ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶುವಿಗೂ ತರಬಹುದು ಸಮಸ್ಯೆ

ಗರ್ಭಿಣಿಯರ ಮಧುಮೇಹ
Last Updated 29 ಜನವರಿ 2016, 19:51 IST
ಅಕ್ಷರ ಗಾತ್ರ

ಇಂದು ಶೇಕಡಾ 25ರಷ್ಟು ತಾಯಂದಿರು ವೈದ್ಯಕೀಯ ಭಾಷೆಯಲ್ಲಿ ಹೇಳಲಾಗುವ ಗೆಸ್ಟೇಷನಲ್ ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗರ್ಭಿಣಿಯರು ಇನ್ಸುಲಿನ್ ಪರಿಣಾಮಗಳನ್ನು ಎದುರಿಸಲು ಆಶಕ್ತರಾದಾಗ ಅದರ ಪರಿಣಾಮ ರಕ್ತದಲ್ಲಿ ಅಧಿಕ ಗ್ಲುಕೋಸ್ ಪ್ರಮಾಣ ಹೆಚ್ಚಲು ಕಾರಣವಾಗಿ ಈ ಸಮಸ್ಯೆ ಕಂಡುಬರಲಿದೆ.

‘ಗೆಸ್ಟೇಷನಲ್ ಡಯಾಬಿಟಿಸ್ ಎಂಬುದು ತಾಯಿ ಮತ್ತು ಶಿಶು ಇಬ್ಬರಿಗೂ ಕಾಡುವ ಸಮಸ್ಯೆಯಾಗಿದೆ. ಆರೋಗ್ಯ ಆರೈಕೆಯಲ್ಲಿ ಕೊರತೆ; ಈ ಬಗ್ಗೆ ಗಮನ ಹರಿಸದೇ ಇರುವುದು ಬೆಳೆದಿರುವ ಮಗುವಿಗೆ (ಕೆಲವೊಮ್ಮೆ ಎಂಟು ಪೌಂಡ್‌ಗಳಿಗೂ ಹೆಚ್ಚು ತೂಗುವ) ಸಮಸ್ಯೆ ತರಬಹುದು. ಕೆಲವೊಮ್ಮೆ ಇದು, ಅವಧಿ ಪೂರ್ವ ಪ್ರಸವಕ್ಕೂ ಕಾರಣವಾಗಬಹುದು ಎಂದು ವೈಟ್‌ ಫೀಲ್ಡ್‌ನ  ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಕನ್ಸಲ್ಟಂಟ್ ನ್ಯೂನಾಟಾಲಾಜಿಸ್ಟ್ ಡಾ. ದೀಪಕ್ ಕೆ.ವಾಸುದೇವ್ ಅಭಿಪ್ರಾಯಪಡುತ್ತಾರೆ.

ಅಧಿಕ ತೂಕದ ಮಹಿಳೆಯರು, ಈ ಮೊದಲು ಇಂಥ ಸಮಸ್ಯೆಯಿಂದ ಬಳಲುತ್ತಿರುವುದು, ಅಥವಾ ಇಂಥ ಸಮಸ್ಯೆಯು ಪೋಷಕರು, ಸೋದರರಿಗೆ ಕಾಡುತ್ತಿದ್ದರೆ ಅಥವಾ ಒಂಬತ್ತು ಪೌಂಡ್‌ಗಿಂತಲೂ ಅಧಿಕ ತೂಕದ ಶಿಶುವನ್ನು ಹೊಂದಿದ್ದರೆ ಪ್ರಸವ ಸಂದರ್ಭದಲ್ಲಿ ಸಮಸ್ಯೆ ತರಬಹುದು. ಚಿಕಿತ್ಸೆ ಮಾಡಲಾಗದ, ನಿಯಂತ್ರಿಸಲಾಗದ ಮಧುಮೇಹ ಇದ್ದರೆ ರಕ್ತದಲ್ಲಿ ಗ್ಲುಕೋಸ್ ಅಂಶವಿರುವ ಶಿಶುವಿಗೆ  ಜನನ ನೀಡಬಹುದು ಅಥವಾ ಉಸಿರಾಟದ ಸಮಸ್ಯೆಯಿರುವ ಅಂದರೆ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ (ಆರ್‌ಡಿಎಸ್) ಸಮಸ್ಯೆಯಿಂದ ಬಳಲುವ ಶಿಶುವಿನ ಜನನಕ್ಕೆ ಕಾರಣವಾಗಬಹುದು.

ಅಲ್ಲದೆ, ಟ್ರಾನ್ಸಿಯೆಂಟ್ ಹೈಪರ್ ಟ್ರಾಫಿಕ್ ಕಾರ್ಡಿಯೊ ಮಿಯೊಪಥಿ (ಎಚ್‌ಸಿಎಂ) ಹೆಸರಿನ ಸಮಸ್ಯೆಗೂ ಕಾರಣ ಆಗಲಿದ್ದು ಇಲ್ಲಿ ಹೃದಯ ಮಾಂಸಖಂಡ ಗಟ್ಟಿಯಾಗಿದ್ದು, ಹೃದಯಕ್ಕೆ ರಕ್ತ ಪೂರೈಕೆಯಲ್ಲಿ  ತೊಡಕಾಗಬಹುದು. ಇದರ ಜೊತೆಗೆ ಶಿಶು ಅಧಿಕ ಹಿಮೊಗ್ಲೊಬಿನ್ ಸಮಸ್ಯೆಗೂ ಕಾರಣವಾಗಬಹುದು. ಇದರಿಂದಾಗಿ ಹೃದಯ ನಾಳದಲ್ಲಿಯೂ ತೊಡಕು ಕಂಡುಬರುವ ಸಂಭವವಿದೆ.

ಗರ್ಭಿಣಿ ಇದ್ದಾಗ ಕಟ್ಟುನಿಟ್ಟಾಗಿ ರಕ್ತದಲ್ಲಿನ ಸಕ್ಕರೆ ಅಂಶದ ತಪಾಸಣೆ ಮಾಡಿಸಿಕೊಳ್ಳುವುದು ಶಿಶುವಿನ ಮೇಲೆ ತಾಯಿಯಿಂದ ನಕಾರಾತ್ಮಕ ಪರಿಣಾಮ ಆಗುವುದನ್ನು ಕುಗ್ಗಿಸಲಿದೆ. ಶಿಶುವಿನ  ರಕ್ತದಲ್ಲಿನ ಸಕ್ಕರೆ ಅಂಶದ ನಿಯಮಿತ ತಪಾಸಣೆ ಅಗತ್ಯ. ಇದರಿಂದ ಹೈಪೋಗ್ಲಿಸಿಮಿಯಾ ಸಮಸ್ಯೆ ಇರುವುದನ್ನು ಗುರುತಿಸ ಬಹುದು. ಸುದೀರ್ಘ ಕಾಲ ರಕ್ತದಲ್ಲಿನ ಕಡಿಮೆ ಸಕ್ಕರೆ ಅಂಶದ ತಪಾಸಣೆ ಆಗದಿದ್ದರೆ ಮೆದುಳಿನ ಕಾರ್ಯ ವೈಖರಿ ಮೇಲೂ ಪರಿಣಾಮ ಆಗಲಿದೆ. ಕೆಲ ಶಿಶುಗಳಿಗೆ ರಕ್ತದಲ್ಲಿನ ಸಕ್ಕರೆ ಅಂಶಗಳ ಪರಿಶೀಲನೆ ಅಗತ್ಯವಾಗಿದ್ದು, ಇದರಿಂದ ಉಸಿರಾಟದ ಸಮಸ್ಯೆ, ಅವಧಿ ಪೂರ್ವ ಹೆರಿಗೆ ಇನ್ನಿತರ ಸಮಸ್ಯೆ ಗುರುತಿಸಬಹುದು.

ಒಮ್ಮೆ ಶಿಶುವಿನ ಜನನವಾದ ಬಳಿಕ ಗೆಸ್ಟೇಷನಲ್ ಸಾಮಾನ್ಯವಾಗಿ ಮರೆಯಾಗಲಿದೆ. ಆದರೂ, ಇಂಥ ಸಮಸ್ಯೆ ಕಾಲಾನಂತರದಲ್ಲಿ ಟೈಪ್2 ಡಯಾಬಿಟಿಸ್‌ಗೂ ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ, ಎರಡು-ಮೂರು ವರ್ಷಗಳಿಗೆ ಒಮ್ಮೆ ಟೈಪ್-2 ಡಯಾಬಿಟಿಸ್ ಕುರಿತು ತಪಾಸಣೆ ಅಗತ್ಯವಾಗಿದೆ.

ಗೆಸ್ಟೇಷನಲ್ ಡಯಾಬಿಟಿಸ್ ತಡೆಯಲು
* ಆರೋಗ್ಯಕರ ಆಹಾರಸೇವನೆ ಕ್ರಮ ಅಳವಡಿಸಿಕೊಳ್ಳುವುದು
* ದೈಹಿಕ ವ್ಯಾಯಾಮ
* ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುವುದು
* ಇನ್ಸುಲಿನ್ ಶಾಟ್ಸ್ (ವೈದ್ಯರ ಶಿಫಾರಸು ಆಧರಿಸಿ) ಪಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT