ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಸ್ತು ಶುಭಮಸ್ತು ಕಲ್ಯಾಣಮಸ್ತು...

Last Updated 1 ಜನವರಿ 2015, 19:30 IST
ಅಕ್ಷರ ಗಾತ್ರ

ಶ್ರುತಿ ನಾಯ್ಡು ನಿರ್ದೇಶನದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀರಸ್ತು ಶುಭಮಸು’ ಧಾರಾವಾಹಿಯ ಕಥೆ ನಾಯಕ -ನಾಯಕಿಯ ವಿವಾಹದ ಘಟ್ಟ ತಲುಪಿದೆ.

ಶ್ರೀನಿಧಿ ಹಾಗೂ ಜಾಹ್ನವಿಯ ವಿವಾಹವನ್ನು ಶ್ರೀರಂಗಪಟ್ಟಣ ಬಳಿಯ ರಮ್ಯ ತಾಣವೊಂದರಲ್ಲಿ ಇತ್ತೀಚೆಗೆ ಚಿತ್ರೀಕರಿಸಲಾಗಿದೆ. ಛಾಯಾಗ್ರಾಹಕ ಕೃಷ್ಣ ಹಾಗೂ ತಂಡದವರು ಮದುವೆ ಸನ್ನಿವೇಶ ಚಿತ್ರೀಕರಿಸಿದರು. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶಿಸಿದರು. ಕಲಾ ನಿರ್ದೇಶಕ ಶಿವು ಮದುವೆಗಾಗಿ ವಿಶೇಷ ಸೆಟ್ ನಿರ್ಮಾಣ ಮಾಡಿದ್ದರು.

ಮದುವೆ ಶಾಸ್ತ್ರಗಳ ಜತೆಗೆ, ಮನರಂಜನೆ ಸೇರಿಸಿ ಈ ಸಂಚಿಕೆಯನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ. ಡಿಸೆಂಬರ್ 29 ರಿಂದ ಜನವರಿ 3ವರೆಗೆ  ರಾತ್ರಿ 7 ಗಂಟೆಗೆ ಮದುವೆಯ ವಿಶೇಷ ಸಂಚಿಕೆಗಳು ಪ್ರಸಾರವಾಗಲಿದೆ. ವಿವಾಹ ಮುಹೂರ್ತದ ಒಂದು ಗಂಟೆಯ ವಿಶೇಷ ಸಂಚಿಕೆ ‘ಶ್ರೀರಸ್ತು ಶುಭಮಸ್ತು ಕಲ್ಯಾಣಮಸ್ತು’ ಜನವರಿ 4ರ ಭಾನುವಾರ ರಾತ್ರಿ 8ರಿಂದ 9ರವರೆಗೆ ಪ್ರಸಾರವಾಗಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT