ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಣ್ಮುಖ ದೇವಾಲಯದ ಗೋಪುರ: ಆಕರ್ಷಕ ಕಿರೀಟ

Last Updated 28 ಜುಲೈ 2015, 19:48 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರದ ಶೃಂಗಗಿರಿ ಷಣ್ಮುಖ ದೇವಾಲಯ ಗೋಪುರದ ಕಿರೀಟ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ನೆಲ ಮಟ್ಟದಿಂದ ಸುಮಾರು 250 ಅಡಿ ಎತ್ತರದ ಷಣ್ಮುಖ ದೇವರ ಬೃಹತ್ ಪ್ರತಿಮೆ ಹೊಂದಿರುವ ದೇವಾಲಯ ಗೋಪುರದ ಕಿರೀಟವನ್ನು ಸುಮಾರು 3 ಸಾವಿರ ಹೊಳೆಯುವ ಹರಳುಗಳಿಂದ ಅಲಂಕರಿಸಲಾಗಿದೆ.

ಜೊತೆಗೇ 16 ವಿವಿಧ ವರ್ಣಗಳ  27 ವಾಟ್‌ ಸಾಮರ್ಥ್ಯದ ಆರ್‌ಜಿಬಿ ಎಲ್‌ಇಡಿಗಳನ್ನು ಅಳವಡಿಸಲಾಗಿದೆ. ದಿನದ ವೇಳೆ ಸೂರ್ಯನ ಬೆಳಕಿನಿಂದ ಕಾಮನಬಿಲ್ಲಿನಂತೆ ಕಂಗೊಳಿಸಿದರೆ ರಾತ್ರಿ ಎಲ್‌ಇಡಿ ಲೈಟುಗಳಿಂದ ಝಗಮಗಿಸುತ್ತದೆ.

16 ಬಣ್ಣಗಳು ಸಮ್ಮೀಳನಗೊಂಡು ಬಹುವರ್ಣಗಳಾಗಿ ಮಾರ್ಪಡುವ  ತಂತ್ರಜ್ಞಾನ ಬಳಸಲಾಗಿದ್ದು, ರಾತ್ರಿ ವೇಳೆ ನೋಡುವುದೇ ಕಣ್ಣಿಗೆ ಸೊಗಸು.
ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಇದರ ಉದ್ಘಾಟನೆ ನೆರವೇರಿಸಿದರು. ದೇವಾಲಯದ ಪ್ರಧಾನ ನಿರ್ವಾಹಕ ಡಾ. ಅರುಣಾಚಲಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT