ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರವೇ ಎಐಸಿಸಿ ಪುನರ್‌ರಚನೆ

Last Updated 27 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣ ಗುರುತಿಸುವ ಎ.ಕೆ. ಆಂಟನಿ ನೇತೃತ್ವದ ಗುಂಪು ಜುಲೈ 6ರಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದ ಬಳಿಕ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಪುನರ್­ರಚನೆಯಾಗುವ ಸಾಧ್ಯತೆ ಇದೆ.

ಇತ್ತೀಚಿನ ಲೋಕಸಭಾ ಚುನಾ­ವ­ಣೆ­ಯಲ್ಲಿ ಕೇವಲ 44 ಸ್ಥಾನಗ­ಳನ್ನು ಪಡೆದ ಹೀನಾಯ ಸೋಲಿನ ಬಳಿಕ ಎಐಸಿಸಿಯಲ್ಲಿ ಮೊತ್ತ ಮೊದಲ ಪಕ್ಷ ಪುನರ್‌ಸಂಘಟನೆ ಇದಾಗಲಿದೆ. 

ಪಕ್ಷ ಪುನರ್‌ ಸಂಘಟನೆ ಮೂಲಕ ಹಲವು ಯುವ ಮುಖಗಳು ಎಐಸಿಸಿಯಲ್ಲಿ ಅವಕಾಶ ಪಡೆ­ಯುವ ಸಾಧ್ಯತೆ ಇದೆ. ಹಾಗೆಯೇ ದಶಕಗಳಿಂದ ಎಐಸಿಸಿ­ಯ­ಲ್ಲಿರುವ ಹಲವರು ಸ್ಥಾನ ಕಳೆದುಕೊಳ್ಳ­ಲಿದ್ದಾರೆ ಎಂದು ಪಕ್ಷದ ನಾಯಕ­ರೊಬ್ಬರು ತಿಳಿಸಿದ್ದಾರೆ. ಮಹಾ­ರಾಷ್ಟ್ರ, ಹರಿಯಾಣ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಪಕ್ಷದ ಮುಖ್ಯಸ್ಥರು ಬದಲಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT