ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ.50ರಷ್ಟು ಅಂಗನವಾಡಿಗಳಲ್ಲಿ ಶೌಚಾಲಯವಿಲ್ಲ!

Last Updated 2 ಆಗಸ್ಟ್ 2015, 7:54 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಶೇಕಡ 50ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯವೇ ಇಲ್ಲ...!

ಇದು ವಿರೋಧ ಪಕ್ಷಗಳ ಆರೋಪವಲ್ಲ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಇದು.

ದೇಶದಲ್ಲಿರುವ 12,74,831 ಅಂಗನವಾಡಿ ಕೇಂದ್ರಗಳ ಪೈಕಿ 6,29,541 (49.38%) ಅಂಗನವಾಡಿಗಳು ಮಾತ್ರ ಶೌಚಾಲಯ ಹೊಂದಿವೆ ಎಂಬುದು ಇಲಾಖೆ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.

ದೆಹಲಿ, ಚಂಡೀಘಡ, ಲಕ್ಷದ್ವೀಪ, ಉತ್ತರಾಖಂಡ ಮತ್ತು ನಾಗಾಲ್ಯಾಂಡ್‌ನಲ್ಲಿರುವ ಅಂಗನವಾಡಿ ಕೇಂದ್ರಗಳೆಲ್ಲವೂ ಶೌಚಾಲಯ ಹೊಂದಿವೆ. ಕರ್ನಾಟಕದ ಶೇಕಡ 46.28ರಷ್ಟು ಅಂಗನವಾಡಿಗಳು ಮಾತ್ರ ಶೌಚಾಲಯ ಹೊಂದಿವೆ.

ಉಳಿದಂತೆ ಆಂಧ್ರಪ್ರದೇಶ (37.38%), ತೆಲಂಗಾಣ (21.41%), ಬಿಹಾರ (10.04%), ಜಮ್ಮು ಮತ್ತು ಕಾಶ್ಮೀರ (45.91%), ಮಧ್ಯಪ್ರದೇಶ (47.40%), ಮಣಿಪುರ (37.73%), ಓಡಿಶಾ (46.33%), ರಾಜಾಸ್ತಾನ (26.33%) ಮತ್ತು ಪಶ್ಚಿಮ ಬಂಗಾಳ (40.33%) ರಾಜ್ಯಗಳ ಶೇಕಡಾ 50ಕ್ಕೂ ಕಡಿಮೆಯಷ್ಟು ಅಂಗನವಾಡಿಗಳಲ್ಲಿ ಮಾತ್ರ ಶೌಚಾಲಯಗಳಿವೆ.

ಇದಲ್ಲದೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್‌) ಅನುಷ್ಠಾನಕ್ಕೆ ತರಬೇಕಾದ ಸಿಬ್ಬಂದಿಗಳ ಸಂಖ್ಯೆಯಲ್ಲಿಯೂ ಕೊರತೆ ಇದೆ. ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಎರಡು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT