ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನ್ಯ ತ್ಯಾಜ್ಯ ಘಟಕ ಸ್ಥಾಪನೆ

‘ಕ್ಲೀನ್ ಯುವರ್ ಸಿಟಿ ಇನ್ ಕರ್ನಾಟಕ’ ಯೋಜನೆಯಲ್ಲಿ ಒಂದು ಹೆಜ್ಜೆ
Last Updated 30 ಮಾರ್ಚ್ 2015, 8:32 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ನಗರಸಭೆಯಿಂದ ಶೂನ್ಯ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಲಾಗಿದೆ. ಈಗಾಗಲೇ, ‘ಕ್ಲೀನ್ ಯುವರ್ ಸಿಟಿ ಇನ್ ಕರ್ನಾಟಕ’ ಯೋಜನೆಗೆ ಚಾಲನೆ ನೀಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲೂ ಈ ಯೋಜನೆ ಅನುಷ್ಠಾನಗೊಂಡಿದೆ. ಆರಂಭದಲ್ಲಿ ಭರ್ಜರಿಯಾಗಿ ಉದ್ಘಾಟನೆ ಕಂಡ ಈ ಯೋಜನೆ ನಿರೀಕ್ಷಿತಮಟ್ಟದಲ್ಲಿ ಅನುಷ್ಠಾನಗೊಳ್ಳಲಿಲ್ಲ ಎನ್ನುವುದು ನಾಗರಿಕರ ಆರೋಪ.

ಪ್ರಸ್ತುತ ಯೋಜನೆಯ ಪರಿಣಾಮ ಕಾರಿ ಅನುಷ್ಠಾನಕ್ಕೆ ನಗರಸಭೆ ಆಡಳಿತ ಮುಂದಾಗಿದೆ. ತ್ಯಾಜ್ಯದ ಮೂಲ ದಲ್ಲಿಯೇ ಕಸವನ್ನು ಹಸಿ ಮತ್ತು ಒಣ ಕಸವೆಂದು ಬೇರ್ಪಡಿ ಸಲಾಗುತ್ತದೆ. ಹಸಿ ಕಸದಿಂದ ಗೊಬ್ಬರ ತಯಾರಿಸಲಾ ಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ 6 ವಾರ್ಡ್‌ ಗಳಿಗೆ ಒಂದು ಶೂನ್ಯ ತ್ಯಾಜ್ಯ ನಿರ್ವಹಣೆ ಘಟಕ ಕಾರ್ಯ ನಿರ್ವಹಿ ಸಲಿದೆ.

ಈ ಘಟಕಗಳಿಂದ ಬರುವ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕಾಗಿ ವಿಶೇಷ ಮಾದರಿಯ ತಳ್ಳುವಗಾಡಿ, ಆಟೊ ಟಿಪ್ಪರ್ ಮತ್ತು ಬಿನ್ಸ್‌ಗಳನ್ನು ₨ 27.50 ಲಕ್ಷ ವೆಚ್ಚದಡಿ ಖರೀದಿಸಲಾಗಿದೆ.

ಪ್ರತಿ ಮನೆಯಿಂದ ಕಸ ಸಂಗ್ರಹಕ್ಕಾಗಿ ನಗರಸಭೆಯಿಂದ ತಲಾ ₨ 4 ಲಕ್ಷ ವೆಚ್ಚದಲ್ಲಿ 5 ಟಾಟಾ ಎಸಿ ವಾಹನ ಖರೀದಿ ಮಾಡಲು ಟೆಂಡರ್ ಕರೆಯ ಲಾಗಿದೆ. ಹೋಟೆಲ್‌, ವಸತಿ ಗೃಹ, ಕಲ್ಯಾಣ ಮಂಟಪ ಸೇರಿದಂತೆ ಇತರೇ ವಾಣಿಜ್ಯ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ಕಸ ಸಂಗ್ರಹಿಸಲು ಟಾಟಾ ಎಸಿ ವಾಹನ ಖರೀದಿಗೆ ನಗರಸಭೆ ಆಡಳಿತ ನಿರ್ಧರಿಸಿದೆ.

₨ 5 ಲಕ್ಷ ವೆಚ್ಚದಲ್ಲಿ ಬಯೊಗ್ಯಾಸ್ ಘಟಕ ನಿರ್ಮಾಣ, ಕಸ ಪ್ರತ್ಯೇಕಿಸಲು ₨ 6 ಲಕ್ಷ ವೆಚ್ಚದಲ್ಲಿ ಸರಳ ಸಂಸ್ಕರಣ ಯಂತ್ರ ಖರೀದಿಗೆ ಟೆಂಡರ್ ಕರೆಯಲಾಗಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು. 

ಜಿಲ್ಲಾ ಕೇಂದ್ರದ ಎಲ್ಲ ವಾರ್ಡಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಲು ನಿರ್ಧರಿಸ ಲಾಗಿದೆ. ಇದಕ್ಕೆ ನಾಗರಿಕರು ಕೂಡ ಸಹಕಾರ ನೀಡಬೇಕು ಎನ್ನುವುದು ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT