ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯ್‌ ದತ್‌ಗೆ 14 ದಿನಗಳ ಫರ್ಲೋ

Last Updated 24 ಡಿಸೆಂಬರ್ 2014, 11:45 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಬಾಲಿವುಡ್ ನಟ ಸಂಜಯ್‌ ದತ್ ಅವರಿಗೆ ಯೆರವಾಡಾ ಜೈಲಿನ ಅಧಿಕಾರಿಗಳು ಬುಧವಾರ 14 ದಿನಗಳ ರಜೆ (ಫರ್ಲೋ) ಮಂಜೂರು ಮಾಡಿದ್ದಾರೆ.

ರಜೆ ಕೋರಿ ಸಂಜಯ್‌ ದತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಪೊಲೀಸ್‌ ಅಧಿಕಾರಿಗಳು ಮಂಗಳವಾರ ಅವರಿಗೆ ರಜೆ ಮಂಜೂರು ಮಾಡಿದ್ದಾರೆ.

‘14 ದಿನಗಳ ಫರ್ಲೋ  (ಇದು ಪೆರೋಲ್ ನಂತಿರುವ ಒಂದು ಸೌಲಭ್ಯ. ಫರ್ಲೋದಲ್ಲಿ ಕೈದಿಗೆ ನೀಡಲಾಗುವ ರಜವನ್ನು ಆತನ ಶಿಕ್ಷಾವಧಿಯಲ್ಲಿ ಕಡಿತಗೊಳಿಸುವುದಿಲ್ಲ) ಮೇಲೆ ಸಂಜಯ್‌ ದತ್‌ ಅವರನ್ನು ಬುಧವಾರ ಬೆಳಿಗ್ಗೆ 9 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಫರ್ಲೋ ಪ್ರತಿ 

ಏನಿದು ಫರ್ಲೋ?
ಫರ್ಲೋ ಅಂದರೆ ಪೆರೋಲ್ ಅಲ್ಲ. ಇವೆರಡೂ ಬೇರೆ. ಆದರೆ ಇವೆರಡೂ 1894ರ ಕಾರಾಗೃಹ ಕಾಯ್ದೆಯ ಕಲಂ 5 (ಎ) ಹಾಗೂ 5 (ಬಿ) ಅಡಿಯಲ್ಲಿ ಕೈದಿಗಳಿಗೆ ದೊರೆಯುವ ಸೌಲಭ್ಯಗಳು. ಫರ್ಲೋ ಮೇಲೆ ಬಿಡುಗಡೆಯಾಗುವ ಕೈದಿಯು ಅನುಮತಿಯೊಂದಿಗೆ ಜೈಲಿನಿಂದ  ಹೊರಗೆ ಆತ ಕಳೆಯುವ ಅವಧಿ ಶಿಕ್ಷಾವಧಿಯಲ್ಲಿ ಪರಿಗಣನೆ ಆಗುವುದಿಲ್ಲ. ಅಂದರೆ ಕೈದಿಗೆ ಎಷ್ಟು ವರ್ಷ ಶಿಕ್ಷೆ ವಿಧಿಸಲಾಗಿರುತ್ತದೆಯೋ ಅದರಲ್ಲಿ ಫರ್ಲೋ ಮೇಲೆ ಪಡೆದ ರಜೆಯನ್ನು ಕಡಿತಗೊಳಿಸುವುದಿಲ್ಲ.

ಕೈದಿಗೂ ಸಿಗುವ ಹಕ್ಕಾಗಿದೆ. ಆದರೆ ಫರ್ಲೋ ಪಡೆಯಲು ದತ್‌ ಅವರು ನೀಡಿದ ಕಾರಣ ನನಗೆ ತಿಳಿದಿಲ್ಲ. ಈ ಸಂಬಂಧ ಪೊಲೀಸರಿಂದ ದೊರೆತ ಅರ್ಜಿಯನ್ನು ಪರಿಗಣಿಸಿ ನಾವು ದತ್‌ ಅವರನ್ನು ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಿದ್ದೇವೆ’ ಎಂದು ಜೈಲು ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮೀರನ್‌ ಬರ್ವಾಂಕರ್‌ ಅವರು ತಿಳಿಸಿದ್ದಾರೆ.

ಮುಂಬೈನಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ 2013 ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆಗೆ ಒಳಗಾಗಿರುವ ಸಂಜಯ್‌ ದತ್‌ ಸದ್ಯ ಪುಣೆಯ ಯರವಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಐದು ವರ್ಷಗಳ ಶಿಕ್ಷೆ ಎದುರಿಸುತ್ತಿರುವ ದತ್ ಅವರು ಈಗಾಗಲೇ 18 ತಿಂಗಳು ಶಿಕ್ಷೆ ಅನುಭವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT