ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯ್‌ಗೆ ಗೈರುಹಾಜರಿ ರಜೆ: ತನಿಖೆಗೆ ಸರ್ಕಾರ ಆದೇಶ

Last Updated 26 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಮುಂಬೈ (ಪಿಟಿಐ): ವಾಣಿಜ್ಯ ನಗರಿಯಲ್ಲಿ ೧೯೯೩ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ  ಜೈಲು ಶಿಕ್ಷೆ ಅನುಭ­ವಿಸುತ್ತಿರುವ ಬಾಲಿವುಡ್‌ ನಟ ಸಂಜಯ್‌ ದತ್‌ ಅವರಿಗೆ ಕಾರಾಗೃಹದ ಅಧಿಕಾರಿಗಳು ಪದೇಪದೇ ಗೈರುಹಾಜರಿ ರಜೆ ನೀಡುತ್ತಿ­ರು­ವುದನ್ನು ತನಿಖೆಗೆ ಒಳಪಡಿಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

‘ಗೈರುಹಾಜರಿ ರಜೆಗೆ ನಾಲ್ಕೈದು ಕೈದಿಗಳು ಮನವಿ ಮಾಡಿದ್ದರೂ ದತ್‌ಗೆ ಮಾತ್ರ ಈ ಸೌಲಭ್ಯ ನೀಡಲಾ­ಗುತ್ತಿದೆ ಎನ್ನುವ ಮಾಹಿತಿ ನನಗೆ ಬಂದಿದೆ. ಗೈರುಹಾಜರಿ ರಜೆಗೆ ಮನವಿ ಸಲ್ಲಿಕೆ ಕೈದಿಗಳು ಹಕ್ಕೆಂಬುದು ನಿಜ. ಆದರಯಾವ ಕಾನೂನು ಅಡಿಯಲ್ಲಿ ದತ್‌ ಅವರಿಗೆ ಹೀಗೆ ರಜೆ ನೀಡ­ಲಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳ­ಬೇಕಿದೆ. ದತ್‌ಗೆ ಸಿಕ್ಕಿರುವ ಈ ಸೌಲಭ್ಯ ಉಳಿದವರಿಗೆ ಯಾಕೆ ಸಿಕ್ಕಿಲ್ಲ’ ಎಂದು ಗೃಹ ಸಚಿವ ರಾಮ್‌ ಶಿಂಧೆ ಪ್ರಶ್ನಿಸಿದ್ದಾರೆ.

ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಪುಣೆಯ ಬಂದೀಖಾನೆ  ವಿಭಾಗದ ಡಿಐಜಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
೨೦೧೩ರ ಅಕ್ಟೋಬರ್‌ನಲ್ಲಿ ವೈದ್ಯ­ಕೀಯ ಕಾರಣ ನೀಡಿ ಸಂಜಯ್‌ ದತ್‌ ೨೮ ದಿನಗಳ ಗೈರುಹಾಜರಿ ರಜೆ ಪಡೆದಿದ್ದರು. ಅದೇ ವರ್ಷ ಡಿಸೆಂಬರ್‌­ನಲ್ಲಿ ತಮ್ಮ ಪತ್ನಿ ಮಾನ್ಯತಾ ಅವರ ಅನಾರೋಗ್ಯದ ಕಾರಣ ನೀಡಿ ೨೮ ದಿನಗಳ ರಜೆ ಪಡೆದುಕೊಂಡಿದ್ದರು. ಆದರೆ, ಮಾನ್ಯತಾ ಆ ಸಂದರ್ಭದಲ್ಲಿ ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿತ್ರಗಳು ಮಾಧ್ಯಮ­ದಲ್ಲಿ ಪ್ರಕಟಗೊಂಡಿದ್ದವು. ಇದರಿಂದಾಗಿ ದತ್‌ ಸುಳ್ಳು ಹೇಳಿ ಗೈರುಹಾಜರಿ ರಜೆ ತೆಗೆದುಕೊಂಡಿದ್ದಾರೆ ಎನ್ನುವ ಅನು­ಮಾನ ಬಂದಿತ್ತು.

ಗೈರುಹಾಜರಿ ರಜೆ ಎಂದರೆ...
ಗೈರುಹಾಜರಿ ರಜೆ ಎಂದರೆ ಜೈಲು ಶಿಕ್ಷೆಗೆ ಗುರಿಯಾದ ಕೈದಿಗಳಿಗೆ ನೀಡ­ಲಾಗುವ ರಜೆ ಎಂದು ಅರ್ಥ. ಅಂದರೆ ಈ ಸಂದರ್ಭದಲ್ಲಿ ಕೈದಿಗೆ ಜೈಲಿನಿಂದ ಹೊರಹೋಗಲು ಅವಕಾಶ ನೀಡಲಾ­ಗುತ್ತದೆ. ಆದರೆ, ಎಷ್ಟು ದಿನ ಹೀಗೆ ರಜೆ ಹಾಕಲಾಗುವುದೋ ಅಷ್ಟು ದಿನಗಳ ಶಿಕ್ಷೆಯನ್ನು ನಂತರ ಅನುಭವಿಸ­ಬೇಕಾ­ಗುತ್ತದೆ. ಅಂದರೆ, ಒಟ್ಟಾರೆ ಶಿಕ್ಷೆಯ ಅವಧಿಯಲ್ಲಿ ಯಾವುದೇ ಕಡಿತವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT