ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕದಲ್ಲಿ ಇಷ್ಟೊಂದು ತಾರತಮ್ಯ ಏಕೆ?

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು  ₨2500 - ಶುಲ್ಕ ನಿಗದಿ ಮಾಡ­ಲಾಗಿದೆ. ನಿರುದ್ಯೋಗಿ ಅಥವಾ ಅತಿಥಿ ಉಪ­ನ್ಯಾಸಕರಿಗೆ ನೀಡುವ ಸಂಬಳವೇ ₨ 8,000. ಹೀಗಿರುವಾಗ ಹುದ್ದೆಗೆ ಅರ್ಜಿ ಸಲ್ಲಿ­ಸಲು ಈ ಪ್ರಮಾಣದ ಶುಲ್ಕ ನಿಗದಿ ಎಷ್ಟು ಸರಿ?

ಈ ಶುಲ್ಕ ಇತರ ರಾಜ್ಯಗಳಿಗಿಂತ ಸುಮಾರು -7 ಪಟ್ಟು ಹೆಚ್ಚಿಗೆ ಇದೆ. (ದೇಶದಲ್ಲೇ ಅತಿ ಹಿಂದುಳಿದ ರಾಜ್ಯ ಬಿಹಾರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾ­ಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ₨300 -ಶುಲ್ಕ ಇದೆ. ಯು.ಪಿ.ಎಸ್.ಸಿ ನಡೆ­ಸುವ ಐ.ಎ.ಎಸ್ ಪರೀಕ್ಷೆಗೆ ₨50  ಶುಲ್ಕ ಇದೆ).

ಹೀಗಿರುವಾಗ ಅತಿಯಾದ ಶುಲ್ಕದಿಂದ ನಿರು­ದ್ಯೋಗಿ ಪದವೀಧರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಈ ಹುದ್ದೆ­ಯನ್ನು ಅರ್ಜಿ ಶುಲ್ಕ ರಹಿತವಾಗಿಸಬೇಕು ಇಲ್ಲವೇ ಕನಿಷ್ಠ ಶುಲ್ಕ ನಿಗದಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT