ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಶಿಕ್ಷಕರ ನೇಮಕ ಯಾವಾಗ?

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ಸಂಗೀತ ವಿಶ್ವವಿದ್ಯಾ­ಲಯ ಸೇರಿದಂತೆ  ಹಲವು ವಿದ್ಯಾಲಯ­ಗಳಿಂದ  ಪ್ರತಿವರ್ಷ  ಹೆಚ್ಚಿನ ಸಂಖ್ಯೆ­ಯಲ್ಲಿ ಸಂಗೀತ ಪದವೀಧರರು ಹೊರ­ಬರುತ್ತಿ­ದ್ದಾರೆ. ಆದರೆ ಅವರಿಗೆ ಸೂಕ್ತ ಉದ್ಯೋಗ ಅವಕಾಶಗಳು ದೊರೆಯು­ತ್ತಿಲ್ಲ.
ಕೆಪಿಎಸ್‌ಸಿಯು ಮೊರಾರ್ಜಿ ವಸತಿ ಶಾಲೆಗಳ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.

ವಿಷಯ­ವಾರು ಶಿಕ್ಷಕರನ್ನೊಳ­ಗೊಂ­ಡಂತೆ  ಆರ್ಟ್‌, ಕ್ರಾಪ್ಟ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗಾಗಿ ಆದೇಶ ಹೊರಡಿಸಿದೆ. ಆದರೆ ಸಂಗೀತ ಶಿಕ್ಷಕರ ನೇಮಕವನ್ನು ಪರಿಗಣಿಸಿಯೇ ಇಲ್ಲ. ರಾಜ್ಯದ ಅನೇಕ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ಅವಶ್ಯಕತೆ ಇದ್ದರೂ ಸರ್ಕಾರವೇಕೆ ಈ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದೆ? ಕೆಪಿ­ಎಸ್‌­ಸಿಯು ಸಂಗೀತ ಶಿಕ್ಷಕರನ್ನು ಕಡೆಗಣಿಸಿ ನೇಮ­ಕಾತಿ ಪ್ರಕ್ರಿಯೆಯನ್ನು ಪ್ರಾರಂಭಿ­ಸಿದ ಕಾರಣ, ಸಂಗೀತದಲ್ಲಿ ಸ್ನಾತ­ಕೋತ್ತರ ಪದವಿ ಮುಗಿಸಿದ ಎಷ್ಟೋ ನಿರು­ದ್ಯೋ­ಗಿಗಳಿಗೆ ಅನ್ಯಾಯ­ವಾಗಿದೆ.

ಸ್ನಾತಕೋ­ತ್ತರ ಪದವಿ ಪೂರೈಸಿ  ಸಂಗೀತ ಶಿಕ್ಷಕರ ಸೇವೆಗೆ ಅರ್ಹರಾ­ಗಿರುವ ಸಾವಿರಾರು ನಿರು­ದ್ಯೋಗಿ ಯುವ­ಕರಿದ್ದು, ಅವರ  ವಯೋಮಿತಿ ಕೂಡ ಮೀರುತ್ತಿದೆ. ಸಂಗೀತ ಪದವೀ­ಧರರಿಗೆ ಸರ್ಕಾರ ನ್ಯಾಯ ಒದಗಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT