರುದ್ಧ ಚುನಾವಣಾ ಪ್ರಚಾರ ಸಭೆ­ಗಳಲ್ಲಿ ಒಂದೇ ಒಂದು  ಶಬ್ದವನ್ನೂ ಮಾತ­­ನಾಡದಿರಲು ಶಪಥ ಮಾಡಿರು­ವುದಾಗಿ  ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಮೇಲಿನ ಗೌರವ ಮತ್ತು ಅಭಿಮಾನದಿಂದ  ಈ ಸ್ವಯಂ ನಿಯಂತ್ರಣ  ಹೇರಿಕೊಂಡಿರುವುದಾಗಿ  ಅವರು ಸಮಜಾಯಿಷಿ ನೀಡಿದ್ದಾರೆ.  ಸಾಂಗ್ಲಿಯ ತಾಸಗಾಂವ್‌ನಲ್ಲಿ ಭಾನು­ವಾರ ನಡೆದ ಮಹಾರಾಷ್ಟ್ರ ವಿಧಾನ­ಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮರಾಠಿಯಲ್ಲಿ ಮಾತು ಆರಂಭಿಸಿದ ಮೋದಿ, ತಮ್ಮ ಎಂದಿನ ಶೈಲಿಯಲ್ಲಿ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಮೋದಿ ಏಕೆ ತಮ್ಮ ಚುನಾವಣಾ ಭಾಷಣಗಳಲ್ಲಿ ಶಿವಸೇನಾವನ್ನು ಟೀಕಿಸು­ತ್ತಿಲ್ಲ ಎನ್ನುವುದು ರಾಜಕೀಯ ಪಂಡಿತ­ರಿಗೆ ಆಶ್ಚರ್ಯವಾಗಿರಬಹುದು.  ಶಿವ­ಸೇನಾ ವಿರುದ್ಧ ನಾನು ಮಾತನಾಡ­ದಿರುವುದು ಬಾಳಾ ಠಾಕ್ರೆ ಅವರಿಗೆ ಸಲ್ಲಿಸುತ್ತಿರುವ ಗೌರವ’ ಎಂದರು.

‘ಬಾಳಾ ಠಾಕ್ರೆ ಅವರ ಬಗ್ಗೆ ನನಗೆ  ಅಪಾರ ಗೌರವ, ಅಭಿಮಾನವಿದೆ.  ಅವರಿ­­ಲ್ಲದ ಮೊದಲ ಚುನಾವಣೆ ಇದು. ಕೆಲವು ಸಂಗತಿಗಳು ರಾಜಕೀಯವನ್ನೂ ಮೀರಿರುತ್ತವೆ. ಹೀಗಾಗಿ ಎಲ್ಲವನ್ನೂ ರಾಜಕೀಯಕ್ಕೆ ತಳುಕು ಹಾಕುವುದು ಸರಿಯಲ್ಲ’  ಎಂದು ವಿವರಿಸಿದರು.
‘60 ವರ್ಷಗಳಿಂದ ಈ ದೇಶವನ್ನು ಆಳಿದ ಕಾಂಗ್ರೆಸ್‌  ಅಧಿಕಾರಾವಧಿಯಲ್ಲಿ ತಾನು ಮಾಡಿದ್ದಾದರೂ ಏನು  ಎಂಬ ಬಗ್ಗೆ ಇದುವರೆಗೂ ಲೆಕ್ಕ ಕೊಟ್ಟಿಲ್ಲ. ಅಧಿಕಾರಕ್ಕೆ ಬಂದು 60 ದಿನಗಳಾಗಿರುವ ನಮ್ಮಿಂದ  ಕಾಂಗ್ರೆಸ್‌ ಉತ್ತರ ಬಯ­ಸುತ್ತಿದೆ’ ಎಂದರು.

ಭ್ರಷ್ಟಾಚಾರ­ದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ  ಅವಳಿಗಳಿದ್ದಂತೆ.  ದೇಶಕ್ಕಾಗಿ ಹುತಾತ್ಮ­ರಾದ ಕಾರ್ಗಿಲ್‌ ಯೋಧರ ವಿಧವಾ ಪತ್ನಿಯರಿಗೆ ನೀಡಿದ ಮನೆ­ಗಳನ್ನು ಎರಡೂ ಪಕ್ಷಗಳು ಕಿತ್ತು­ಕೊಂಡಿವೆ ಎಂದು  ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT