ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಂಪುರದಲ್ಲಿ ಶೈಲಾ ಮೋಹನ್ ಸುತ್ತಾಟ

ಅಭ್ಯರ್ಥಿಯ ಬೆನ್ನ ಹಿಂದೆ
Last Updated 15 ಏಪ್ರಿಲ್ 2014, 20:24 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಯ ಬಹಿ­ರಂಗ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳವಾರ ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.­ಮೋಹನ್‌ ಅವರ ಪತ್ನಿ ಶೈಲಾ ಮೋಹನ್‌ ನಗರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.

ಶಿವಾಜಿನಗರ, ಚಿಕ್ಕಪೇಟೆ, ಓಕಳಿ­ಪುರ, ಶ್ರೀರಾಂಪುರ,  ಬಡಾವಣೆಗಳಲ್ಲಿ ಪಾದಯಾತ್ರೆ  ನಡೆಸುವ ಮೂಲಕ ಮತದಾರರ ಗಮನ ಸೆಳೆದರು.

ಪ್ರಚಾರ ಕಾರ್ಯಕ್ಕಾಗಿ ಬೆಳಿಗ್ಗೆ 7ಕ್ಕೆ ಮನೆಯಿಂದ ಹೊರಟ ಶೈಲಾ ಮೋಹನ್‌ ಅವರು ನೇರವಾಗಿ ಶಿವಾಜಿ­ನಗರದ ಹಲವು ಬಡಾವಣೆ­ಗಳನ್ನು ಸುತ್ತಿ, ಮತದಾರರಿಗೆ ‘ಮೋಹನ್‌ಗೆ ಮತ ನೀಡಿ’ ಎಂದು ಮನವಿ ಮಾಡಿದರು.

ಅಚ್ಚ ಬಿಳಿಯ ಸಲ್ವಾರ್ ಕಮೀಜ್‌ಗೆ ಕೇಸರಿ ಬಣ್ಣದ ದುಪ್ಪಟ್ಟ ತೊಟ್ಟಿದ್ದ ಶೈಲಾ ಅವರ ಪ್ರಚಾರ ಕಾರ್ಯಕ್ಕೆ ಮಗಳು ಋತಿಕಾ ಜತೆಯಾದರು. ಇವರಿಬ್ಬರು  ಮಹಿಳಾ ಕಾರ್ಯಕರ್ತೆ­ಯರ ಜತೆಗೂಡಿ ಮನೆ ಮನೆಗೆ ಕರಪತ್ರಗಳನ್ನು ಹಂಚಿದರು.

9ಕ್ಕೆ ಮಲ್ಲೇಶ್ವರದಲ್ಲಿರುವ ‘ಶಾಂತಿ­ಸಾಗರ’ದಲ್ಲಿ ‘ಪುಲಾವ್‌’ ತಿಂದು, ಚಹಾ ಹೀರಿದರು.  ನಂತರ ಆಗಷ್ಟೆ ತೆರೆ­ದಿದ್ದ ಶಿವಾಜಿ ನಗರದ ಅಂಗಡಿ ಮುಂಗಟ್ಟುಗಳಲ್ಲಿ ಮತಯಾಚಿಸಿದರು.

ಬೆಳಿಗ್ಗೆ 11.30ರ ಸುಮಾರಿಗೆ ಶ್ರೀರಾಂಪುರದ ಕಿಷ್ಕಿಂಧೆಯಂತಹ ಗಲ್ಲಿ­ಗಲ್ಲಿ­ಗಳಲ್ಲಿ ಪ್ರಚಾರ ಕೈಗೊಂಡರು. ಆಟೊವೊಂದರಲ್ಲಿ ‘ಪಿ.ಸಿ.ಮೋಹನ್‌ ಅವರ ಪತ್ನಿ ಶೈಲಾ ಮೋಹನ್‌ ಅವರು ಮತ ಕೇಳಲು ಮನೆ–ಮನೆಗೆ ಬರು­ತ್ತಿದ್ದಾರೆ’ ಎಂದು ಧ್ವನಿವರ್ಧಕ ಮೂಲಕ

ದಿನದ ಲಹರಿ
*ಬೆಳಿಗ್ಗೆ 5ಗಂಟೆಗೆ ಎದ್ದು, ದೈನಂದಿನ ಕೆಲಸ ಕಾರ್ಯಗಳಿಗೆ ಚಾಲನೆ

*7 ಕ್ಕೆ ಪ್ರಚಾರ ಕಾರ್ಯದ ಸಲುವಾಗಿ ಶಿವಾಜಿನಗರಕ್ಕೆ ಪಯಣ
*9 ಕ್ಕೆ ಮಲ್ಲೇಶ್ವರದಲ್ಲಿರುವ ‘ಶಾಂತಿಸಾಗರ’ದಲ್ಲಿ ಉಪಹಾರ ಸೇವನೆ
*10 ಕ್ಕೆ ಕಾರ್ಯಕರ್ತರೊಂದಿಗೆ ಮಾತುಕತೆ
*ಶ್ರೀರಾಂಪುರ, ಓಕಳಿಪುರದಲ್ಲಿ  ಮತಪ್ರಚಾರ
*ಮಧ್ಯಾಹ್ನ 1 ರಿಂದ 3 ರ ವರೆಗೂ ಚಿಕ್ಕಪೇಟೆಯಲ್ಲಿ ಪ್ರಚಾರ
*ಮಧ್ಯಾಹ್ನ 3 ಕ್ಕೆ ಶಿವಾನಂದ ವೃತ್ತದಲ್ಲಿರುವ ‘ರುಚಿ ರಿಚಿ’ಯಲ್ಲಿ ಸೇವ್‌ ಪೂರಿ ಹಾಗೂ ವಡಪಾವ್‌ ಸೇವನೆ

ಪ್ರಚಾರ ಮಾಡಲಾಯಿತು.  ಶೈಲಾ ಮೋಹನ್‌ ತಂಡ ಈ ಆಟೊವನ್ನು ಹಿಂಬಾಲಿಸಿತು.

ತಮಿಳು, ತೆಲುಗು ಸೇರಿದಂತೆ ಅನ್ಯ­ಭಾಷಿಕರು ಹೆಚ್ಚಿರುವ ಈ ಬಡಾವಣೆ­ಗಳಲ್ಲಿ ಶೈಲಾ ಅವರು ಕನ್ನಡದಲ್ಲಿಯೇ ಮತಯಾಚಿಸಿದರು.   ಮನೆ ಮಾತು ತೆಲುಗು ಆಗಿದ್ದರೂ  ಅಪ್ಪಟ ಕನ್ನಡದಲ್ಲಿ ಮಾತನಾಡಿ ಚಕಿತಗೊಳಿಸಿದರು. ‘ಮನೆ ಮಂದಿಯೆಲ್ಲ ಮೋಹನ್‌ಗೆ ಮತ ನೀಡಬೇಕು. ಈ ಬಾರಿಯೂ ಅವರಿಗೆ ಜನ ಸೇವೆ ಮಾಡುವ ಅವಕಾಶವನ್ನು ಒದಗಿಸಬೇಕು’ ಎಂದು ಮನವಿ ಮಾಡಿದರು.

ಮಧ್ಯಾಹ್ನ 3ರ ವರೆಗೂ ಓಕಳಿಪುರ ಬಡಾವಣೆಗಳು ಸೇರಿದಂತೆ ಚಿಕ್ಕಪೇಟೆ­ಯವರೆಗೂ ಕಾಲ್ನಡಿಗೆಯಲ್ಲಿ ಮನೆಗ-­ಳಿಗೆ ತೆರಳಿ ಭರ್ಜರಿ ಮತಯಾಚಿಸಿದರು. 

ನಂತರ ಶಿವಾನಂದ ವೃತ್ತದಲ್ಲಿರುವ ‘ರುಚಿ ರಿಚಿ’ಯಲ್ಲಿ ಸೇವ್‌ ಪೂರಿ ಹಾಗೂ ವಡಪಾವ್‌ ಸೇವಿಸಿ, ಪ್ರಚಾರಕ್ಕೆ ಅಂತ್ಯ ಹಾಡಿದರು.
ಇದೇ ಸಂದರ್ಭದಲ್ಲಿ  ‘ಪ್ರಜಾವಾಣಿ’ ಯೊಂದಿಗೆ ಮಾತನಾ­ಡಿದ ಅವರು, ‘ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮೋಹನ್‌ ಪರ ನಗರದಾದ್ಯಂತ ಪ್ರಚಾರ ಕೈಗೊಂಡಿದ್ದೇನೆ. ಇದೇನೂ ನನಗೆ ಹೊಸತಲ್ಲ. ಈ ಬಾರಿಯೂ  ಮೋಹನ್‌ ಬಹುಮತದಿಂದ ಆಯ್ಕೆಯಾಗುವ ತುಂಬು ವಿಶ್ವಾಸವಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಒಂದು ತಿಂಗಳಿನಿಂದ ನಗರದ ನಾನಾ ಕಡೆಗಳಲ್ಲಿ ಸುತ್ತಾಡಿದ್ದೇನೆ. ಮಹಿಳಾ  ಮತದಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಪತಿ ರಾಜಕಾರಣದಲ್ಲಿರುವುದು ನನಗೆ ಹೆಚ್ಚಿನ ಸಂತೋಷ ತಂದಿದೆ’ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT