ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೀಪಾ ಸಾಹಸ

Last Updated 27 ಮೇ 2015, 19:30 IST
ಅಕ್ಷರ ಗಾತ್ರ

‘ಇಸೀ ಲೈಫ್‌ ಮೇ’, ‘ದಬಾಂಗ್‌ 2’ ಮತ್ತು ‘ಹೀರೋಪಂತಿ’ ಚಿತ್ರಗಳಲ್ಲಿನ ಪಾತ್ರದ ಮೂಲಕ ಬಾಲಿವುಡ್‌ ಗಲ್ಲಿಯಲ್ಲಿ ಸುದ್ದಿ ಮಾಡಿದ್ದ ನಟಿ ಸಂದೀಪಾ ಧಾರ್‌ ಅವರು ತಮ್ಮ ಮುಂಬರುವ ಚಿತ್ರ ‘7 ಅವರ್ಸ್‌’ನಲ್ಲಿ ಭರ್ಜರಿ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದಲ್ಲಿ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂದೀಪಾ, ಕುಂಗ್‌ ಫೂ ಸ್ಟಾರ್ ಜಾಕಿಚಾನ್‌ ಅವರನ್ನು ಅನುಕರಿಸುವ ಯತ್ನ ಮಾಡಿದ್ದಾರಂತೆ.

ಸಾಹಸ ದೃಶ್ಯಗಳಿಗಾಗಿ ಸಂದೀಪಾ ವಿಶೇಷ ತರಬೇತಿಯನ್ನೂ ಪಡೆದುಕೊಂಡಿದ್ದಾರೆ. ಸುಶಾಂತ್‌ ಸಿಂಗ್‌ ರಜಪೂತ್‌ ಅವರಿಗೆ ತರಬೇತಿ ನೀಡುವ ಕರಣ್‌ ನಗಾರಿ ಅವರೇ ಸಂದೀಪಾ ಅವರಿಗೂ ತರಬೇತಿ ನೀಡಿರುವುದು ವಿಶೇಷ.

‘ಈ ಚಿತ್ರದಲ್ಲಿ ನನ್ನ ಸ್ಟಂಟ್‌ಗಳು ವಿಭಿನ್ನವಾಗಿವೆ. ಮತ್ತು ಅವು ಅಷ್ಟೇ ಚೆನ್ನಾಗಿ ಮೂಡಿಬಂದಿವೆ. ನನ್ನ ಫೈಟ್‌ ದೃಶ್ಯಗಳನ್ನು ನೋಡಿದರೆ ಜಾಕಿಚಾನ್‌ ಅವರ ನೆನಪಾಗುತ್ತದೆ’ ಎಂದು ಅವರೇ ಐಎಎನ್‌ಎಸ್‌ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಸೌರಭ್‌ ವರ್ಮಾ ನಿರ್ದೇಶಿಸಿರುವ ಈ ಚಿತ್ರದಲ್ಲಿ ಶಿವ ಪಂಡಿತ್‌, ವಿಪಿನ್‌ ಶರ್ಮಾ ಮತ್ತು ವರುಣ ಬಡೋಲಾ ಕೂಡ ಅಭಿನಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT