ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿ ಸ್ಮಾರಕ ನಿರ್ಮಾಣ ನಿರ್ಧಾರ: ಶಿವಸೇನಾ ಸ್ವಾಗತ

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಬಿಜೆಪಿ ಜತೆಗಿನ ಬಹುಕಾಲದ ಮೈತ್ರಿ­­ಯನ್ನು ಕಡಿದುಕೊಂಡ ಶಿವಸೇನಾ ಇದೀಗ ಮಹಾ­ರಾಷ್ಟ್ರ ಸರ್ಕಾರದ ನಿರ್ಧಾರವೊಂದನ್ನು ಸ್ವಾಗತಿಸಿದೆ.

ಇಲ್ಲಿನ ಸಮುದ್ರ ತೀರದಲ್ಲಿ ಛತ್ರಪತಿ ಶಿವಾಜಿ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಅನುಮತಿ ಮತ್ತು ಒಪ್ಪಿಗೆ ಪಡೆ­ಯಲು ಮುಂದಾಗಿರುವ ಬಿಜೆಪಿ ನೇತೃತ್ವದ ಸರ್ಕಾರದ ಕ್ರಮವನ್ನು ಶಿವಸೇನಾ ಸ್ವಾಗತಿಸಿದೆ.

ವಿಧಾನಸಭಾ ಚುನಾ­ವಣೆಯಲ್ಲಿ ಬಿಜೆಪಿ ಸ್ಪಷ್ಟ­ಬಹು­ಮತ ಪಡೆಯದಿದ್ದರೂ ರಾಜ್ಯದ ಹಿತದೃಷ್ಟಿಯಿಂದ ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ‘ಸಾಮ್ನಾ’ ಸಂಪಾದಕೀಯದಲ್ಲಿ ಹೇಳಿದೆ.

ಶಿವಾಜಿ ಮಹಾರಾಜ್‌ ಸ್ಮಾರಕ ನಿರ್ಮಾಣಕ್ಕೆ ಮುಖ್ಯ­ಮಂತ್ರಿ ಅಗತ್ಯ ಕ್ರಮಗಳನ್ನು ಕೈಗೊಂಡರೆ ಇದರ ಕಾಮ­ಗಾರಿ ಕೂಡಲೇ ಮುಗಿಯುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಇಚ್ಛಾಶಕ್ತಿಯನ್ನು ಮೆಚ್ಚುವುದಾಗಿ ಹೇಳಿದೆ.
ಇದೇ 20 ರಂದು ಮುಖ್ಯಮಂತ್ರಿ ಶಿವಾಜಿ ಸ್ಮಾರಕ ನಿರ್ಮಾ­ಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿ ದ್ದರು.

ಶಿವಾಜಿ ಮಹಾರಾಜರ ಹೆಸರನ್ನು ಬಿಜೆಪಿ ಚುನಾ­ವಣಾ ಪ್ರಚಾರದಲ್ಲಿ ಬಳ ಸಿತ್ತು. ಮತದಾರರೂ ಸಹ ಬಹುಮತ ಪಡೆಯುವಷ್ಟು ಮತ ನೀಡಿದ್ದರು. ಆದರೆ ಸ್ಪಷ್ಟ ಬಹುಮತ ಪಡೆಯಲಿಲ್ಲ. ಆದರೂ ಸರ್ಕಾರ ಸರ್ಕಾ­ರವೇ. ಆದರೂ ಸರ್ಕಾರ ರಾಜ್ಯದ ಹಿತ­ದೃಷ್ಟಿ­ಯಲ್ಲಿ ಒಳ್ಳೆಯ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿದೆ.

ರಾಜ್ಯದಲ್ಲಿನ ಹಲವಾರು ಅಭಿವೃದ್ಧಿ ಯೋಜನೆ­ಗಳು ಪರಿಸರ ಅನುಮತಿ ದೊರೆಯದ ಕಾರಣ ನಿಂತಿವೆ. ಒಂದು ವೇಳೆ ಪರಿಸರ ಇಲಾಕೆ ಒಳ್ಳೆಯ ತೀರ್ಮಾನ­ಗ­ಳನ್ನು ಕೈಗೊಂಡರೆ ರಾಜ್ಯದ ಅಭಿವೃದ್ಧಿ ಕಾಮಗಾರಿಗಳು ಆರಂಭವಾ ಗುತ್ತವೆ ಎಂದು ಸಂಪಾದಕೀಯ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT