ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಸುದ್ದಿ ಗಳು

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ದಿನೇಶ್ವರ್‌ ಗುಪ್ತಚರ ದಳದ ನಿರ್ದೇಶಕ
ನವದೆಹಲಿ(ಐಎಎನ್‌ಎಸ್‌):
ಕೇಂದ್ರ ಗುಪ್ತ­ಚರ ದಳದ (ಐಬಿ) ನೂತನ ನಿರ್ದೇ­­­ಶಕ­ರನ್ನಾಗಿ ಹಿರಿಯ ಐಪಿಎಸ್‌ ಅಧಿ­ಕಾರಿ ದಿನೇಶ್ವರ್‌ ಶರ್ಮಾ ಅವ­ರನ್ನು ನೇಮಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ಭಾನುವಾರ ತಿಳಿಸಿದೆ. ಈ ಹಿಂದೆ ಗುಪ್ತಚರ ದಳದ ವಿಶೇಷ ನಿರ್ದೇಶಕ ಮತ್ತು ವಿಶೇಷ ಕರ್ತವ್ಯಗಳ ಮೇಲಿನ ಅಧಿ­ಕಾರಿಯಾಗಿದ್ದ ಶರ್ಮಾ ಅವರನ್ನು ಕೇಂದ್ರ ಸಂಪುಟದ ನೇಮ­ಕಾತಿ ಸಮಿತಿ ಹೊಸ ಐಬಿ ಮುಖ್ಯಸ್ಥರನ್ನಾಗಿ ನೇಮಿಸಿದೆ.

ಆಮಿಷವೊಡ್ಡಿ ಮತಾಂತರ: ಆರೋಪ
ಲಖನೌ (ಪಿಟಿಐ):
ವಿಶ್ವಹಿಂದೂ ಪರಿ­ಷತ್‌ ಮತ್ತು ಹಿಂದೂ­­­ಪರ ಸಂಘಟನೆ­ಗಳು ಬಡ ಮುಸ್ಲಿಮ­ರಿಗೆ  ಆಮಿಷಗಳನ್ನು ಒಡ್ಡಿ ಅವ­ರನ್ನು ಮತಾಂತರಕ್ಕೆ ಪ್ರಚೋದಿಸುತ್ತಿವೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂ­ಪಿ­ಎಲ್‌ಬಿ) ಆರೋಪ ಮಾಡಿದೆ.

ಧರ್ಮದ ಆಧಾರದಲ್ಲಿ ಜನರ ಧ್ರುವೀಕ­ರ­ಣ ಮಾಡುವ ಇಂತಹ ಘಟನೆ­ಗಳನ್ನು ಪತ್ತೆ ಮಾಡಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ­ಬೇಕು ಎಂದು ಆಗ್ರಹಿಸಿ­ರುವ ಮಂಡಳಿ, ಸ್ಥಿತಿವಂತ ಮುಸ್ಲಿ­ಮರು ಒಂದುಗೂಡಿ ಬಡ ಮುಸ್ಲಿಮರನ್ನು ತಮ್ಮ ಸಹೋದ­ರ­ರೆಂದು ತಿಳಿದುಕೊಂಡು ಅವರಿಗೆ ನೆರವಿನ ಹಸ್ತ­ಚಾಚಬೇಕು ಎಂದಿದೆ.

ನಕ್ಸಲರಿಗೆ ದಿಗ್ವಿಜಯ್‌ ಕರೆ
ಪಣಜಿ(ಪಿಟಿಐ):
 ‘ಹಿಂಸೆಯ ಮಾರ್ಗ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರಿ’ ಎಂದು  ಕಾಂಗ್ರೆಸ್‌ನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ನಕ್ಸಲರಿಗೆ ಕರೆ ನೀಡಿದ್ದಾರೆ.

ಗೋವಾದಲ್ಲಿ ನಡೆಯುತ್ತಿರುವ ‘ಚಿಂತನಾ ಶಿಬಿರ’ದಲ್ಲಿ ಮಾತನಾಡಿದ ದಿಗ್ವಿಜಯ್‌ ‘ನೇಪಾಳದ ಮಾವೊವಾದಿ­ಗಳು ಹಿಂಸಾ ಮಾರ್ಗ ಬಿಟ್ಟು ರಾಜಕೀಯ ಕ್ಷೇತ್ರದಲ್ಲಿ ತೊಡಗಿರುವ ರೀತಿ, ನಕ್ಸಲರು ತಮ್ಮನ್ನು ತಾವು ರಾಜಕೀಯದಲ್ಲಿ ತೊಡಗಿಸಿ­ಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಬೇಕು’ ಎಂದಿದ್ದಾರೆ.

ವ್ಯಾನ್‌ ಗುದ್ದಿ ಪೊಲೀಸರು ಸಾವು
ನವದೆಹಲಿ:
ವಾಹನ ನಿಲ್ಲಿಸಲು ಸೂಚಿ­ಸಿದ ಪೊಲೀಸ್‌ ಸಿಬ್ಬಂ­ದಿಗೆ ಕಾಲ್‌­ಸೆಂಟರ್‌ ವ್ಯಾನ್‌ ಗುದ್ದಿಸಿದ್ದರಿಂದ ಇಬ್ಬರು ಪೊಲೀ­ಸರು ಮೃತಪಟ್ಟ ಆಘಾತಕಾರಿ ಘಟನೆ ಇಲ್ಲಿ ನಡೆದಿದೆ. ದೆಹಲಿಯ ಕಾಲಿಂದಿ ಕುಂಜ್‌ ಪ್ರದೇಶದಲ್ಲಿ ಶನಿವಾರ ಮಧ್ಯ­­ರಾತ್ರಿ 12.45ರಲ್ಲಿ ­ಈ ಘ­ಟನೆ ನಡೆ­­­ದಿದೆ.

ಜರ್ಮನಿ ಮಹಿಳೆಗೆ ಕಿರುಕುಳ: ಬಂಧನ
ಪಣಜಿ(ಪಿಟಿಐ): 22 ವರ್ಷದ ಜರ್ಮನಿ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ­ದಂತೆ ಆಟೊರಿಕ್ಷಾ ಚಾಲಕ ಚೇತನ್‌ ನಂಶಿಕರ್‌ನನ್ನು ಬಂಧಿಸ­ಲಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರಿಗಳಿಗೆ 10 ವರ್ಷ ಜೈಲು ಶಿಕ್ಷೆ
ನವದೆಹಲಿ (ಪಿಟಿಐ):
15 ವರ್ಷದ ಬಾಲಕಿಯನ್ನು ಅಪಹರಿಸಿ ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದ ಮೂವರಿಗೆ ಇಲ್ಲಿನ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಹಳಿ ತಪ್ಪಿದ ರೈಲು
ಕೋಲ್ಕತ್ತ (ಪಿಟಿಐ):
ಹೌರಾ- ನವ­ದೆಹಲಿ ಪೂರ್ವ ಎಕ್ಸ್‌ಪ್ರೆಸ್‌ ರೈಲಿನ 12 ಬೋಗಿಗಳು ಭಾನುವಾರ ಬೆಳಿಗ್ಗೆ ಹಳಿ ತಪ್ಪಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ರೈಲ್ವೆ ಮೂಲ­ಗಳು ತಿಳಿಸಿವೆ. ಹೌರಾ ನಿಲ್ದಾಣದಿಂದ ಬೆಳಿಗ್ಗೆ 8.15 ಹೊರಟ ರೈಲು, 8.27ಕ್ಕೆ ಲಿಲುವಾ ನಿಲ್ದಾಣ ಪ್ರವೇಶಿಸುತ್ತಿದ್ದಾಗ ಈ ಅಪ­ಘಾತ ಸಂಭವಿಸಿದೆ. ರೈಲು ಬಹಳ ನಿಧಾನಗತಿಯಲ್ಲಿ ಚಲಿ­ಸು­ತ್ತಿದ್ದುದರಿಂದ ಹೆಚ್ಚಿನ ಹಾನಿ ಉಂಟಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT