ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಭವನಕ್ಕೆ ಅಕ್ರಮ ಪ್ರವೇಶ: ಬಂಧನ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಚಾಕು ಹಿಡಿ­ದು ಶ್ವೇತ ಭವನಕ್ಕೆ ಅಕ್ರಮವಾಗಿ ಪ್ರವೇಶಿ­ಸಿದ ಟೆಕ್ಸಾಸ್‌ ಮೂಲದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಜಗತ್ತಿನಲ್ಲೇ ಅತಿ ಹೆಚ್ಚು ಭದ್ರತೆ ಇರುವ ಶ್ವೇತಭವನಕ್ಕೆ ನುಗ್ಗಲು ಯತ್ನಿಸಿದ ಆರೋಪದಲ್ಲಿ 24 ಗಂಟೆಗಳ ಅವಧಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. 42 ವರ್ಷದ ಒಮರ್‌ ಗೊನ್ಸಾಲೆಜ್‌ ಬಂಧಿತ ವ್ಯಕ್ತಿ. ಶುಕ್ರವಾರದಂದು ಶ್ವೇತ ಭವನಕ್ಕೆ ಬಂದಿದ್ದ ಈತನನ್ನು ಬಂಧಿಸ­ಲಾಗಿತ್ತು.  ಬಳಿಕ ಈತನ ಪ್ಯಾಂಟ್‌ ಜೇಬಿ­­ನಲ್ಲಿ ಚಾಕು ಪತ್ತೆ­ಯಾ­ಗಿತ್ತು. ನಿರ್ಬಂ­ಧಿತ ಕಟ್ಟಡಕ್ಕೆ ಅಕ್ರಮ ಪ್ರವೇಶ ಹಾಗೂ ಅಪಾಯಕಾರಿ ಆಯುಧ ಹೊಂದಿದ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಮೆರಿಕ ಗುಪ್ತಚಾರ ಸಂಸ್ಥೆ ತಿಳಿಸಿದೆ.

ಗೊನ್ಸಾಲೆಜ್‌ ಶ್ವೇತ ಭವನಕ್ಕೆ ದಾಳಿ ನಡೆಸಿದ ಸಮಯದಲ್ಲಿ ಬರಾಕ್‌ ಒಬಾಮ ಹಾಗೂ ಅವರ ಕುಟುಂಬ ಸದ­ಸ್ಯರು ಇರಲಿಲ್ಲ. ನಾಲ್ಕು ನಿಮಿಷಗಳ ಹಿಂದೆ ಒಬಾಮಾ ತಮ್ಮ ಪುತ್ರಿಯರೊಂದಿಗೆ ಸೌತ್‌ಲಾನ್‌­ನ­ಲ್ಲಿರುವ ಶಿಬಿರಕ್ಕೆ ಹೆಲಿಕಾಪ್ಟರ್‌ ಮೂಲಕ ತೆರಳಿದ್ದರು.

ಈ ಘಟನೆ ನಡೆದ ಬೆನ್ನಲ್ಲೇ ಶನಿವಾರ ಮತ್ತೊಬ್ಬ ವ್ಯಕ್ತಿ ತನ್ನ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಶ್ವೇತ ಭವನಕ್ಕೆ ನುಗ್ಗಿದ್ದಾನೆ ಎಂದು ಅಮೆರಿಕ ಗುಪ್ತಚರ ಸೇವೆಯ ಬ್ರಿಯಾನ್‌ ಲೆರಿ ತಿಳಿಸಿದ್ದಾರೆ.

ನ್ಯೂಜೆರ್ಸಿಯ ಕೆವಿನ್‌ ಕಾರ್‌್ ಎಂದು ಗುರುತಿಸಲಾಗಿರುವ ಈತನನ್ನೂ ಬಂಧಿಸಲಾಗಿದೆ. ತಭವನದ 15ನೇ ಹಾಗೂ ಇ ರಸ್ತೆಯಲ್ಲಿ ಪ್ರಕರಣ ನಡೆದಿದ್ದು, ಭದ್ರತಾ ಪಡೆಯವರು ಚಾಲಕನಿಗೆ ವಾಹನ ನಿಲ್ಲಿಸುವಂತೆ ತಿಳಿಸಿದರೂ, ಮಾತನ್ನು ಕೇಳದ ಆತನ ವಿರುದ್ಧ ಅಕ್ರಮ ಪ್ರವೇಶದಡಿಯಲ್ಲಿ ಬಂಧಿಸಲಾಗಿದೆ ಎಂದು ಲೆರಿ ತಿಳಿಸಿದ್ದಾರೆ. ಈ ಎರಡೂ ಘಟನೆಗಳಿಗೆ ಪರಸ್ಪರ ಸಂಬಂಧವಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT