ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ದೀಪಾವಳಿ

Last Updated 24 ಅಕ್ಟೋಬರ್ 2014, 9:07 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನಾದ್ಯಂತ  ನರಕ ಚತುರ್ದಶಿ  ಹಾಗೂ ಬಲಿಪಾಡ್ಯಮಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ತಾಲ್ಲೂಕಿನ ಕಲ್ಯಾ ಗ್ರಾಮದಲ್ಲಿ ಗಾಂಧೀವೇಷಧಾರಿ ಮರಿಯಪ್ಪ ಅವರ ಮನೆಯಂಗಳದಲ್ಲಿ, ಹಸುವಿನ ಸೆಗ-ಣಿಯಲ್ಲಿ ಕಟ್ಟೆಯನ್ನು ಕಟ್ಟಿ, ಹೊಲದಲ್ಲಿಬೆಳೆದಿರುವ ಜೋಳ ಮತ್ತು ರಾಗಿ, ನವಣೆ, ಸಜ್ಜೆ ತೆನೆಗಳಿಂದ ಬಲೀಂದ್ರ ಸ್ವಾಮಿಯನ್ನು ತಯಾರಿಸಿ, ತಂಗಟೆ ಹೂವಿನಿಂದ ಅಲಂಕರಿಸಿ, ಹಸುವಿನ ಹಾಲುತುಪ್ಪವನ್ನು ಸುರಿದು  ಪಶುಪಕ್ಷಿ ಪ್ರಾಣಿ, ಮಾನವರಿಗೆ ಒಳಿ­ತಾಗಲಿ ಎಂದು ಪೂಜಿಸಲಾಯಿತು.

ತಾಲ್ಲೂಕಿನ ತಿಪ್ಪಸಂದ್ರ,ಕುದೂರು, ಸೋಲೂರು, ಮಾಡಬಾಳ್‌, ಚೌಡಿ ಬೇಗೂರು, ಕಣ್ಣೂರು, ಶ್ರೀಗಿರಿಪುರ ಗೊಲ್ಲರಹಟ್ಟಿ, ಹುಲಿಕಲ್‌, ಸುಗ್ಗನಹಳ್ಳಿ, ಗುಡೇಮಾರನ ಹಳ್ಳಿ,  ಸಾವನದುರ್ಗ, ಮತ್ತಿಕೆರೆ, ಅಗಲಕೋಟೆ ಇತರೆಡೆ ದೀಪಾವಳಿ­ಯನ್ನು  ಸಡಗ­ರ­ದಿಂದ ಪಟಾಕಿ ಸಿಡಿಸಿ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT