ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಮಸೂದೆ ಮಂಡನೆ

ಬಾಡಿಗೆ ತಾಯ್ತನ ನಿಯಂತ್ರಣ
Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಬಾಡಿಗೆ ತಾಯಂದಿರ ಹಿತ ಕಾಯುವ ಹಾಗೂ ಪ್ರನಾಳ ಶಿಶು ತಂತ್ರಜ್ಞಾನ ಬಳಕೆಯನ್ನು ನಿಯಂತ್ರಿಸುವ ಮಸೂದೆ­ಯನ್ನು ಸಂಸ-ತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸ-ಲಾಗುವುದು ಎಂದು ಆರೋಗ್ಯ  ಹಿರಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಮಸೂದೆಯನ್ನು ಸಚಿವ ಸಂಪು-ಟ-ದಲ್ಲಿ ಶೀಘ್ರ ಮಂಡಿಸಲಾಗುವುದು. ಅಲ್ಲಿ ಒಪ್ಪಿಗೆ ದೊರೆತ ಬಳಿಕ,  ಚಳಿ­ಗಾಲದ ಅಧಿವೇಶನ­ದಲ್ಲಿ ಮಂಡಿಸ­ಲಾಗುವುದು  ಎಂದು ಆರೋಗ್ಯ ಸಂಶೋಧನೆ ಕಾರ್ಯ­ದರ್ಶಿ ವಿ.ಎಂ.-ಕಠೋಚ್ ತಿಳಿಸಿದರು.

ಈ ಮಸೂದೆಯಲ್ಲಿ ಬಾಡಿಗೆ ತಾಯಂದಿರು ಎಷ್ಟು ಮಕ್ಕಳಿಗೆ ಜನ್ಮ ನೀಡಬಹುದು, ತಾಯಿಯ ವಯಸ್ಸು, ಪರಿಹಾರದ ಮೊತ್ತ ಮೊದಲಾದವು­ಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೇ ವಿದೇಶಿಯರು ಭಾರತದ ಬಾಡಿಗೆ ತಾಯಂದಿರ ಮೂಲಕ
ಮಕ್ಕ­ಳನ್ನು ಪಡೆಯುವ ಅವಕಾಶಗಳ ಬಗ್ಗೆಯೂ ತಿಳಿಸಲಾಗಿದೆ ಎಂದು ಕಠೋಚ್ ವಿವರಿಸಿದ್ದಾರೆ.

‘ಭಾರತದಲ್ಲಿ ಮಕ್ಕಳಿಗೆ ಜನ್ಮ ನೀಡು­­ವುದು ಉದ್ಯಮ­ವಾಗಿ ಮಾರ್ಪಾ­ಡಾ­ಗಿದೆ.  ಹೀಗಾಗಿ ಬಾಡಿಗೆ ತಾಯಂದಿರ, ಮಗುವಿನ ಹಿತ ಕಾಯಲು ಕಠಿಣ ಕಾನೂನು ಜಾರಿ ಅಗತ್ಯ’  ಎಂದು ಸಾಮಾಜಿಕ ಸಂಶೋಧನಾ  ಕೇಂದ್ರದ ನಿರ್ದೇಶಕಿ ರಂಜನಾ ಕುಮಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT