ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಹನ ಕೊರತೆ ಪ್ರಧಾನಿ ಕಳವಳ

ಸರ್ಕಾರಕ್ಕೆ 30 ದಿನ
Last Updated 26 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ:  ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿ­ಕಾರ ಚುಕ್ಕಾಣಿ ಹಿಡಿದು 30 ದಿನಗಳು ಪೂರ್ಣಗೊಂಡ ಹೊತ್ತಿ­ನಲ್ಲಿ ದೇಶಕ್ಕೆ ಬಹಿರಂಗ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದಲ್ಲಿ ಸಕಾ­ರಾತ್ಮಕ ಬದಲಾವಣೆ ತರಬೇಕೆ­ನ್ನುವ ನಮ್ಮ ಉದ್ದೇಶ ಹಾಗೂ  ಪ್ರಾಮಾ­­ಣಿಕತೆ­ಯನ್ನು ಜನರಿಗೆ ಅರ್ಥ­ಮಾಡಿಸುವಲ್ಲಿ ನಾವು ಸೋತಿದ್ದೇವೆ’ ಎಂದು ಆತ್ಮಾವ­ಲೋಕನ ಮಾಡಿ­ಕೊಂಡಿದ್ದಾರೆ.

‘ನಾನು ಯಾ­ರನ್ನೂ ದೂಷಿ­ಸು­ವುದಿಲ್ಲ. ಆದರೆ, ಸರಿ­ಯಾದ ವಿಷ­ಯ­­ವನ್ನು ಸರಿ­ಯಾದ ಸಮಯ­ದಲ್ಲಿ ಸರಿ­ಯಾದ ಜನರಿಗೆ ತಲುಪಿಸಲು ನಾವು ವ್ಯವಸ್ಥೆ­ಯನ್ನು ಬಲಪಡಿಸಬೇಕಿದೆ. ಆಗ ಮಾತ್ರ ಬದಲಾವಣೆ ಸಾಧ್ಯ’ ಎಂದು ಮೋದಿ ಅವರು ಆತ್ಮವಿಶ್ವಾಸದಿಂದ ಹೇಳಿಕೊಂಡಿ­ದ್ದಾರೆ.

‘ದೆಹಲಿಯಲ್ಲಿ ನನ್ನ ಮುಂದೆ ದೊಡ್ಡ ಸವಾಲೇ ಇದೆ. ನಮ್ಮ ಉದ್ದೇಶ ಹಾಗೂ ಕಳಕಳಿ­ಯನ್ನು ಆಯ್ದ ಗುಂಪಿಗೆ ತಲುಪಿಸ­ಬೇಕಾಗಿದೆ.  ಇವರಲ್ಲಿ ಕೆಲ­­ವರು ಸರ್ಕಾ­ರದ ಭಾಗವಾಗಿ­ದ್ದಾರೆ. ಮತ್ತೆ ಕೆಲವರು ಸರ್ಕಾರಿ ವ್ಯವ­ಸ್ಥೆಯ ಹೊರಗಿದ್ದಾರೆ. ಈ ಒಂದು ತಿಂಗಳಲ್ಲಿ ನಮ್ಮ ಸರ್ಕಾ­ರಕ್ಕೆ ಸಂಬಧವೇ ಇಲ್ಲದಿದ್ದರೂ ಕೆಲ­ವು ಅನಗತ್ಯ ವಿವಾದಗಳು ಹುಟ್ಟಿ­ಕೊಂಡವು’ ಎಂದೂ ಅವರು ತಮ್ಮ ವೆಬ್‌ಸೈಟ್‌­ನಲ್ಲಿ (www.narendramodi.in) ಬರೆದಿ­ದ್ದಾರೆ. ಆ ವಿವಾದಗಳ ಬಗ್ಗೆ ವಿವರಣೆ ನೀಡಿಲ್ಲ.

ಮೋದಿ ವೆಬ್‌ಸೈಟ್‌ನಲ್ಲಿ ಬರೆದಿದ್ದೇನು...?
‘30 ದಿನಗಳ ಕೆಲಸ ತೃಪ್ತಿ ತಂದಿದೆ. ರಾಷ್ಟ್ರೀಯ ಹಿತಾಸಕ್ತಿ ಗಮನದ­ಲ್ಲಿಟ್ಟು­ಕೊಂಡು ನಿರ್ಧಾರ ತೆಗೆದು­ಕೊಂಡಿ­ದ್ದೇವೆ. ಭವಿಷ್ಯದಲ್ಲಿ ಭಾರತ­­ವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಬದ್ಧತೆ ನಮಗಿದೆ. ಪ್ರತಿ ಸರ್ಕಾರಕ್ಕೂ ಕೆಲಸದಲ್ಲಿ ತೊಡ­ಗಿ­ಕೊಳ್ಳಲು ಸ್ವಲ್ಪ ಸಮಯ ಹಿಡಿ­ಯು­ತ್ತದೆ. ಮಾಧ್ಯಮ­ಗಳ ಭಾಷೆ­ಯಲ್ಲಿ ಹೇಳುವುದಾ­ದರೆ ಅದು “ಮಧುಚಂದ್ರ ಕಾಲ”. ಈ ಹಿಂದಿನ ಸರ್ಕಾರ­ಗಳಿಗೆ 100 ದಿನಗಳವರೆಗೂ ಇಂಥ ಅವಕಾಶ ಸಿಕ್ಕಿತ್ತು. ನನಗೆ ಆ ಭಾಗ್ಯ ಸಿಗಲಿಲ್ಲ. 100 ದಿನಗಳನ್ನು ಮರೆತು­ಬಿಡಿ, ಅಧಿಕಾರ ಸ್ವೀಕರಿಸಿ ನೂರು ತಾಸುಗ­ಳಲ್ಲಿಯೇ

ಯೂ ಟ್ಯೂಬ್‌ನಲ್ಲಿ ಸಾಧನೆಗಳ ವಿಡಿಯೊ
ಎನ್‌ಡಿಎ ಸರ್ಕಾರದ ಮೊದಲ ತಿಂಗಳ ಸಾಧನೆ  ಬಿಂಬಿಸುವ ಐದೂವರೆ ನಿಮಿಷಗಳ ವಿಡಿಯೊ ತುಣುಕನ್ನು ಯೂಟ್ಯೂಬ್‌ ಮತ್ತಿತರ ಸಾಮಾಜಿಕ ತಾಣಗಳಲ್ಲಿ ಸರ್ಕಾರ ಬಿಡುಗಡೆ ಮಾಡಿದೆ.

ನಮ್ಮ ವಿರುದ್ಧ ಆರೋಪಗಳು ಶುರು­ವಾದವು. ವಿವಾದ ಹಾಗೂ ಆರೋಪಗಳಿಗೆ ತಲೆ ಕೆಡಿಸಿ­ಕೊಳ್ಳ­ಬೇಕಾಗಿಲ್ಲ. ದೇಶ ಸೇವೆಯ ಏಕೈಕ ಗುರಿಯೊಂದಿಗೆ ಕೆಲಸ ಮಾಡುವಾಗ ಈವೆಲ್ಲ ಏನೂ ಅಲ್ಲ. ಆದ್ದರಿಂದ ನಾನು ಕೆಲಸ ಮಾಡು­ತ್ತಲೇ ಇರುತ್ತೇನೆ. ಅದೇ ನನಗೆ ಹೆಚ್ಚು ತೃಪ್ತಿ ಕೊಡುತ್ತದೆ’.

‘ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿ­ದಾಗ ನಾನು ಈ ಜಾಗಕ್ಕೆ ಹೊಸಬ ಎಂದು ಅಂದು­ಕೊಂ­ಡಿದ್ದೆ.   ಕೇಂದ್ರ ಸರ್ಕಾರದ ಕಾರ್ಯವಿಧಾ­ನದ ಸೂಕ್ಷ್ಮ ­ಅರಿತುಕೊಳ್ಳಲು ನನಗೆ ಏನಿಲ್ಲ­ವೆಂ­ದರೂ ವರ್ಷ ಅಥವಾ ಎರಡು ವರ್ಷ ಬೇಕಾಗು­ತ್ತದೆ ಎಂದು ಕೆಲವರು ನಂಬಿದ್ದರು. ಅದೃಷ್ಟವ­ಶಾತ್‌  ಈಗ ಆ ರೀತಿಯ ಭಾವನೆ ನನ್ನನ್ನು ಕಾಡು­ತ್ತಿಲ್ಲ.  ನನ್ನ ಆತ್ಮವಿಶ್ವಾಸ ಹಾಗೂ ಛಲ ಮತ್ತಷ್ಟು ಹೆಚ್ಚಿದೆ’.

‘ಕಳೆದ ಒಂದು ತಿಂಗಳಿನಲ್ಲಿ ನಮ್ಮ ಸರ್ಕಾರ ಪ್ರತಿ­ಯೊಂದು ಕ್ಷಣವನ್ನೂ ಜನರ ಶ್ರೇಯೋ­ಭಿವೃದ್ದಿಗೆ ಮೀಸಲಿಟ್ಟಿದೆ. ಜನರ ಬೆಂಬಲ ಹಾಗೂ ಪ್ರೀತಿ ಅಭೂತ­ಪೂರ್ವವಾದುದು. ಇದು, ಇನ್ನೂ ಹೆಚ್ಚು ಪರಿಶ್ರಮದಿಂದ ಕೆಲಸ ಮಾಡು­ವುದಕ್ಕೆ ನಮಗೆ ಸ್ಫೂರ್ತಿಯಾಗಿದೆ’ ಎಂದು ಮೋದಿ ಹೇಳಿದ್ದಾರೆ.

ತುರ್ತು ಪರಿಸ್ಥಿತಿ ಉಲ್ಲೇಖ: ‘39 ವರ್ಷಗಳ ಹಿಂದೆ  ಇದೇ ದಿನ (ಜೂನ್‌ 26) ದೇಶದಲ್ಲಿ ತುರ್ತು ಪರಿಸ್ಥಿತಿ ಹೇರ­ಲಾಗಿತ್ತು. ಅದು ನಮ್ಮ ಇತಿ­ಹಾ­ಸದ ಕರಾಳ ಅವಧಿ. ಅಭಿವ್ಯಕ್ತಿ ಸ್ವಾತಂತ್ರ್ಯ­ವನ್ನು ದಮನ ಮಾಡಿದಲ್ಲಿ, ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿದಲ್ಲಿ ಏನಾಗುತ್ತದೆ ಎನ್ನುವು­ದನ್ನು ಆ ಅವಧಿ ನೆನಪಿ­ಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿದ್ದರೆ ನಮ್ಮ ಪ್ರಜಾತಂತ್ರ ಉಳಿಯದು’ ಎಂದೂ  ಅವರು ಎಚ್ಚರಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT