ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಸರಣಿ: ಕಟಕ್‌ನಲ್ಲಿ ಮೊದಲ ಪಂದ್ಯ

Last Updated 25 ಅಕ್ಟೋಬರ್ 2014, 10:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಹಾಗೂ ಶ್ರೀಲಂಕಾ ನಡುವಣ ಐದು ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ನವೆಂಬರ್ 2ರಂದು ಕಟಕ್‌ ಆತಿಥ್ಯ ವಹಿಸಲಿದೆ.

ವೇತನ ವಿವಾದ ಸಂಬಂಧ ವೆಸ್ಟ್‌ ಇಂಡೀಸ್‌ ತಂಡವು ಸರಣಿಯನ್ನು ಅರ್ಧದಲ್ಲೆ ಮೊಟಕುಗೊಳಿಸಿ ಹಿಂತಿರುಗಿದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶ್ರೀಲಂಕಾ ವಿರುದ್ಧ ಅವಸರದಲ್ಲಿ ಸರಣಿ ಆಯೋಜಿಸಿದೆ.

‘ಇಎಸ್‌ಪಿಎನ್‌ಕ್ರಿಕ್‌ಇನ್ಫೋ’ ಪ್ರಕಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸಿರುವ ಸರಣಿಯ ವೇಳಾಪಟ್ಟಿಯನ್ವಯ ಕೊನೆಯ ಹಾಗೂ ಅಂತಿಮ ಪಂದ್ಯ ನವೆಂಬರ್‌ 16ರಂದು ರಾಂಚಿಯಲ್ಲಿ ನಡೆಯಲಿದೆ.

‘ಎರಡು, ಮೂರು ಹಾಗೂ ನಾಲ್ಕನೇ ಪಂದ್ಯಗಳು ನವೆಂಬರ್‌ 6, 9 ಹಾಗೂ 13ರಂದು ಕ್ರಮವಾಗಿ ಅಹಮದಾಬಾದ್‌, ಹೈದರಾಬಾದ್‌ ಹಾಗೂ ಕೋಲ್ಕತ್ತದಲ್ಲಿ ನಡೆಯಲಿವೆ. ಮುಂಬೈನ ಬ್ರಾಬೊರ್ನ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 30ರಂದು ಭಾರತ ‘ಎ’ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನಾಡುವ ಮೂಲಕ ಲಂಕಾ ತಂಡದ ಪ್ರವಾಸ ಆರಂಭಗೊಳ್ಳಲಿದ್ದು, ನವೆಂಬರ್‌ 18ರಂದು ಸರಣಿ ಮುಗಿಸಿ ಕೊಲೊಂಬೊಗೆ ವಾಪಸ್ಸಾಗಲಿದ್ದಾರೆ’ ಎಂದು ಅದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT