ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯುಕ್ತ ನಾಮಪದ ಬಳಕೆ

ಇಂಗ್ಲಿಷ್‌ ವ್ಯಾಕರಣ
Last Updated 22 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಬಹಳಷ್ಟು ಸಂಯುಕ್ತ ನಾಮಪದಗಳಲ್ಲಿ ಮೊದಲನೆ ನಾಮಪದವು ಎರಡನೆ ಪದವನ್ನು ವರ್ಣಿಸುತ್ತದೆ ಮತ್ತು ಅವುಗಳು Noun phrase ಗಳಾಗಿರುತ್ತವೆ. ಇದಲ್ಲದೆ ಎರಡನೆ ಪದವು ಹೆಚ್ಚು ಕಡಿಮೆ ಯಾವಾಗಲೂ ಮುಖ್ಯ ಪದಗಳಾಗಿರುತ್ತವೆ. ಸಂಯುಕ್ತ ಪದಗಳು/Compound wordsಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಯುಕ್ತ ನಾಮಪದ/Compound Nounಗಳ ಸಂಖ್ಯೆ ಹೆಚ್ಚಾಗಿರುತ್ತದೆ. (ಮುಂಬರುವ ಪಾಠಗಳಲ್ಲಿ phraseಗಳ ಬಗ್ಗೆ ತಿಳಿಯುವಿರಿ.)

ಪ್ರತ್ಯೇಕ ಪದಗಳು ಒಟ್ಟುಗೂಡಿರುವ ಸಂಯುಕ್ತ ನಾಮಪದಗಳು/Closed form/solid compound nounsಗಳಲ್ಲಿರುವ ಪದಗಳು ಸಾಮಾನ್ಯವಾಗಿ ಚಿಕ್ಕ ಪದಗಳಾಗಿದ್ದು ಸಂಪೂರ್ಣವಾಗಿ ಒಂದು ಪದದಂತೆ ಗೋಚರಿಸುತ್ತವೆ.

ಉದಾಹರಣೆಗೆ: ಗೃಹಣಿ/Housewife, Basketball, Wallpaper.

ಸಂಯುಕ್ತ ನಾಮಪದಗಳನ್ನು ಹಲವಾರು ವಿಧಗಳಲ್ಲಿ ಕಾಣಬಹುದಾಗಿದೆ. ಸಾಮಾನ್ಯವಾಗಿ ಸಂಯುಕ್ತ ನಾಮಪದಗಳಲ್ಲಿ ಎರಡು ಪದಗಳಿರುತ್ತವೆ. ಆದರೆ ಎರಡಕ್ಕಿಂತ ಹೆಚ್ಚು ಪದಗಳು ಕಂಡುಬರುವುದು ವಿರಳ. ಈ ಸಂಯುಕ್ತ ನಾಮಪದಗಳು ಹೆಚ್ಚು ಕಡಿಮೆ ಎಣಿಸಲು ಬರುವ ನಾಮಪದಗಳಾಗಿರುವುದರಿಂದ ಬಹು ವಚನದಲ್ಲಿ ಈ ನಾಮಪದವನ್ನು ಕಾಣಬಹುದಾಗಿದೆ. ಇದಲ್ಲದೆ ಷಷ್ಟಿ ವಿಭಕ್ತಿಯ ರೂಪದಲ್ಲಿಯೂ ಕೂಡ ಈ ಸಂಯುಕ್ತ ನಾಮಪದಗಳನ್ನು ಕಾಣಬಹುದಾಗಿದೆ. (ಮುಂಬರುವ ಪಾಠಗಳಲ್ಲಿ ಷಷ್ಠಿ ವಿಭಕ್ತಿಯ ರೂಪದ ಸಂಯುಕ್ತ ನಾಮಪದಗಳ ರೂಪಿಸುವಿಕೆಯನ್ನು ತಿಳಿಯುವಿರಿ.) ಈ ಕೆಳಗಿನ ಜೋಡಿ ಪದಗಳು ಒಂದು ಪದವಾಗಿ ರೂಪಿತಗೊಂಡಿದ್ದನ್ನು ಗಮನಿಸಿ. ಉದಾಹರಣೆಗಳು: 

ಸಂಯುಕ್ತ ಪದದ ಘಟಕಗಳು/ Compound Elements
ನಾಮಪದ + ನಾಮಪದ (Noun + Noun ):
Bed +room = Bed room/ಮಲಗುವ ಕೋಣೆ, Tennis +ball = Tennis ball/ಟೆನ್ನಿಸ್ ಚೆಂಡು, Road+ accident = Road accident/ರಸ್ತೆ ಅಪಘಾತ, Boy +Friend = Boy friend/ಹುಡುಗ ಸ್ನೇಹಿತ, Police +Man = Police man/ಆರಕ್ಷಕ ಸಿಪಾಯಿ

ನಾಮಪದ + ಕ್ರಿಯಾಪದ (Noun+Verb): Rain +Fall = Rainfall/ಸುರಿಮಳೆ, Hair+Cut = Haircut/ಕ್ಷೌರ, Bus+Stop = Bus stop/ಬಸ್‌ ನಿಲ್ಡಾಣ, Car+Park=Car park/ ಕಾರು ನಿಲ್ಲಿಸುವ ಸ್ಥಳ.

ನಾಮಪದ+ಕ್ರಿಯಾ ವಿಶೇಷಣ(Noun + Adverb): Hanger+On= Hanger-on/ಆಶ್ರಿತ/ ಹಿಂಬಾಲಕ/ ಅನುಯಾಯಿ, Passer+by = Passer-by / ದಾರಿ ಹೋಕ.

ಕ್ರಿಯಾಪದ + ನಾಮಪದ (Verb+Noun): Washing+Machine=Washing machine/ಬಟ್ಟೆ ತೊಳೆಯುವ ಯಂತ್ರ, Driving + License = Driving license/ಚಾಲನೆಯ ಅನುಮತಿ, Swimming+Pool=Swimming pool /ಈಜುಕೊಳ  

ಕ್ರಿಯಾಪದ+ಕ್ರಿಯಾ ವಿಶೇಷಣ (Verb+ Adverb): Look + Out = Look out/ ಕಾಯುವಿಕೆ, Take + Off = Take -off/ ಮೊದಲ ನೆಗೆತ, Draw + Back = Draw back/ ನ್ಯೂನತೆ. 

ಕ್ರಿಯಾ ವಿಶೇಷಣ + ನಾಮಪದ (Adverb + Noun): On+Looker = Onlooker/ಪ್ರೇಕ್ಷಕ, By+Stander= Bystander/ನೋಡುವವ, Hence+Man=Hence man/ನೆಚ್ಚಿನ ಬಂಟ/ ನಂಬಿಕೆಯ ಆನುಯಾಯಿ.

ವಿಶೇಷಣ + ಕ್ರಿಯಾಪದ (Adjective+Verb): Dry+Cleaning=Dry-cleaning/ಶುಷ್ಕ ಶುದ್ಧೀಕರಣ, Public+speaking=Public speaking/ ಸಾರ್ವಜನಿಕವಾಗಿ ಭಾಷಣ,

ವಿಶೇಷಣ + ನಾಮಪದ (Adjective + Noun): Green + House = Greenhouse/ ಹಸಿರುಮನೆ, Soft + Ware = Software/ತಂತ್ರಾಂಶ,  Red + Heat =  Redheat/ಕೆಂಪು ಶಾಖ

ಕ್ರಿಯಾ ವಿಶೇಷಣ + ಕ್ರಿಯಾಪದ (Adverb + Verb): Out+Put=Output/ಉತ್ಪತ್ತಿ, Over + Throw = Over throw/ಸೋಲಿಸುವಿಕೆ, In + Put = Input/ಒಳಸೇರುವಿಕೆ

ಉಪಸರ್ಗಾವ್ಯಯ + ನಾಮಪದ (Preposition +Noun): Under+Ground= Underground/ ಭೂಗತ, Under+World= under world /ಭೂಗತ ಪಾತಕಿ

ಕ್ರಿಯಾಪದ+ಕ್ರಿಯಾವಿಶೇಷಣ (Verb + Adverb): Have+Not= Have-not/ ಹೊಂದಿಲ್ಲದವನು(ಆರ್ಥಿಕವಾಗಿ) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT