ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸನ್‌ಗೆ ಐಸಿಸಿ ಅಧ್ಯಕ್ಷ ಸ್ಥಾನ ಖಚಿತ

Last Updated 26 ಜೂನ್ 2014, 7:23 IST
ಅಕ್ಷರ ಗಾತ್ರ

ಮೆಲ್ಬರ್ನ್‌: ನಾರಾಯಣಸ್ವಾಮಿ ಶ್ರೀನಿ­ವಾ­ಸನ್‌ (ಎನ್‌.ಶ್ರೀನಿವಾಸನ್‌) ಅಂತರ­ರಾಷ್ಟ್ರೀಯ ಕ್ರಿಕೆಟ್‌  ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ನೇಮಕಗೊ­ಳ್ಳುವುದು ಖಚಿತಗೊಂಡಿದೆ.

ಗುರು­ವಾರ ಮೆಲ್ಬರ್ನ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ, ‘ಐಸಿಸಿ’ನ 52 ಸದಸ್ಯರು  ಶ್ರೀನಿವಾಸನ್‌ ನೇಮಕ್ಕೆ ಸಂಬಂ­ಧಿ­ಸಿದಂತೆ, ಮಂಡಳಿಯ ನಿಯಮಗಳ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಾರಾಂತ್ಯದಲ್ಲಿ ಐಸಿಸಿ ವಾರ್ಷಿಕ ಸಮ್ಮೇ­ಳನ ಮುಗಿ­ಯಲಿದ್ದು, ಅದರ ಬೆನ್ನಿಗೇ ಶ್ರೀನಿವಾಸನ್‌ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ‘ಐಸಿಸಿ’ ಮಾಧ್ಯಮಗಳಿಗೆ ಬಿಡು­ಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ರೀನಿವಾಸನ್‌ ಅವರ ಹೆಸರನ್ನು ಈ ಉನ್ನತ ಹುದ್ದೆಗೆ ಸೂಚಿ­ಸಿತ್ತು.

ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಕ್ರಿಕೆಟ್‌ ಅಭಿವೃದ್ಧಿಗೆ ಶ್ರಮಿ­ಸುವುದಾಗಿ ಶ್ರೀನಿವಾಸನ್‌ ಹೇಳಿದ್ದಾರೆ. ಇದುವರೆಗೆ ನ್ಯೂಜಿಲೆಂಡ್‌ನ ಆ್ಯಲನ್‌ ಐಸಾಕ್‌ ‘ಐಸಿಸಿ’ನ ಅಧ್ಯಕ್ಷರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT